ETV Bharat / bharat

ಪಂಜಾಬ್‌ನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಪ್ ಸರ್ಕಾರ ನಿರ್ಧಾರ - ಪಂಜಾಬ್​ನಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಎಎಪಿ

ಪಂಜಾಬ್‌ನ ಆಡಳಿತಾರೂಢ ಎಎಪಿ ಸರ್ಕಾರ ಜನರಿಗೆ ಮನೆ ಬಾಗಿಲಿಗೆ ಪಡಿತರ ವಿತರಿಸಲು ನಿರ್ಧರಿಸಿದೆ. ಈ ಕುರಿತು ಸಿಎಂ ಭಗವಂತ್ ಮಾನ್‌ ವಿವರಣೆ ನೀಡಿದ್ದಾರೆ.

ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲು ಮುಂದಾದ ಪಂಜಾಬ್ ಸರ್ಕಾರ

author img

By

Published : Mar 28, 2022, 3:20 PM IST

ಚಂಡೀಗಢ (ಪಂಜಾಬ್): ದೆಹಲಿಯಲ್ಲಿ ಅನುಷ್ಠಾನ ಮಾಡಲು ನಿರ್ಧರಿಸಿದ್ದ ಮನೆ ಬಾಗಿಲಿಗೆ ಪಡಿತರ ವಿತರಣೆ ಕಾರ್ಯಕ್ರಮವನ್ನು ಇದೀಗ ಪಂಜಾಬ್‌ನಲ್ಲಿ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ. ಇದೇ ವೇಳೆ, ಈ ಯೋಜನೆಯು ಐಚ್ಛಿಕವಾಗಿದ್ದು,(ಅಗತ್ಯ ಇರುವವರಿಗೆ ಮಾತ್ರ) ವಿನಂತಿಯ ಮೇರೆಗೆ ಮಾತ್ರ ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರವೂ ಬಡವರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದು ದುರದೃಷ್ಟಕರ ಬೆಳವಣಿಗೆ. ಶ್ರೀಮಂತರು ತಮ್ಮ ಮನೆಯಲ್ಲಿಯೇ ಒಂದು ಮೌಸ್ ಕ್ಲಿಕ್‌ನಲ್ಲಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಹೊಟ್ಟೆಪಾಡಿಗಾಗಿಯೇ ಬದುಕುವವರು ತಮ್ಮ ದಿನದ ಕೆಲಸ ಬಿಟ್ಟು ಪಡಿತರ ಡಿಪೋಗಳಿಗೆ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಯೋಜನೆ ಅಂಥವರಿಗೆ ಉಪಯೋಗವಾಗಲಿದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಎಸಿಬಿಗೆ ದೂರು

ಈವರೆಗೆ ಬಡವರು ಸಾಮಾನ್ಯವಾಗಿ ಕಳಪೆ ಗುಣಮಟ್ಟದ ಪಡಿತರ ಪಡೆಯುತ್ತಿದ್ದರು. ಅದನ್ನು ಸೇವಿಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿರಲಿಲ್ಲ. ಆದರೆ, ಎಎಪಿ ಸರ್ಕಾರವು ಈ ವ್ಯವಸ್ಥೆಯನ್ನು ಬದಲಾಯಿಸಲು ಹೊರಟಿದೆ. ನಮ್ಮ ಸರ್ಕಾರ ಉತ್ತಮ ಗುಣಮಟ್ಟದ ಪಡಿತರವನ್ನು ಶುದ್ಧ ಗೋಣಿ ಚೀಲಗಳಲ್ಲಿ ಪ್ಯಾಕ್ ಮಾಡಿ ಜನರಿಗೆ ತಲುಪಿಸಲಿದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.