ಚಂಡೀಗಡ(ಪಂಜಾಬ್): ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದ ಚರಣ್ಜಿತ್ ಸಿಂಗ್ ಚನ್ನಿ ಇಂದು ನೂತನ ಸಿಎಂ ಆಗಿ ಪದಗ್ರಹಣ ಮಾಡಿದರು. ಅಧಿಕಾರ ಸ್ವೀಕಾರ ಮಾಡಿರುವ ಮೊದಲ ದಿನವೇ ಅವರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
-
Punjab CM Shri Charanjit Singh Channi Ji’s 1st press conference. #कांग्रेस_दे_नाल_पंजाब pic.twitter.com/gkN0tEKB1L
— Punjab Congress (@INCPunjab) September 20, 2021 " class="align-text-top noRightClick twitterSection" data="
">Punjab CM Shri Charanjit Singh Channi Ji’s 1st press conference. #कांग्रेस_दे_नाल_पंजाब pic.twitter.com/gkN0tEKB1L
— Punjab Congress (@INCPunjab) September 20, 2021Punjab CM Shri Charanjit Singh Channi Ji’s 1st press conference. #कांग्रेस_दे_नाल_पंजाब pic.twitter.com/gkN0tEKB1L
— Punjab Congress (@INCPunjab) September 20, 2021
ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ, ಬಡವರ ವಿದ್ಯುತ್ ಹಾಗೂ ನೀರಿನ ಬಿಲ್ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ ಪಂಜಾಬ್ನಲ್ಲಿ ರೈತರಿಗೆ ನೀಡಲಾಗುತ್ತಿರುವ ವಿದ್ಯುತ್ ಉಚಿತವಾಗಿ ಮುಂದುವರೆಯಲಿದೆ ಎಂದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಆಡಳಿತಯಂತ್ರಕ್ಕೆ ಸರ್ಜರಿ:
ಮುಖ್ಯಮಂತ್ರಿಯಾಗಿ ಮೊದಲ ದಿನವೇ ಆಡಳಿತದಲ್ಲಿ ಮಹತ್ವದ ಬದಲಾವಣೆ ಮಾಡಿರುವ ನೂತನ ಸಿಎಂ, ಅಧಿಕಾರಿಗಳಿಗೆ ವರ್ಗಾವಣೆಯ ಬಿಸಿ ಮುಟ್ಟಿಸಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಹುಸೇನ್ ಲಾಲ್ ಇದೀಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕ್ಯಾ. ಅಮರೀಂದರ್ ಸಿಂಗ್ ಸಿಎಂ ಆಗಿದ್ದ ವೇಳೆ ಪ್ರಧಾನ ಕಾರ್ಯದರ್ಶಿಯಾಗಿದ್ದ ತೇಜ್ವೀರ್ ಸಿಂಗ್ ಅವರಿಗೆ ಬೇರೆ ಹುದ್ದೆ ನೀಡಲಾಗಿದೆ.
ಇದನ್ನೂ ಓದಿ: IPLಗೆ ಗ್ಲ್ಯಾಮರ್ ಸ್ಪರ್ಶ: ಬುಮ್ರಾ ಪತ್ನಿ ಸೇರಿ ಇವರೆಲ್ಲಾ ಹೊಡಿಬಡಿ ಆಟದ ಸ್ಟಾರ್ ಆ್ಯಂಕರ್ಸ್
ರಾಹುಲ್ ತಿವಾರಿ ಅವರನ್ನು ಸರ್ಕಾರದ ವಿಶೇಷ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಗುರುಕೀರತ್ ಕಿರಪಾಲ್ ಸಿಂಗ್ ಅವರನ್ನು ತೆಗೆದುಹಾಕಲಾಗಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದ ಅಧಿಕಾರಿಗಳನ್ನು ಬೇರೆ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
'ನಾನು 'ಆಮ್ ಆದ್ಮಿ' ಎಂದ ಪಂಜಾಬ್ ಸಿಎಂ
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚು ಜನಪ್ರೀಯತೆ ಪಡೆಯಲು ಶುರುವಾಗಿದ್ದು, ಚರಣ್ ಜಿತ್ ಸಿಂಗ್ 'ನಾನು ಆಮ್ ಆದ್ಮಿ' ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೊತೆಗೆ ಸಂಪೂರ್ಣ ಪಂಜಾಬ್ ಪ್ರವಾಸ ಮಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಂದು ಅವಧಿಗೆ ಅಧಿಕಾರಕ್ಕೆ ತರುವ ಘೋಷಣೆ ಮಾಡಿದ್ದಾರೆ. ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯುತ್ ಹಾಗೂ ನೀರಿನ ಬಿಲ್ ಮನ್ನಾ ಮಾಡುವುದಾಗಿ ಈಗಾಗಲೇ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.