ETV Bharat / bharat

ಪುಷ್ಪಕ್ ಎಕ್ಸ್​ಪ್ರೆಸ್ ಗ್ಯಾಂಗ್​​ರೇಪ್ ಕೇಸ್​: ಮತ್ತಿಬ್ಬರು ಆರೋಪಿಗಳು ಅರೆಸ್ಟ್​ - Kalyan area of Mumbai

ಲಖನೌ ಮತ್ತು ಮುಂಬೈ ನಡುವೆ ಸಂಚರಿಸುವ ಪುಷ್ಪಕ್ ಎಕ್ಸ್​​ಪ್ರೆಸ್ ರೈಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಈವರೆಗೆ ಒಟ್ಟು 7 ಜನರನ್ನು ಬಂಧಿಸಲಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ತಿಳಿಸಿದ್ದಾರೆ.

ಪುಷ್ಪಕ್ ಎಕ್ಸ್​ಪ್ರೆಸ್ ಗ್ಯಾಂಗ್​​ರೇಪ್ ಕೇಸ್​

author img

By

Published : Oct 10, 2021, 4:30 PM IST

Updated : Oct 10, 2021, 5:07 PM IST

ಮುಂಬೈ (ಮಹಾರಾಷ್ಟ್ರ): ಚಲಿಸುತ್ತಿದ್ದ ಪುಷ್ಪಕ್ ಎಕ್ಸ್​​ಪ್ರೆಸ್ ರೈಲಿನಲ್ಲಿ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಮುಂಬೈ ರೈಲ್ವೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಲಖನೌ ಮತ್ತು ಮುಂಬೈ ನಡುವೆ ಸಂಚರಿಸುವ ಪುಷ್ಪಕ್ ಎಕ್ಸ್​​ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಬಳಿ ಇದ್ದ ಹಣ, ಮೊಬೈಲ್​ ಮತ್ತು ಆಭರಣಗಳನ್ನು ಖದೀಮರು ದರೋಡೆ ಮಾಡಿದ್ದರು. ಇದೇ ವೇಳೆ ರೈಲಿನಲ್ಲಿದ್ದ 20 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ಪುಷ್ಪಕ್​​​​ ಎಕ್ಸ್​ಪ್ರೆಸ್​​ ರೈಲಿನಲ್ಲಿ ದರೋಡೆ.. ಯುವತಿ ಮೇಲೆ ಗ್ಯಾಂಗ್​ರೇಪ್ ಆರೋಪ

ಘಟನೆ ಸಂಬಂಧ ಕಲ್ಯಾಣ್​ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತಿಬ್ಬರನ್ನು ಅರೆಸ್ಟ್ ಮಾಡಿ, ತನಿಖೆ ಮುಂದುವರೆಸಿದ್ದಾರೆ.

ಶನಿವಾರ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ತಿಳಿಸಿದ್ದಾರೆ.

Last Updated : Oct 10, 2021, 5:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.