ಹೈದರಾಬಾದ್(ತೆಲಂಗಾಣ): ಕೇರಳದಿಂದ ಪ್ರಾರಂಭವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯಕ್ಕೆ ತೆಲಂಗಾಣ ರಾಜ್ಯದಲ್ಲಿ ಸಾಗುತ್ತಿದೆ. ಈ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಜನಸಾಮನ್ಯರೊಂದಿಗೆ ಬೆರೆತು, ಕಾಲ ಕಳೆಯುತ್ತ ರಾಹುಲ್ ಹೆಜ್ಜೆ ಹಾಕುತ್ತಿದ್ದಾರೆ.
ಗುರುವಾರ ಭಾರತ್ ಜೋಡೋ ಯಾತ್ರೆಯ ಸುಂದರ ಕ್ಷಣವೊಂದನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಎದುರು ಬಾಲಕನೊಬ್ಬ ಕರಾಟೆ ಪ್ರದರ್ಶಿಸುವಾಗ ವಿದ್ಯಾರ್ಥಿಯ ಕರಾಟೆ ಪಟ್ಟುಗಳನ್ನು ರಾಹುಲ್ ಸರಿಪಡಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್ ಗಾಂಧಿ ರನ್ನಿಂಗ್ ರೇಸ್
'ತಂತ್ರವು ತಪ್ಪಾಗಿದ್ದರೆ ದೇಶವು ವಿನಾಶದ ಹಾದಿಗೆ ಹೋಗುತ್ತದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಅವರು ಬಾಲಕನಿಗೆ ಸರಿಯಾದ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪರೋಕ್ಷವಾಗಿ ಬಿಜೆಪಿ ಕಾಲೆಳೆದಿದೆ.
-
टेक्निक गलत हो तो देश तबाही के रास्ते पर चला जाता है, ये तो बच्चों के भविष्य का सवाल ठहरा।
— Congress (@INCIndia) November 3, 2022 " class="align-text-top noRightClick twitterSection" data="
एक बच्चे को सही टेक्निक बताते @RahulGandhi जी...#BharatJodoYatra pic.twitter.com/YTsyXP7T7J
">टेक्निक गलत हो तो देश तबाही के रास्ते पर चला जाता है, ये तो बच्चों के भविष्य का सवाल ठहरा।
— Congress (@INCIndia) November 3, 2022
एक बच्चे को सही टेक्निक बताते @RahulGandhi जी...#BharatJodoYatra pic.twitter.com/YTsyXP7T7Jटेक्निक गलत हो तो देश तबाही के रास्ते पर चला जाता है, ये तो बच्चों के भविष्य का सवाल ठहरा।
— Congress (@INCIndia) November 3, 2022
एक बच्चे को सही टेक्निक बताते @RahulGandhi जी...#BharatJodoYatra pic.twitter.com/YTsyXP7T7J
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ರಾಹುಲ್ ಜೊತೆ ಹೆಜ್ಜೆ ಹಾಕಿದ ನಟಿ ಪೂಜಾ ಭಟ್
ಇನ್ನು, ಭಾರತ್ ಜೋಡೋ ಯಾತ್ರೆಯು ಮುತ್ತಿನನಗರಿ ಹೈದರಾಬಾದ್‌ನಲ್ಲಿದ್ದು, ಬುಧವಾರ ಬಾಲಿವುಡ್ ನಟಿ ಹಾಗೂ ಚಲನಚಿತ್ರ ನಿರ್ಮಾಪಕಿ ಪೂಜಾ ಭಟ್ ರಾಹುಲ್ ಗಾಂಧಿಗೆ ಸಾಥ್ ನೀಡಿ ಸುಮಾರು 10.5 ಕಿ.ಮೀ ನಡೆದರು. ಮಂಗಳವಾರ ಹೈದರಾಬಾದ್‌ನ ಚಾರ್ ಮಿನಾರ್ ಬಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗಿತ್ತು.