ETV Bharat / bharat

ಪುರಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ: 12 ಗಂಟೆ ನಂತರವೂ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ..! - Fire spread to various shops

ಮರೀಚಿಕೋಟ್ ಚಾಚಾ ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 12 ಗಂಟೆ ಕಳೆದರೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬದಲಾಗಿ ಬೆಂಕಿಯ ಜಾಲ್ವೆ ಹರಡುತ್ತಾ ಸಾಗಿದೆ.

Puri Market Complex Fire Accident
ಪುರಿ ಮಾರ್ಕೆಟ್ ಕಾಂಪ್ಲೆಕ್ಸ್ ಅಗ್ನಿ ಅವಘಡ: 12 ಗಂಟೆ ನಂತರವೂ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ
author img

By

Published : Mar 9, 2023, 4:30 PM IST

Updated : Mar 9, 2023, 5:31 PM IST

ಪುರಿ(ಒಡಿಶಾ): ಮರೀಚಿಕೋಟ್ ಚಾಚಾ ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 12 ಗಂಟೆ ಕಳೆದರೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಬೆಂಕಿಯ ಜಾಲ್ವೆ ಹರಡುತ್ತಿದೆ. ಇದೀಗ ನೆಲ ಮಹಡಿಯಿಂದ ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿದೆ. ಎರಡನೇ ಮಹಡಿಯಲ್ಲಿ ಬ್ಯಾಂಕ್ ಮತ್ತು ಅಂಗಡಿ ಇದೆ. ತುಂಬಾ ಸಮಯದ ನಂತರವೂ ಪುರಿ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸಲು ವಿಫಲವಾಗಿದೆ.

ಬೆಂಕಿ ನಂದಿಸಲು ಹರಸಾಹಸ: ಎಲ್ಲೆಡೆ ದಟ್ಟವಾದ ಹೊಗೆ ಆವರಿಸಿದೆ. ಮಾಹಿತಿ ಪ್ರಕಾರ ನಿನ್ನೆ ರಾತ್ರಿ 8 ಗಂಟೆಗೆ ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. 100ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಕಿ ಮಾತ್ರ ಹೆಚ್ಚಾಗುತ್ತಿದ್ದು, ನಂದಿಸಲು ಸಾಧ್ಯವಾಗಲಿಲ್ಲ. ಬುಧವಾರ ರಾತ್ರಿಯಿಂದ ಬೆಳಗಿನ ಜಾವದವರೆಗೂ ಬೆಂಕಿ ಹೊತ್ತಿ ಉರಿಯುತ್ತಿದೆ. ಹಾಗಾಗಿ ಇದೀಗ ಭುವನೇಶ್ವರಿಯಿಂದ ಅಗ್ನಿಶಾಮಕ ದಳದ ತಜ್ಞರ ತಂಡ ಆಗಮಿಸಿದೆ ಎಂದು ವರದಿಯಾಗಿದೆ.

ವಿವಿಧ ಅಂಗಡಿಗಳಿಗೆ ಹಬ್ಬಿದ ಬೆಂಕಿ: ಆದರೆ, ಬೆಂಕಿ ನಿಯಂತ್ರಿಸಲು ಸಾಧ್ಯವಾಗದಿರುವುದಕ್ಕೆ ಡಾಂಬರು ಕಾಣದ ರಸ್ತೆಗಳೇ ಪ್ರಮುಖ ಕಾರಣ ಎನ್ನಲಾಗಿದೆ. ಏಕೆಂದರೆ ಅಗ್ನಿಶಾಮಕ ದಳವು ಈ ರಸ್ತೆಯ ಮೂಲಕ ಮಾರುಕಟ್ಟೆ ಸಂಕೀರ್ಣದೊಳಗೆ ತಲುಪಲು ಸಾಧ್ಯವಿಲ್ಲ. ಜೊತೆಗೆ ಬೆಂಕಿ ನಂದಿಸಲು ಸಾಧ್ಯವಿಲ್ಲ. ಇದರಿಂದ ನೆಲ ಮಹಡಿಯಿಂದ ಮೇಲಿನ ಮಹಡಿಯಲ್ಲಿರುವ ಇತರ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ.

ಒಳಗಿನಿಂದ ಹೊಗೆ ಬರುತ್ತಿದ್ದರಿಂದ ಅಗ್ನಿ ಶಾಮಕ ಸಿಬ್ಬಂದಿಗೆ ಒಳಗೆ ಹೋಗಲು ತೀವ್ರ ತೊಂದರೆಯಾಗುತ್ತದೆ. ಮೊದಲಿಗೆ ನೆಲಮಹಡಿಯಲ್ಲಿರುವ ಡ್ರೆಸ್ ಶಾಪ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಇದು ವಿವಿಧ ಆಭರಣ ಅಂಗಡಿಗಳು, ಚಪ್ಪಲಿ ಅಂಗಡಿ, ಪ್ಲಾಸ್ಟಿಕ್ ಅಂಗಡಿಗಳಿಗೆ ಹಬ್ಬಿದೆ. ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಆತ ಸ್ವಲ್ಪ ಗುಣಮುಖನಾಗಿದ್ದಾನೆ. ಇದೀಗ ಪುರಿ ಎಸ್ಪಿ ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ. ಇನ್ನೂ 3ರಿಂದ 4 ಗಂಟೆಗಳಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಅವರು ಊಹಿಸಿದ್ದಾರೆ.

ಈ ಕಾಂಪ್ಲೆಕ್ಸ್‌ಗೆ ಒಂದೇ ಪ್ರವೇಶ ದ್ವಾರ, ಸಿಬ್ಬಂದಿ ಕಾರ್ಯಕ್ಕೆ ಅಡ್ಡಿ: ಮತ್ತೊಂದೆಡೆ ಬಡ್ಡಂದ್ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಸಂಚಾರ ವ್ಯವಸ್ಥೆ ಅಳವಡಿಸಲಾಗಿದೆ. ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮಾರ್ಕೆಟ್ ಸ್ಟ್ರೀಟ್‌ನಿಂದ ಎಲ್ಲ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ನಿನ್ನೆ ಹೋಳಿ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಭಾರೀ ಅವಘಡ ನಡೆದಿದೆ. ಸಾಮಾನ್ಯವಾಗಿ, ಹಗಲಿನಲ್ಲಿ ಬೆಂಕಿ ಸಂಭವಿಸಿದರೆ, ಜೀವ ಮತ್ತು ಆಸ್ತಿ ನಷ್ಟದ ಅಪಾಯವಿತ್ತು. ಆದರೆ, ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್‌ಗೆ ಒಂದೇ ಪ್ರವೇಶ ದ್ವಾರ ಮತ್ತು ನಿರ್ಗಮನಕ್ಕೂ ಅದೇ ದ್ವಾರವಿದೆ. ಇದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ತುಂಬಾ ಕಿರಿದಾಗಿದೆ.

ಅಕ್ರಮ ಶಾಪಿಂಗ್ ಕಾಂಪ್ಲೆಕ್ಸ್​ಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಸಂಕೀರ್ಣದ ಸುತ್ತಲೂ ಖಾಲಿ ಜಾಗವಿಲ್ಲ. ಅದಕ್ಕೆ ಸ್ವಂತ ಪಾರ್ಕಿಂಗ್ ಸೌಲಭ್ಯವೂ ಇಲ್ಲ. ಎಲ್ಲ ಮಾರುಕಟ್ಟೆ ಸಂಕೀರ್ಣಗಳು ಬಹು ಪ್ರವೇಶ ಮತ್ತು ನಿರ್ಗಮನಗಳೊಂದಿಗೆ ತಮ್ಮದೇ ಆದ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವುದು ನಿಯಮವಾಗಿದ್ದರೂ, ಇಲ್ಲಿ ಎಲ್ಲವೂ ತದ್ದ ವಿರುದ್ಧವಾಗಿದೆ. ಹಾಗಾದರೆ, ಈ ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್​ಗೆ ಜಿಲ್ಲಾಡಳಿತ ವಾಣಿಜ್ಯ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಇದರ ಹಿಂದೆ ಆಡಳಿತದ ಕೆಲ ದೊಡ್ಡ ಅಧಿಕಾರಿಗಳ ಕೈವಾಡವಿದೆ ಎಂಬ ಮಾತು ಕೇಳಿಬರುತ್ತಿದೆ. ಇಂತಹ ಅಕ್ರಮ ಶಾಪಿಂಗ್ ಕಾಂಪ್ಲೆಕ್ಸ್​ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪುರಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಮಾಹಿತಿದಾರ ಶಂಕೆ: ವ್ಯಕ್ತಿಯನ್ನು ಕಾಡಿಗೆ ಎಳೆದೊಯ್ದು ಕೊಂದ ನಕ್ಸಲರು

Last Updated : Mar 9, 2023, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.