ETV Bharat / bharat

QS Global Ranking: ಬೆಂಗಳೂರಿನ ಐಐಎಸ್​ಸಿಗೆ ವಿಶ್ವದ ಉನ್ನತ ಸಂಶೋಧನಾ ವಿವಿ ಹೆಗ್ಗಳಿಕೆ - ಬೆಂಗಳೂರಿನ ಐಐಎಸ್ಸಿ ವಿಶ್ವದ ಉನ್ನತ ಸಂಶೋಧನಾ ವಿಶ್ವ ವಿಶ್ವವಿದ್ಯಾಲಯ

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳ ಪಟ್ಟಿಯಲ್ಲಿ 3 ಭಾರತೀಯ ಸಂಸ್ಥೆಗಳು ಟಾಪ್ 200 ರಲ್ಲಿ ಸ್ಥಾನ ಪಡೆದಿದ್ದು, ಐಐಎಸ್​ಸಿಗೆ ಉನ್ನತ ಸಂಶೋಧನಾ ವಿಶ್ವವಿದ್ಯಾಲಯ ಗರಿಮೆ ದೊರೆತಿದೆ.

QS Global Ranking 2022
ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 202
author img

By

Published : Jun 9, 2021, 9:30 AM IST

ನವದೆಹಲಿ: ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿ ಬೋಧಕ ವರ್ಗದ ಸೂಚಕಗಳ ಪ್ರಕಾರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯವಾಗಿದ್ದರೆ, ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಭಾಗ 41 ನೇ ಸ್ಥಾನದಲ್ಲಿದೆ.

ಲಂಡನ್ ಮೂಲದ Quacquarelli Symonds ನಡೆಸಿದ ಸಮೀಕ್ಷೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಪ್ರತಿ ಬೋಧಕವರ್ಗದ (CCF) ಮೆಟ್ರಿಕ್‌ನ ಉಲ್ಲೇಖಗಳಿಗೆ 100 ರಲ್ಲಿ 100 ಅಂಕಗಳನ್ನು ಪಡೆದಿದೆ. ಒಟ್ಟಾರೆ ಶ್ರೇಯಾಂಕದಲ್ಲಿ, ಮೂರು ಭಾರತೀಯ ಸಂಸ್ಥೆಗಳು ವಿಶ್ವ ಪಟ್ಟಿಯಲ್ಲಿ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ.

ರ್ಯಾಂಕಿಂಗ್‌ನ 18 ನೇ ಆವೃತ್ತಿಯ ಪ್ರಕಾರ, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಸತತ ನಾಲ್ಕನೇ ವರ್ಷವೂ ಭಾರತದ ಅಗ್ರ ಶ್ರೇಯಾಂಕಿತ ಸಂಸ್ಥೆಯಾಗಿದೆ.

ದೆಹಲಿಯ ಐಐಟಿ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಕಳೆದ ವರ್ಷದಿಂದ 193 ನೇ ಶ್ರೇಯಾಂಕದಿಂದ 185 ಕ್ಕೆ ಏರಿದೆ. ಶ್ರೇಯಾಂಕಗಳ ಪ್ರಕಾರ ಕಳೆದ ವರ್ಷದ ಶ್ರೇಯಾಂಕಕ್ಕಿಂತ ಕೆಳಗಿರುವ 186 ನೇ ರ್ಯಾಂಕ್ ಪಡೆದ ಐಐಎಸ್​ಸಿಯನ್ನು ಹಿಂದಿಕ್ಕಿದೆ.

ಐಐಟಿ ಮದ್ರಾಸ್ 255 ನೇ ಸ್ಥಾನದಲ್ಲಿದೆ, ಐಐಟಿ ಖರಗ್‌ಪುರ 280 ನೇ ಸ್ಥಾನದಲ್ಲಿದ್ದರೆ, ಐಐಟಿ ಗುವಾಹಟಿ -395 ನೇ ಶ್ರೇಯಾಂಕದಲ್ಲಿದೆ. ಐಐಟಿ ಹೈದರಾಬಾದ್ 591, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು 561-570 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ.

ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology, MIT) ಸತತ 10 ನೇ ವರ್ಷವು ವಿಶ್ವದ ನಂಬರ್ ಒನ್ ಸ್ಥಾನ ದಾಖಲಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 2006 ರ ನಂತರ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಏರಿದೆ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಮೂರನೇ ಸ್ಥಾನವನ್ನು ಹಂಚಿಕೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.