ETV Bharat / bharat

ಆರ್​ಎಸ್​ಎಸ್​ ಮೋಹನ್​ ಭಾಗವತ್​ರ 'ಜಾತಿ' ಹೇಳಿಕೆಗೆ ಪುರಿ ಶ್ರೀಗಳ ಅಸಮಾಧಾನ - ಮೋಹನ್​ ಭಾಗವತ್​ ಏನ್​ ಹೇಳಿದ್ರು

ಮೋಹನ್​ ಭಾಗವತ್​ ಬ್ರಾಹ್ಮಣ ವಿವಾದ- ಆರ್​ಎಸ್​ಎಸ್​ ಮುಖ್ಯಸ್ಥರ ವಿರುದ್ಧ ಪುರಿ ಶ್ರೀಗಳ ಟೀಕೆ- ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಬೇಸರ- ಮೋಹನ್​ ಭಾಗವತ್​ರ ಜಾತಿ ಹೇಳಿಕೆ

puri shankaracharya shri on rss chief
ಪುರಿ ಶ್ರೀಗಳ ಅಸಮಾಧಾನ
author img

By

Published : Feb 8, 2023, 10:46 AM IST

ಜಗದಲ್‌ಪುರ (ಛತ್ತೀಸ್‌ಗಢ): ಜಾತಿ ಪದ್ಧತಿಯನ್ನು ಟೀಕಿಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಗೆ ಪುರಿಯ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದರು. "ಭಾಗವತರಿಗೆ ಶಾಸ್ತ್ರಗಳ ಜ್ಞಾನದ ಕೊರತೆಯಿದೆ. ಅದಕ್ಕಾಗಿಯೇ ಅವರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಮೊದಲು ಈ ಬಗ್ಗೆ ತಿಳಿದುಕೊಳ್ಳಲಿ" ಎಂದು ಹೇಳಿದರು.

ಆರ್‌ಎಸ್‌ಎಸ್ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಸರಸ್ವತಿ ಶ್ರೀಗಳು, ಆರ್​ಎಸ್​ಎಸ್​ ಮುಖ್ಯಸ್ಥರು ಬ್ರಾಹ್ಮಣ ಸಮುದಾಯದ ತಂದೆ-ತಾಯಿಯಿಂದ ಹುಟ್ಟಿದವರು. ಈಗ ಅವರು ತಮ್ಮ ಹೆತ್ತವರನ್ನೇ ನಿಂದಿಸುತ್ತಿದ್ದಾರೆ? ಅವರನ್ನು ಮೋಹನ್ ಭಾಗವತ್ ಬದಲಾಗಿ 'ಮೋದಿ ಭಾಗವತ್' ಎಂದು ಕರೆಯಬೇಕಾಗಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಬಗ್ಗೆಯೂ ಬೇಸರ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಪುರಿ ಶ್ರೀಗಳು, ಪ್ರಧಾನಿಗಳು ರಾಜತಾಂತ್ರಿಕತೆಯಲ್ಲಿ ನಿಪುಣರಾಗಿದ್ದಾರೆ. ಆದರೆ, ಹಿಂದುಗಳ ಪರವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಅಕ್ರಮ ಮತಾಂತರದ ವಿರುದ್ಧ ಅವರು ಕಠಿಣ ಕ್ರಮ ಕೈಗೊಂಡ ದಿನ ಅವರನ್ನು ನಾನು ಹಿಂದುಗಳ ಪರ ಎಂದು ಪರಿಗಣಿಸುತ್ತೇನೆ. ಮುಂದಿನ ಸಲವೂ ಪ್ರಧಾನಿಯಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಅವರು ನನ್ನನ್ನು ಭೇಟಿಯಾದಾಗ ಅವರ ಕಿವಿಯಲ್ಲೇ ಹೇಳುವೆ ಎಂದು ಹೇಳಿದರು.

ಶರ್ಮಾ, ಯೋಗಿ ಆದಿತ್ಯನಾಥ್​ಗೆ ಮೆಚ್ಚುಗೆ: ಇನ್ನೊಂದೆಡೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರನ್ನು ಪುರಿ ಶ್ರೀಗಳು ಶ್ಲಾಘಿಸಿದ್ದಾರೆ. "ಇಬ್ಬರಿಗೂ ಶಿಸ್ತು ಮತ್ತು ಅನೇಕ ಗುಣಗಳು ಒಂದಾಗಿವೆ. ಆಡಳಿತ ಮಾಡುವ ಸಾಮರ್ಥ್ಯ ಅವರಿಗಿದೆ. ಅವರು ಹಿಂದೂಗಳಿಗೆ ಅನ್ಯಾಯ ಮಾಡುವುದಿಲ್ಲ. ಅದನ್ನು ಮಾಡಲೂ ಬಿಡುವುದಿಲ್ಲ ಎಂದು ಹೊಗಳಿದ್ದಾರೆ.

ಮೋಹನ್​ ಭಾಗವತ್​ ಏನ್​ ಹೇಳಿದ್ರು?: ಮುಂಬೈನಲ್ಲಿ ಸೋಮವಾರ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್​ ಭಾಗವತ್​ ಅವರು, ಜಾತಿ ಪದ್ಧತಿಯನ್ನು ಟೀಕಿಸಿದ್ದರು. "ದೇವರ ಮುಂದೆ ಎಲ್ಲರೂ ಸಮಾನರು. ಜಾತಿ, ವರ್ಗಗಳು ಇರಲಿಲ್ಲ, ಇವುಗಳನ್ನು ಪಂಡಿತರು ಸೃಷ್ಟಿಸಿದರು" ಎಂದು ಮಾಡಿದ ಭಾಷಣ ವಿವಾದಕ್ಕೀಡಾಗಿದೆ.

ಹೇಳಿಕೆಗೆ ಸಂಘ, ಬಿಜೆಪಿ ಸ್ಪಷ್ಟನೆ: ಭಾಗವತ್​ರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಅವರ ಭಾಷಣದಲ್ಲಿ ಪಂಡಿತ್​ ಎಂಬ ಪದ ಬಳಸಿದ್ದಾರೆ. ಎಲ್ಲಿಯೂ ಅವರು ಬ್ರಾಹ್ಮಣರ ಬಗ್ಗೆ ಪ್ರಸ್ತಾಪಿಸಿಲ್ಲ. ಪಂಡಿತ ಎಂಬ ಪದ ಜ್ಞಾನವುಳ್ಳ ವ್ಯಕ್ತಿ ಎಂದಾಗುತ್ತದೆ. ಅದು ಬ್ರಾಹ್ಮಣ ಸಮುದಾಯವನ್ನು ಸೂಚಿಸುವುದಿಲ್ಲ ಎಂದು ಉತ್ತರಪ್ರದೇಶ ಬಿಜೆಪಿ ನಾಯಕರು ಹೇಳಿದ್ದಾರೆ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ತಿರುಚಿ ವಿವಾದ ಸೃಷ್ಟಿಸಿವೆ. ಬ್ರಾಹ್ಮಣ ಸಮುದಾಯ ಇದಕ್ಕೆ ನೊಂದುಕೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.

ಭಾಗವತ್​ ವಿರುದ್ಧ ದೂರು ದಾಖಲು: ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್)ದ ಸರಸಂಚಾಲಕ ಮೋಹನ್​ ಭಾಗವತ್​ ವಿರುದ್ಧ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಈ ದೂರು ನೀಡಿದ್ದು, ಫೆಬ್ರವರಿ 20ರಂದು ವಿಚಾರಣೆ ನಡೆಯಲಿದೆ.

ಓದಿ: ಮೋಹನ್​ ಭಾಗವತ್​ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ ವಕೀಲ: ಫೆ.20ರಂದು ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.