ETV Bharat / bharat

ಪಂಜಾಬ್​ ಯುವಕನ ಹತ್ಯೆ ಕೇಸಲ್ಲಿ ಅಪ್ರಾಪ್ತೆ ಸೇರಿ ಮೂವರ ಬಂಧನ

ಪಂಜಾಬ್​ನಲ್ಲಿ ಯುವಕನ ಕೊಲೆ ಪ್ರಕರಣದಲ್ಲಿ ಬಾಲಕಿಯೂ ಭಾಗಿಯಾಗಿದ್ದು, ಬಂಧಿಸಲಾಗಿದೆ. ಅಲ್ಲದೇ, ಆಕೆಯ ಇನ್ನಿಬ್ಬರು ಗೆಳೆಯರನ್ನೂ ಬಂಧಿಸಿದ್ದು, 5 ದಿನ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

punjab-girl-among-three-arrested
ವೈಯಕ್ತಿಕ ದ್ವೇಷಕ್ಕೆ ಬಿತ್ತಾ ಹೆಣ?
author img

By

Published : Jun 5, 2022, 7:12 PM IST

ಅಮೃತಸರ: ಪಂಜಾಬ್​ನ ಅಮೃತಸರದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಯುವಕನ ಹತ್ಯೆ ಪ್ರಕರಣದಲ್ಲಿ ಓರ್ವ ಬಾಲಕಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಅಮೃತಸರದ ಖಾಲ್ಸಾ ಮಹಿಳಾ ಕಾಲೇಜಿನ ಮುಂದೆ ನಡೆದ ಗುಂಡಿನ ದಾಳಿಯಲ್ಲಿ ಯುವಕ ಲವ್‌ಪ್ರೀತ್ ಸಿಂಗ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು.

ಬಾಲಕಿಯೊಂದಿಗೆ ಯುವಕ ಲವ್​ಪ್ರೀತ್​ಸಿಂಗ್​ ಪರಿಚಯ ಬೆಳೆಸಿಕೊಂಡಿದ್ದ. ಇದೇ ಕಾರಣಕ್ಕಾಗಿ ಯುವತಿ ಕಡೆಯವರು ಬಂದು ಲವ್​ಪ್ರೀತ್​ಸಿಂಗ್​ ಜೊತೆ ಕಾಲೇಜಿನ ಮಂಭಾಗವೇ ಶನಿವಾರ ತಗಾದೆ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಲವ್​ಪ್ರೀತ್ ಸಿಂಗ್​ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಇದರಿಂದ ಯುವಕ ಸಾವನ್ನಪ್ಪಿದ್ದ. ಘಟನೆಯಲ್ಲಿ ಇನ್ನೊಬ್ಬನೂ ಗಾಯಗೊಂಡಿದ್ದ.

ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಸಿದ ಪೊಲೀಸರು ಬಾಲಕಿ ಮತ್ತು ಇನ್ನಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಗುಜರಾತ್​ನ ಕಛ್​ ಬಂದರಿನಲ್ಲಿ ಪಾಕಿಸ್ತಾನದಿಂದ ಸಾಗಿಸುತ್ತಿದ್ದ 48 ಕೆಜಿ ಡ್ರಗ್ಸ್ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.