ಚೆನ್ನೈ (ತಮಿಳುನಾಡು): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2013ರಲ್ಲಿ ದೋಷಿ ಜನಪ್ರತಿನಿಧಿಗಳನ್ನು ತ್ವರಿತ ಅನರ್ಹತೆಯಿಂದ ರಕ್ಷಿಸುವ ಕ್ರಮವನ್ನು ವಿರೋಧಿಸಿದ್ದರು ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ. ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಮರಣಶಾಸನವಾಗಿದೆ ಎಂಬ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿಕೆಗೆ ಅಣ್ಣಾಮಲೈ ಹಳೆಯ ಘಟನೆಯನ್ನು ನೆನಪಿಸಿದ್ದಾರೆ.
ಇದನ್ನೂ ಓದಿ: 'ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ': ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಪ್ರತಿಪಕ್ಷದ ನಾಯಕರು
ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ಕುರಿತ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಗುಜರಾತ್ನ ಸೂರತ್ ನ್ಯಾಯಾಲಯವು ಗುರುವಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಖಂಡಿಸಿ ಸಿಎಂ ಸ್ಟಾಲಿನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
-
Knee Jerk responder to a troll video; History says this Thiru @mkstalin
— K.Annamalai (@annamalai_k) March 25, 2023 " class="align-text-top noRightClick twitterSection" data="
On September 28, 2013, Thiru @RahulGandhi tore the ordinance that gave 3 months' time to MLAs & MPs from disqualification & called it “complete nonsense”. (1/4) https://t.co/vcOGcgl1St
">Knee Jerk responder to a troll video; History says this Thiru @mkstalin
— K.Annamalai (@annamalai_k) March 25, 2023
On September 28, 2013, Thiru @RahulGandhi tore the ordinance that gave 3 months' time to MLAs & MPs from disqualification & called it “complete nonsense”. (1/4) https://t.co/vcOGcgl1StKnee Jerk responder to a troll video; History says this Thiru @mkstalin
— K.Annamalai (@annamalai_k) March 25, 2023
On September 28, 2013, Thiru @RahulGandhi tore the ordinance that gave 3 months' time to MLAs & MPs from disqualification & called it “complete nonsense”. (1/4) https://t.co/vcOGcgl1St
"ಇತಿಹಾಸ ಹೇಳುವುದು ಹೀಗೆ: 2013ರ ಸೆಪ್ಟೆಂಬರ್ 28ರಂದು ರಾಹುಲ್ ಗಾಂಧಿ ಅವರು ಶಾಸಕರು ಮತ್ತು ಸಂಸದರ ಅನರ್ಹತೆಗೆ ಮೂರು ತಿಂಗಳ ಕಾಲಾವಕಾಶ ನೀಡಿದ ಸುಗ್ರೀವಾಜ್ಞೆಯನ್ನು ಹರಿದು ಸಂಪೂರ್ಣ ಅಸಂಬದ್ಧವೆಂದು ಕರೆದ್ದರು'' ಎಂದು ಬಿಜೆಪಿ ನಾಯಕ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ''ದೇಶದ ಒಬಿಸಿ ಮತ್ತು ತೇಲಿ ಸಮುದಾಯಕ್ಕೆ ಮಾಡಿದ ಅವಮಾನ ಮತ್ತು ಕ್ಷಮೆಯಾಚಿಸದ ಕಾರಣಕ್ಕಾಗಿ ನ್ಯಾಯಾಲಯದ ತೀರ್ಪಿನ ನಂತರ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ'' ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಇದನ್ನೂ ಓದಿ: ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?
ಮುಂದುವರೆದು, ''ಕ್ಷಮೆಯಾಚಿಸುವುದು ರಾಹುಲ್ ಗಾಂಧಿ ಅಭ್ಯಾಸವಾಗಿದೆ. ಈಗ ತೀರ್ಪು ಸುಳ್ಳುಗಾರರಾದ ಡಿಎಂಕೆಯನ್ನು ಕೆರಳಿಸಿದೆ. 2019ರಲ್ಲಿ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಕುರಿತು ಸುಳ್ಳು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್‌ಗೆ ಮೂರು ಪುಟಗಳ ಬೇಷರತ್ ಕ್ಷಮೆಯಾಚನೆಯನ್ನು ಸಲ್ಲಿಸಿದ್ದರು'' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲ, ''ಸ್ಟಾಲಿನ್ ಅವರೇ ನಿಮ್ಮ ಸರ್ಕಾರವನ್ನು ವಜಾ ಮಾಡಿದ ಪಕ್ಷದೊಂದಿಗೆ ನೀವು ಇಂದು ಮೈತ್ರಿ ಮಾಡಿಕೊಂಡಿದ್ದೀರಿ ಎಂಬುದನ್ನು ಇತಿಹಾಸವು ನಿಮಗೆ ನೆನಪಿಸಬೇಕಿತ್ತು. ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ಜನರಂತೆ ಮಾರುವೇಷದಲ್ಲಿರುವ ನಿಮ್ಮಂತಹ ನಿರಂಕುಶಾಧಿಕಾರಿಗಳಿಗೆ ಏನಾಗಿದೆ ಎಂದು ನಮಗೆ ಗೊತ್ತಾಗಿದೆ'' ಎಂದು ಅಣ್ಣಾಮಲೈ ಕುಟುಕಿದ್ದಾರೆ.
2013ರಲ್ಲಿ ರಾಹುಲ್ ಮಾಡಿದ್ದೇನು?: ಲಿಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ಅನ್ನು ರದ್ದುಗೊಳಿಸಿತ್ತು. 2013ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (4)ರ ಪ್ರಕಾರ, ಹಾಲಿ ಸಂಸದರು ಮತ್ತು ಶಾಸಕರು ಕೆಲವು ಅಪರಾಧಗಳಿಗೆ ಶಿಕ್ಷೆಗೊಳಗಾದ ಸಂದರ್ಭದಲ್ಲಿ ಅನರ್ಹತೆಯಿಂದ ಹೆಚ್ಚುವರಿ ರಕ್ಷಣೆಯನ್ನು ಹೊಂದುವ ಸುಗ್ರೀವಾಜ್ಞೆ ಜಾರಿಗೆ ತಂದಿತ್ತು.
ಆದರೆ, 2013ರ ಸೆಪ್ಟೆಂಬರ್ 28ರಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ತಮ್ಮದೇ ಸರ್ಕಾರ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದರು. ಅಲ್ಲದೇ, ಈ ಸುಗ್ರೀವಾಜ್ಞೆಯನ್ನು "ಸಂಪೂರ್ಣ ಅಸಂಬದ್ಧ" ಎಂದು ಕರೆದಿದ್ದರು. ನಂತರ ಅಂತಿಮವಾಗಿ ಸುಗ್ರೀವಾಜ್ಞೆಯನ್ನು ಹಿಂಪಡೆಯಲಾಗಿತ್ತು. ಒಂದು ವೇಳೆ ಈ ಸುಗ್ರೀವಾಜ್ಞೆ ಜಾರಿಯಲ್ಲಿದ್ದರೆ, ದೋಷಿ ಎಂದು ಪ್ರಕಟಿಸಿದ ನಂತರವೂ ಮೂರು ತಿಂಗಳ ಅವಧಿಯವರೆಗೂ ಹಾಲಿ ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ: ಜನಪ್ರತಿನಿಧಿಗಳ ಸ್ವಯಂಚಾಲಿತ ಅನರ್ಹತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಈ ಅರ್ಜಿಯಲ್ಲಿನ ಉಲ್ಲೇಖಗಳೇನು?