ಚಂಡೀಗಢ(ಪಂಜಾಬ್): ಶೀಘ್ರದಲ್ಲೇ ಅತ್ಯಂತ ದೊಡ್ಡ ನಿರ್ಧಾರವನ್ನು ಘೋಷಿಸುವುದಾಗಿ ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಪಂಜಾಬ್ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲೂ ತೀವ್ರ ಕುತೂಹಲ ಉಂಟಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಟ್ವೀಟ್ ಮಾಡಿರುವ ಭಗವಂತ್ ಮಾನ್ ಪಂಜಾಬ್ ಇತಿಹಾಸದಲ್ಲಿ ಯಾರೂ ಇಲ್ಲಿಯವರೆಗೆ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಂತಹ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ ಎಂದು ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಟ್ವೀಟ್ ಮಾಡಿ, ಕುತೂಹಲ ಕೆರಳಿಸಿದ್ದಾರೆ.
-
पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
— Bhagwant Mann (@BhagwantMann) March 17, 2022 " class="align-text-top noRightClick twitterSection" data="
कुछ ही देर में एलान करूँगा...।
">पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
— Bhagwant Mann (@BhagwantMann) March 17, 2022
कुछ ही देर में एलान करूँगा...।पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
— Bhagwant Mann (@BhagwantMann) March 17, 2022
कुछ ही देर में एलान करूँगा...।
ಯಾವ ವಲಯದಲ್ಲಿ ಘೋಷಣೆಯಾಗಲಿದೆ ಎಂಬುದನ್ನು ಮಾನ್ ಅವರು ಬಹಿರಂಗಪಡಿಸದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ದೆಹಲಿಯ ಮಾದರಿಯ ಆಡಳಿತದ ನಿರೀಕ್ಷೆಯಲ್ಲಿರುವ ಪಂಜಾಬ್ ಜನತೆಗೆ ಬಂಪರ್ ಆಫರ್ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಡಿಎಂಕೆ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ: ಅಧಿಕಾರ ತ್ಯಾಗಕ್ಕೆ ಪಕ್ಷದ ಅಭ್ಯರ್ಥಿಗಳಿಗೆ ಸ್ಟಾಲಿನ್ ತಾಕೀತು