ETV Bharat / bharat

ನಾಗ್ಪುರ ಸರ್ಕಾರಿ ಮೆಡಿಕಲ್​ ಕಾಲೇಜ್​ನಲ್ಲಿ ರ್‍ಯಾಗಿಂಗ್‌​: 6 ಇಂಟರ್​ ಡಾಕ್ಟರ್​ ವಿರುದ್ಧ ಪ್ರಕರಣ ದಾಖಲು

ಮೊದಲ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌​ ನಡೆಸಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಜೂನಿಯರ್​ಗೆ ಹೊಡೆದು, ಮಾನಸಿಕ ದೌರ್ಜನ್ಯ ನಡೆಸುತ್ತಿರುವುದು ಕಂಡು ಬಂದಿದೆ. ರ್‍ಯಾಗಿಂಗ್‌​ ನಡೆಸಿದ ಹಿರಿಯ ವಿದ್ಯಾರ್ಥಿಗಳು ಎಂಬಿಬಿಎಸ್​ ಪದವಿ ಮುಗಿಸಿದ್ದು, ಇಂಟರ್ನ್​ಶಿಪ್​ ಮಾಡುತ್ತಿದ್ದರು.

ನಾಗ್ಪುರ ಸರ್ಕಾರಿ ಮೆಡಿಕಲ್​ ಕಾಲೇಜ್​ನಲ್ಲಿ ರ್‍ಯಾಗಿಂಗ್‌​; 6 ಇಂಟರ್​ ಡಾಕ್ಟರ್​ ವಿರುದ್ಧ ಪ್ರಕರಣ ದಾಖಲು

author img

By

Published : Dec 3, 2022, 5:01 PM IST

ನಾಗ್ಪುರ: ನಾಗ್ಪುರ ಸರ್ಕಾರಿ ವೈದ್ಯಕೀಯ ಕಾಲೇಜ್​ ಮತ್ತು ಆಸ್ಪತ್ರೆಯ 6 ಇಂಟರ್​ ಡಾಕ್ಟರ್​ಗಳ ಮೇಲೆ ರ್‍ಯಾಗಿಂಗ್‌​ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ರ್‍ಯಾಗಿಂಗ್‌ ಸಮಿತಿ ಆದೇಶದ ಅನ್ವಯ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ.

ಮೊದಲ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌​ ನಡೆಸಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಜೂನಿಯರ್​ಗೆ ಹೊಡೆದು, ಮಾನಸಿಕ ದೌರ್ಜನ್ಯ ನಡೆಸುತ್ತಿರುವುದು ಕಂಡು ಬಂದಿದೆ. ರ್‍ಯಾಗಿಂಗ್‌ ನಡೆಸಿದ ಹಿರಿಯ ವಿದ್ಯಾರ್ಥಿಗಳು ಎಂಬಿಬಿಎಸ್​ ಪದವಿ ಮುಗಿಸಿದ್ದು, ಇಂಟರ್ನ್​ಶಿಪ್​ ಮಾಡುತ್ತಿದ್ದರು.

ಈ ಘಟನೆ ನಡೆದ ಬಳಿಕ ಮೊದಲ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಸಾಕ್ಷ್ಯಗಳನ್ನು ನೀಡಿ ಕೇಂದ್ರ ರ್‍ಯಾಗಿಂಗ್‌​ ಕಮಿಟಿಗೆ ತಿಳಿಸಿದ್ದಾರೆ. ಈ ದೂರಿನ ಅನ್ವಯ ಆರು ಜನ ಎಂಬಿಬಿಎಸ್​ ವಿದ್ಯಾರ್ಥಿಗಳ ಇಂಟರ್ನ್ಶಿಶಿಪ್​ ರದ್ದು ಮಾಡಲಾಗಿದ್ದು, ತನಿಖೆಗೆ ಸಮಿತಿ ರಚಿಸಲಾಗಿದೆ.

ಕೇಂದ್ರ ರ್‍ಯಾಗಿಂಗ್‌ ಸಮಿತಿ ಸಲಹೆ ಮೇರೆಗೆ ರ್‍ಯಾಗಿಂಗ್‌ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ವೈದ್ಯಕೀಯ ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ರ್‍ಯಾಗಿಂಗ್‌ನಿಂದ ಪಾರಾಗಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿ: ಸ್ಥಿತಿ ಗಂಭೀರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.