ETV Bharat / bharat

ಬಜೆಟ್​ ಕಾಗದ ರಹಿತ: ಪಂಜಾಬ್​ ಸಿಎಂ ಭಗವಂತ್​ ಮಾನ್​ ಘೋಷಣೆ - Punjab CM Bhagwant Man

2022 ನೇ ಸಾಲಿನ ಪಂಜಾಬ್ ಬಜೆಟ್​ ಅನ್ನು ಕಾಗದ ರಹಿತವಾಗಿ ನಡೆಸಲು ಮುಖ್ಯಮಂತ್ರಿ ಭಗವಂತ್​ ಮಾನ್​ ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿ ಅವರು ಮಾಹಿತಿ ನೀಡಿದ್ದಾರೆ.

punjab cm manns-big-announcement
ಪಂಜಾಬ್​ ಸಿಎಂ ಭಗವಂತ್​ ಮಾನ್​ ಘೋಷಣೆ
author img

By

Published : May 25, 2022, 8:34 PM IST

ಚಂಡೀಗಢ: ಸರ್ಕಾರದಲ್ಲಿ ಪಾರದರ್ಶಕತೆ ಕಾಪಾಡುತ್ತಿರುವ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಇದೀಗ ಆಡಳಿತದಲ್ಲಿ ಡಿಜಿಟಲೀಕಣಕ್ಕೆ ಒತ್ತು ನೀಡಿದ್ದು, ಈ ಸಾಲಿನ ಬಜೆಟ್​ ಅನ್ನು ಕಾಗದ ರಹಿತವಾಗಿ ನಡೆಸಲು ಘೋಷಿಸಿದ್ದಾರೆ.

ಈ ವರ್ಷದ ಪಂಜಾಬ್ ಬಜೆಟ್ ಕಾಗದ ರಹಿತವಾಗಿರುತ್ತದೆ ಎಂದು ಟ್ವೀಟ್​ ಮಾಡಿರುವ ಮಾನ್​, ಪಂಜಾಬಿಗಳಿಗೆ ಒಳ್ಳೆಯ ಸುದ್ದಿ. ಈ ಬಾರಿ ಪಂಜಾಬ್ ಸರ್ಕಾರದ ಬಜೆಟ್ ಕಾಗದ ರಹಿತವಾಗಿರಲು ನಿರ್ಧರಿಸಿದೆ. ಇದರಿಂದ 21 ಲಕ್ಷ ರೂಪಾಯಿ ಉಳಿಯಲಿದ್ದು, ಇದನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ 34 ಟನ್ ಪೇಪರ್ ಬಳಕೆ ತಪ್ಪಲಿದೆ. ಅಂದರೆ 814 ರಿಂದ 834 ಮರಗಳನ್ನು ಉಳಿಸಿದಂತಾಗುತ್ತದೆ. ಇದು ಪರಿಸರ ಹಾನಿಯನ್ನೂ ತಡೆದಂತಾಗುತ್ತದೆ ಎಂದು ಹೇಳಿದ್ದಾರೆ.

ಓದಿ: ಶಿವಲಿಂಗ ಪೂಜೆಗೆ ಅವಕಾಶ ಕೋರಿ ಅರ್ಜಿ: ತ್ವರಿತ ನ್ಯಾಯಾಲಯಕ್ಕೆ ಅರ್ಜಿ ವರ್ಗಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.