ETV Bharat / bharat

Punjab Result: ಒಂದು ಕಾಲದಲ್ಲಿ ಪಂಜಾಬ್ ಆಳಿದ್ದ ಅಕಾಲಿದಳಕ್ಕೆ ಕೇವಲ ಕೆಲವೇ ಕ್ಷೇತ್ರದಲ್ಲಿ ಮುನ್ನಡೆ

author img

By

Published : Mar 10, 2022, 10:03 AM IST

ಒಂದು ಕಾಲದಲ್ಲಿ ಪಂಜಾಬ್​​ ಅತ್ಯಂತ ಬಲಿಷ್ಟವಾಗಿದ್ದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಈಗಿನ ಮತ ಎಣಿಕೆ ಟ್ರೆಂಡ್​ನಲ್ಲಿ ಕೇಲವ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಅದರೊಂದಿಗೆ ಓರ್ವ ಪಕ್ಷೇತರ ಅಭ್ಯರ್ಥಿಯೂ ಕೂಡಾ ಮುನ್ನಡೆ ಸಾಧಿಸಿದ್ದಾರೆ.

Punjab Result: Akali Dal, Independent candidate leading on one seat each in Punjab Assembly Polls
Punjab Result: ಒಂದು ಕಾಲದಲ್ಲಿ ಪಂಜಾಬ್ ಆಳಿದ್ದ ಅಕಾಲಿದಳಕ್ಕೆ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ

ಚಂಡೀಗಢ, ಪಂಜಾಬ್ : ಸಾಕಷ್ಟು ಕುತೂಹಲ ಕೆರಳಿಸಿರುವ ಪಂಜಾಬ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಒಂದು ಕಾಲದಲ್ಲಿ ಅತ್ಯಂತ ಬಲಿಷ್ಟವಾಗಿದ್ದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಈಗಿನ ಮತ ಎಣಿಕೆ ಟ್ರೆಂಡ್​ನಲ್ಲಿ ಕೇಲವ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಅದರೊಂದಿಗೆ ಓರ್ವ ಪಕ್ಷೇತರ ಅಭ್ಯರ್ಥಿಯೂ ಕೂಡಾ ಮುನ್ನಡೆ ಸಾಧಿಸಿದ್ದಾರೆ.

ಆರಂಭಿಕ ಅಂಕಿ- ಅಂಶಗಳಲ್ಲಿ ಶಿರೋಮಣಿ ಅಕಾಲಿದಳದ ಮುಕೇರಿಯನ್ ಕ್ಷೇತ್ರದ ಅಭ್ಯರ್ಥಿ ಸರ್ಬ್ಜೋತ್ ಸಿಂಗ್ 201 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಂಗಿ ಲಾಲ್ ಮಹಾಜನ್ ಸ್ಪರ್ಧಿಸಿದ್ದಾರೆ.

ಸುಲ್ತಾನ್‌ಪುರ ಲೋಧಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ರಾಣಾ ಇಂದರ್ ಪ್ರತಾಪ್ ಸಿಂಗ್ ಅವರು 1770 ಮತಗಳ ಮುನ್ನಡೆ ಸಾಧಿಸಿದ್ದು, ಇವರ ಎದುರಾಳಿಯಾಗಿ ಶಿರೋಮಣಿ ಅಕಾಲಿದಳ ಅಭ್ಯರ್ಥಿ ಹರ್ಮಿಂದರ್ ಸಿಂಗ್ ಸ್ಪರ್ಧಿಸಿದ್ದಾರೆ. ಈಗಿನ ಟ್ರೆಂಡ್​ ಪ್ರಕಾರ ಕ್ಯಾಪ್ಟನ್ ಅಮರೀಂದರ್ ಸಿಂಗ್ 10 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದು, ಗೆಲುವು ಬಹುತೇಕ ಅನುಮಾನವಾಗಿದೆ. ಪ್ರಕಾಶ್ ಸಿಂಗ್ ಬಾದಲ್, ಸುಖ್​ಬೀರ್ ಸಿಂಗ್ ಬಾದಲ್ ಕೂಡಾ ಹಿನ್ನಡೆಯಲ್ಲಿದ್ದಾರೆ. ಆಪ್ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮುನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: Punjab Election Result: ಕಾಂಗ್ರೆಸ್ ಸಿಎಂ ಅಭ್ಯರ್ಥಿಗೆ ಹಿನ್ನಡೆ.. ಆಪ್​ನ ಭಗವಂತ್​ ಮಾನ್ ನಿವಾಸದಲ್ಲಿ ಜಿಲೇಬಿ ತಯಾರಿ

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಕ್ಷೇತ್ರಗಳನ್ನು ಗೆಲ್ಲಲೇಬೇಕಾಗಿದ್ದು, ಎಕ್ಸಿಟ್​ಪೋಲ್ ಪ್ರಕಾರ ಆಪ್ ಗೆಲುವು ಸಾಧಿಸಲಿದೆ. ಈಗಿನ ಟ್ರೆಂಡ್​ ಪ್ರಕಾರ ಕ್ಯಾಪ್ಟನ್ ಅಮರೀಂದರ್ ಸಿಂಗ್ 10 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದು, ಗೆಲುವು ಬಹುತೇಕ ಅನುಮಾನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.