ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳಿಗೆ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಯುವಕರಿಗಾಗಿ ರೂಪಿಸಿರುವ ಪ್ರಣಾಳಿಕೆಯನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಇಂದು ಬಿಡುಗಡೆ ಮಾಡಿದ್ದಾರೆ.
ಪ್ರಾಣಾಳಿಕೆಗೆ ಭಾರ್ತಿ ವಿಧಾನ್ ಎಂದು ಹೆಸರಿಡಲಾಗಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳು ಕಲ್ಪಿಸುವುದೇ ಪ್ರಣಾಳಿಕೆಯ ಉದ್ದೇಶವಾಗಿದೆ. ಯುವಕರ ನಂತರ ಮಹಿಳೆಯರಿಗೂ ಪ್ರಣಾಳಿಕೆಯನ್ನು ತರಲಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ವೇಳೆ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಯೂತ್ ಮ್ಯಾನಿಫೆಸ್ಟೋದಲ್ಲಿ ಪ್ರಮುಖ ವಿಷಯಗಳು...
- ಮಹಿಳೆಯರಿಗೆ 8 ಲಕ್ಷ ಸರ್ಕಾರಿ ಹುದ್ದೆಗಳು
- 20 ಲಕ್ಷ ಸರ್ಕಾರಿ ಉದ್ಯೋಗ ಖಾತರಿ
- 1.50 ಲಕ್ಷ ಶಿಕ್ಷಕರ ಖಾಲಿ ಹುದ್ದೆ ಭರ್ತಿ
- 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಉದ್ಯಮಿಗಳಿಗೆ ಆದ್ಯತೆ
- ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶುಲ್ಕ ಮನ್ನಾ
- ಸೀಡ್ ಸ್ಟಾರ್ಟಪ್ ಫಂಡ್‌ಗೆ 5 ಸಾವಿರ ಕೋಟಿ ರೂ. ಅನುದಾನ
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ