ETV Bharat / bharat

ಈ ರಾಜ್ಯದಲ್ಲಿ ಸೆ. 15 ರೊಳಗೆ COVID Vaccine ಪಡೆಯದಿದ್ದರೆ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ! - ಸೆಪ್ಟೆಂಬರ್ 15 ರೊಳಗೆ ವ್ಯಾಕ್ಸಿನ್ ಪಡೆಯದಿದ್ದರೆ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ

ಪಂಜಾಬ್​ನಲ್ಲಿ ಸೆಪ್ಟೆಂಬರ್ 15 ರೊಳಗೆ ಕೋವಿಡ್​ ವ್ಯಾಕ್ಸಿನ್(COVID Vaccine) ಪಡೆಯದಿದ್ದರೆ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

Punjab govt
Punjab govt
author img

By

Published : Sep 11, 2021, 7:58 AM IST

ಚಂಡಿಗಢ (ಪಂಜಾಬ್): ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಯಾವುದೇ ಕಾರಣಕ್ಕೂ ಕೋವಿಡ್ ಲಸಿಕೆಯ(COVID Vaccine) ಮೊದಲ ಡೋಸ್ ತೆಗೆದುಕೊಳ್ಳಲು ರಾಜ್ಯ ಸರ್ಕಾರಿ ನೌಕರರು ವಿಫಲರಾದರೆ ಸೆಪ್ಟೆಂಬರ್ 15 ರ ನಂತರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಹೇಳಿದ್ದಾರೆ.

ರಾಜ್ಯದ ಜನರನ್ನು ಕಾಯಿಲೆಯಿಂದ ರಕ್ಷಿಸಲು ಮತ್ತು ಲಸಿಕೆ ಹಾಕಿಸಿಕೊಂಡವರು ಭಯ ಪಡಬೇಕಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶುಕ್ರವಾರ ನಡೆದ ಉನ್ನತ ಮಟ್ಟದ ವರ್ಚುವಲ್ ಕೋವಿಡ್ ಪರಿಶೀಲನಾ ಸಭೆಯಲ್ಲಿ, ವಿಶ್ಲೇಷಿಸಿದ ದತ್ತಾಂಶದಿಂದ ಲಸಿಕೆಯ ಪರಿಣಾಮಕಾರಿತ್ವವು ಸ್ಪಷ್ಟವಾಗಿದೆ ಎಂದು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸರ್ಕಾರಿ ಉದ್ಯೋಗಿಗಳಿಗೆ ವ್ಯಾಕ್ಸಿನ್​ ಹಾಕಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದರ ಬಗ್ಗೆಯೂ ಚರ್ಚಿಸಲಾಯಿತು. ಈ ವೇಳೆ ಮೊದಲ ಡೋಸ್ ವ್ಯಾಕ್ಸಿನ್ ಪಡೆಯದವರು, ಲಸಿಕೆ ಪಡೆಯುವವರೆಗೆ ರಜೆಯಲ್ಲಿರುವಂತೆ ಸೂಚಿಸುವ ನಿರ್ಧಾರ ಕೈಗೊಂಡಿದ್ದಾರೆ.

ಒಂದು ತಿಂಗಳ ಹಿಂದೆ ಶಾಲಾ ಶಿಕ್ಷಕರಿಗೆ ವಾರಕ್ಕೊಮ್ಮೆ RT-PCR ಪರೀಕ್ಷೆ ಮಾಡಿಸುವಂತೆ ಹಾಗೂ ಒಂದು ಡೋಸ್ ವ್ಯಾಕ್ಸಿನ್​ ಪಡೆದ ಬೋಧಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ರಾಜ್ಯ ಸರ್ಕಾರ ಆದೇಶಿಸಿತ್ತು. ಇತರೆ ರೋಗಗಳಿಂದ ಬಳಲುತ್ತಿರುವವರು ವ್ಯಾಕ್ಸಿನ್​ ಹಾಕಿಸಿಕೊಂಡ ನಂತರವೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು.

ಇದನ್ನೂ ಓದಿ: ಪಂಜಾಬ್​ : ಕೊರೊನಾ ನಿಯಂತ್ರಣಕ್ಕೆ ಸೆ. 30 ರವರೆಗೆ ನಿರ್ಬಂಧ ವಿಸ್ತರಣೆ

ರಾಜ್ಯವು ಈಗಾಗಲೇ ಶೇಕಡಾ 57 ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಿದೆ. ಮೊದಲ ಡೋಸ್ ಅನ್ನು 1.18 ಕೋಟಿ ಮತ್ತು ಎರಡನೆ ಡೋಸ್​ಅನ್ನು 37.81 ಲಕ್ಷ ಜನರಿಗೆ ನೀಡಲಾಗಿದೆ. ಆದರೂ, ವ್ಯಾಕ್ಸಿನೇಷನ್​ಅನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. ಇದೇ ವೇಳೆ ಅವರು, ರಾಜ್ಯಕ್ಕೆ ಕೇಂದ್ರದಿಂದ ಸರಬರಾಜು ಮಾಡಿದ ಲಸಿಕೆಗಳನ್ನು ವ್ಯರ್ಥವಾಗದಂತೆ ಬಳಸಿಕೊಳ್ಳಲಾಗಿದೆ ಎಂದು ಸ್ಪಪ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.