ಹರಿದ್ವಾರ : ರಸ್ತೆಯಲ್ಲಿ ದಿಢೀರನೆ ಕಾಣಿಸಿಕೊಂಡ ಹೆಬ್ಬಾವು ಹಲವು ಸಮಯದವರೆಗೆ ರಸ್ತೆಯನ್ನೇ ಬಂದ್ ಆಗುವಂತೆ ಮಾಡಿತ್ತು. ಈ ರಸ್ತೆ ನಂದೇ ಎಂಬಂತೆ ಸಂಚರಿಸುತ್ತಿದ್ದ ಹಾವನ್ನು ನೋಡಿದ ವಾಹನ ಸವಾರರು, ತಮ್ಮ ಮೊಬೈಲ್ಗಳಲ್ಲಿ ದೃಶ್ಯ ಸೆರೆ ಹಿಡಿದುಕೊಂಡರು.
ದೆಹಲಿ ಹೆದ್ದಾರಿಯ ಸರ್ವಾನಂದ ಘಾಟ್ ಬಳಿ ಈ ಘಟನೆ ಜರುಗಿದೆ. ಈ ವೇಳೆ ಹೆದ್ದಾರಿಯಲ್ಲಿ ಹೆಬ್ಬಾವು ನೋಡಲು ಜನಸಾಗರವೇ ನೆರೆದಿತ್ತು. ಇದಾದ ನಂತರ ಹೆಬ್ಬಾವು ಕಾಡಿನತ್ತ ತನ್ನ ಸಂಚಾರ ಬೆಳೆಸಿ ಈ ಕಡೆ ಸವಾರರು ತಮ್ಮ ಪ್ರಯಾಣ ಮುಂದುವರೆಸಲು ಅನುವು ಮಾಡಿಕೊಟ್ಟಿತು.
ಇದನ್ನೂ ಓದಿ: ಶಾಲೆ ಗುಣಮಟ್ಟದ ವಿಷಯಕ್ಕೆ ಮಾತಿನ ಚಕಮಕಿ : ಪಂಜಾಬ್ ಸಿಎಂ ಹೇಳಿಕೆಗೆ ರಿಯಾಲಿಟಿ ಚೆಕ್ ಮಾಡಿದ ಮನೀಶ್ ಸಿಸೋಡಿಯಾ!
ಹರಿದ್ವಾರದ ಹೆಚ್ಚಿನ ಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಆಗಾಗ ಕಾಡು ಪ್ರಾಣಿಗಳು ಹೆದ್ದಾರಿಗೆ ಬರುತ್ತವೆ. ಇವುಗಳಲ್ಲಿ ಆನೆ, ಚಿರತೆ ಮತ್ತಿತರ ಪ್ರಾಣಿಗಳು ಕಾಣ ಸಿಗುತ್ತವೆ. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.