ETV Bharat / bharat

ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ: ಪತ್ರಕರ್ತರ ಮೇಲಿನ FIR ಹಿಂಪಡೆಯುವಂತೆ ಸಂಪಾದಕರ ವೇದಿಕೆ ಆಗ್ರಹ

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ಪತ್ರಕರ್ತರ ವಿರುದ್ಧ ದಾಖಲಾಗಿರುವ ಎಫ್​ಐಆರ್ ಹಿಂಪಡೆಯುವಂತೆ ಆಗ್ರಹಿಸಿರುವ ಭಾರತದ ಸಂಪಾದಕರ ವೇದಿಕೆ, ಹಿಂಪಡೆಯದಿದ್ದಲ್ಲಿ ಸಂವಿಧಾನದ ಕಾನೂನುಗಳ ಮಿತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

Editors Guild
ಭಾರತದ ಸಂಪಾದಕರ ವೇದಿಕೆ
author img

By

Published : Jan 31, 2021, 7:19 AM IST

ನವದೆಹಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರ ಸಂಬಂಧ ಪತ್ರಕರ್ತರ ವಿರುದ್ಧ ದಾಖಲಿಸಿರುವ ದೇಶದ್ರೋಹ ಹಾಗೂ ಇತರ ಅಪರಾಧ ಪ್ರಕರಣಗಳನ್ನು ಕೂಡಲೇ ಹಿಂಪಡೆಯುವಂತೆ ಭಾರತದ ಸಂಪಾದಕರ ವೇದಿಕೆ (EGI) ಆಗ್ರಹಿಸಿದೆ.

ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲೂ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವುದು ವಿಷಾದಕರ ಸಂಗತಿಯಾಗಿದೆ. ಇಡೀ ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಶಾಸನದಲ್ಲಿ ದೇಶದ್ರೋಹಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಹೀಗಿರುವಾಗ ಪತ್ರಕರ್ತರ ವಿರುದ್ಧ ಈ ಆರೋಪ ಹೊರಿಸುವುದನ್ನು ನಾವು ಒಪ್ಪುವುದಿಲ್ಲ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಆನಂದ್ ಕೆ ಸಹಾಯ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ದೇಶದ್ರೋಹ ಹಾಗೂ ತಪ್ಪು ಮಾಹಿತಿ ವರದಿ ಮಾಡಿ, ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ ಎಂಬ ಆರೋಪದಡಿ ಆರು ಮಂದಿ ಪತ್ರಕರ್ತರಾದ ರಾಜ್‌ದೀಪ್ ಸರ್ದೇಸಾಯಿ, ನಿರ್ಮಲ್ ಪಾಂಡೆ, ಜಾಫರ್ ಆಘಾ, ಆನಂದ್ ನಾಥ್, ವಿನೋದ್ ಜೋಸ್ ಮತ್ತು ಪರೇಶ್ ನಾಥ್ ವಿರುದ್ಧ ನೊಯಿಡಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಹರಿಯಾಣ ಮತ್ತು ಮಧ್ಯಪ್ರದೇಶದಲ್ಲೂ ಪತ್ರಕರ್ತರ ವಿರುದ್ಧ ಕೇಸ್​ ದಾಖಲಿಸಲಾಗಿದೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆ: ಸಂಸದ ಶಶಿ ತರೂರ್, 6 ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ

ಇದನ್ನು ಖಂಡಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಭಾರತದ ಸಂಪಾದಕರ ವೇದಿಕೆ) ಈ ಆರು ಮಂದಿಯ ವಿರುದ್ಧದ ಕೇಸ್​ಗಳು ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ದೇಶದ ಹಲವು ಪತ್ರಕರ್ತರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ ಸೇರಿದಂತೆ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದೆ. ಇಲ್ಲವಾದಲ್ಲಿ ಸಂವಿಧಾನದ ಕಾನೂನುಗಳ ಮಿತಿಯಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.