ETV Bharat / bharat

ವಂದೇ ಭಾರತ್ ರೈಲಿಗೆ ಸಿಲುಕಿ ಮೂರು ವರ್ಷದ ಬಾಲಕಿ ಸಾವು - ಪಂಜಾಬ್​ನ ರೂಪನಗರ ಜಿಲ್ಲೆ

ಐಷಾರಾಮಿ, ಸೆಮಿ ಸ್ಪೀಡ್​ ರೈಲು ಎಂದೇ ಹೆಸರಾದ ವಂದೇ ಭಾರತ್ ರೈಲಿನಿಂದ ಮತ್ತೊಂದು ಅವಘಡ ಸಂಭವಿಸಿದೆ. ಪಂಜಾಬ್​ನಲ್ಲಿ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

punjab-three-year-old-girl-dead-in-vande-bharat-train-accident
ವಂದೇ ಭಾರತ್ ರೈಲಿಗೆ ಸಿಲುಕಿ ಮೂರು ವರ್ಷದ ಬಾಲಕಿ ಸಾವು
author img

By

Published : Dec 28, 2022, 6:24 PM IST

ಚಂಡೀಗಢ್ (ಪಂಜಾಬ್​): ವಂದೇ ಭಾರತ್​ ರೈಲು ಡಿಕ್ಕಿಯಾಗಿ ಮೂರು ವರ್ಷದ ಬಾಲಕಿ ಸಾವಿಗೀಡಾದ ಘಟನೆ ಪಂಜಾಬ್​ನ ರೂಪನಗರ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಕಿರಾತಪುರ ಸಾಹಿಬ್​ ಸಮೀಪ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

ಬಾಲಕಿಯ ಕುಟುಂಬಸ್ಥರು ಕೆಲಸಕ್ಕೆ ಹೋಗುತ್ತಿದ್ದರು. ಮಗು ಕೂಡಾ ಕುಟುಂಬಸ್ಥರನ್ನು ಹಿಂಬಾಲಿಸಿ ಹೋಗುತ್ತಿದ್ದಳು. ರೈಲ್ವೆ ಹಳಿ ದಾಟುವಾಗ ಉನಾ ಮತ್ತು ದೆಹಲಿ ನಡುವೆ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಾಣಿಗಳಿಂದ ಅಪಘಾತ ತಡೆಗೆ ಕ್ರಮ: ರೈಲು ಹಳಿ ಸುತ್ತ 1,000 ಕಿ.ಮೀ ಆವರಣ ಗೋಡೆ ನಿರ್ಮಾಣ

ವಿಷಯ ತಿಳಿದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ. ಬಾಲಕಿಯನ್ನು ಕಳೆದುಕೊಂಡು ಪೋಷಕರು ದುಃಖದಲ್ಲಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ವಂದೇ ಭಾರತ್‌ ರೈಲಿನ ಬಗ್ಗೆ..: ವಂದೇ ಭಾರತ್​ ಸೆಮಿ ವೇಗದ ಐಷಾರಾಮಿ ರೈಲು. ಇತ್ತೀಚೆಗೆ ಅವಘಡಗಳಿಂದೇ ಹೆಚ್ಚು ಸುದ್ದಿಯಲ್ಲಿದೆ. ಕಳೆದ ನವೆಂಬರ್​ ತಿಂಗಳಲ್ಲಿ ಗುಜರಾತ್​ನಲ್ಲಿ 54 ವರ್ಷದ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದರು. ಅಲ್ಲದೇ, ಸರಣಿಯಾಗಿ ಜಾನುವಾರುಗಳು ಸಹ ಈ ರೈಲಿಗೆ ಸಿಲುಕಿ ಮೃತಪಟ್ಟಿವೆ.

ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಸಿಲುಕಿ ಮಹಿಳೆ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.