ಚಂಡೀಗಢ(ಪಂಜಾಬ್): ಪಂಚರಾಜ್ಯ ವಿಧಾನಸಭೆ ಚುನಾವಣೆಗಳ ಪೈಕಿ ಪಂಜಾಬ್ ರಾಜಕೀಯ ಕೂಡ ರಂಗೇರಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಿದ್ದಾರೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಇಂದು ಅಮೃತಸರದ ಪೂರ್ವ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದರು.
-
Punjab Congress chief and party's candidate from Amritsar East, Navjot Singh Sidhu files nomination for the #PunjabElections2022 pic.twitter.com/AdzR4McxGM
— ANI (@ANI) January 29, 2022 " class="align-text-top noRightClick twitterSection" data="
">Punjab Congress chief and party's candidate from Amritsar East, Navjot Singh Sidhu files nomination for the #PunjabElections2022 pic.twitter.com/AdzR4McxGM
— ANI (@ANI) January 29, 2022Punjab Congress chief and party's candidate from Amritsar East, Navjot Singh Sidhu files nomination for the #PunjabElections2022 pic.twitter.com/AdzR4McxGM
— ANI (@ANI) January 29, 2022
ಕಳೆದ ಕೆಲ ತಿಂಗಳಿಂದ ಪಂಜಾಬ್ನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದಲ್ಲಿ ಮುಖ್ಯ ಪಾತ್ರ ವಹಿಸಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಅಪಾರ ಕಾರ್ಯಕರ್ತರ ಜೊತೆಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಮಹಿಳಾ ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್.. ಇನ್ಮುಂದೆ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ
ಕಳೆದ ಸಲ ಇದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸಿಧು, ಈ ಸಲವೂ ಜಯಭೇರಿ ಭಾರಿಸುವ ಭರವಸೆಯಲ್ಲಿದ್ದಾರೆ. ಇವರ ವಿರುದ್ಧ ಶಿರೋಮಣಿ ಅಕಾಲಿದಳದ ಮಾಜಿ ಸಚಿವ ಬಿಕ್ರಮ್ ಸಿಂಗ್ ಅವರನ್ನ ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿರುವ ಸಿಧು, ಪ್ರಜಾಪ್ರಭುತ್ವವನ್ನ ನಾನು ದಂಡತಂತ್ರವನ್ನಾಗಿ ಪರಿವರ್ತನೆ ಮಾಡಲು ಬಯಸುವುದಿಲ್ಲ. ಈ ಕ್ಷೇತ್ರದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇದೆ. ಅದು ಮುಂದುವರೆಯಲಿದೆ ಎಂದಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಎಎಪಿ, ಬಿಜೆಪಿ, ಶಿರೋಮಣಿ ಅಕಾಲಿದಳದ ನಡುವೆ ಸ್ಪರ್ಧೆ ಇದೆ. 71 ಕ್ಷೇತ್ರಗಳ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ