ETV Bharat / bharat

29 ರಂದು ಪಂಜಾಬ್​ ಪಟಿಯಾಲಕ್ಕೆ ಅಮಿತ ಶಾ: ಲೋಕಸಭೆಗೆ ಗರಿಷ್ಠ ಸ್ಥಾನ ಗೆಲ್ಲಲ್ಲು ಹೊಸ ರಣತಂತ್ರ - ಮಾಲ್ವಾ ಪ್ರದೇಶದ ಮೇಲೆ ಬಿಜೆಪಿ ಕಣ್ಣು

ಪಂಚನದಿಗಳ ನಾಡು ಪಂಜಾಬ್‌ನಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗಳಿಸಲು ಬಿಜೆಪಿಯಿಂದ ಹೊಸ ತಂತ್ರ - ಬೇರೆ ಪಕ್ಷದ ಮುಂಚೂಣಿ ನಾಯಕರನ್ನು ಸೆಳೆಯಲೂ ಮುಂದಾಗಿರುವ ಬಿಜೆಪಿ - ಲೋಕಸಭೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ನಿರ್ಧರಿಸಿದ ಬಿಜೆಪಿ ಹಿರಿಯ ನಾಯಕರು .

BJP flag
ಬಿಜೆಪಿ ಧ್ವಜ
author img

By

Published : Jan 20, 2023, 5:01 PM IST

ಚಂಡೀಗಢ: 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನ್ನಡೆ ಅನುಭವಿಸಿದ ಬಳಿಕ, ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಾದರೂ ಸಾಧ್ಯವಾದಷ್ಟು ಗರಿಷ್ಠ ಸ್ಥಾನಗಳನ್ನು ತಾನೂ ಗೆಲ್ಲಲೇಬೇಕು ಎಂದು ಹೊಸ ತಂತ್ರಗಳನ್ನು ರೂಪಿಸುವ ಚಿಂತನೆಯಲ್ಲಿ ತೊಡಗಿದೆ.

ಮಾಲ್ವಾ ಪ್ರದೇಶದ ಮೇಲೆ ಬಿಜೆಪಿ ಕಣ್ಣು: ಪಂಜಾಬ್​​ನ​ ಆಡಳಿತಾತ್ಮಕ ಅನುಕೂಲವಾಗಿ ಮಾಲ್ವಾ, ಮಾಜಾ ಮತ್ತು ದೋಬಾ ಎಂಬ ಮೂರು ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಮಾಲ್ವಾ ಪ್ರದೇಶವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಏಳು ಲೋಕಸಭೆ ಕ್ಷೇತ್ರಗಳಾದ ಸಂಗ್ರೂರ್, ಫತೇಘರ್ ಸಾಹಿಬ್, ಪಟಿಯಾಲ, ಲುಧಿಯಾನ, ಬಟಿಂಡಾ, ಫರೀದ್‌ಕೋಟ್ ಮತ್ತು ಫಿರೋಜ್‌ಪುರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ.

ಈ ಪ್ರದೇಶದಲ್ಲಿ ಪಂಜಾಬ ರಾಜ್ಯದ 69 ವಿಧಾನಸಭೆಯ ಸ್ಥಾನಗಳಿವೆ. ಮಾಲ್ವಾದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜನವರಿ 29 ರಂದು ಮೊದಲ ಬಾರಿಗೆ ಪಟಿಯಾಲಕ್ಕೆ ಆಗಮಿಸುತ್ತಿದ್ದಾರೆ. ಪಂಜಾಬ್‌ನ 13 ಲೋಕಸಭೆ ಸ್ಥಾನಗಳಲ್ಲಿ ಬಹುತೇಕ ಮಾಲ್ವಾ ಪ್ರದೇಶವು 7 ಸ್ಥಾನಗಳನ್ನು ಹೊಂದಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ತೊರೆದು ಬಂದು ಪಕ್ಷಕ್ಕೆ ಸೇರ್ಪಡೆಗೊಂಡ ರಾಜಕೀಯ ಪ್ರಮುಖರ ಸಹಾಯದಿಂದ ಮಾಲ್ವಾದಲ್ಲಿ ಬಹುಪಾಲು ಸ್ಥಾನಗಳನ್ನು ಗೆಲ್ಲುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿ ಹಿರಿಯ ನಾಯಕರು ಮಿಷನ್ 2024 ರ ಚುನಾವಣೆಯ ಭಾಗವಾಗಿ ಮಾಲ್ವಾ ಮತ್ತು ಪಂಜಾಬ್‌ನ ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಮಜಾ ಪ್ರದೇಶವು ಪಾಕಿಸ್ತಾನದ ಗಡಿಯಲ್ಲಿದೆ. ಇದು ಪಠಾಣ್‌ಕೋಟ್, ಅಮೃತಸರ, ತರ್ನ್ ತರಣ್ ಮತ್ತು ಗುರುದಾಸ್‌ಪುರ 4 ಜಿಲ್ಲೆಗಳನ್ನು ಹೊಂದಿದೆ. ಪ್ರಸ್ತುತ ಗುರುದಾಸ್‌ಪುರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದಿದೆ. ದೋಬ್ ಪ್ರದೇಶವು ಸಟ್ಲೆಜ್ ಮತ್ತು ಬಿಯಾಸ್ ನದಿಗಳ ನಡುವೆ ಇದೆ. ಎನ್‌ಆರ್‌ಐ ಮತ್ತು ದಲಿತ ಮತಬ್ಯಾಂಕ್‌ ಹೇರಳವಾಗಿದ್ದು, ಇದರಿಂದ ಈ ಕ್ಷೇತ್ರ ಮಹತ್ವದ್ದಾಗಿದೆ. ಪ್ರಸ್ತುತ ಬಿಜೆಪಿಯ ಕೇಂದ್ರ ಸಚಿವ ಸೋಂಪ್ರಕಾಶ್ ಅವರು ಬಿಜೆಪಿ ಭದ್ರಕೋಟೆ ಆಗಿರುವ ಹೋಶಿಯಾರ್‌ಪುರದವರು.

ಪ್ರಸ್ತುತ ಪಂಜಾಬ್‌ನ 13 ಲೋಕಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿದ್ದರೆ, ನಂತರ ಅಕಾಲಿದಳ ಮತ್ತು ಬಿಜೆಪಿ ತಲಾ ಎರಡು ಸ್ಥಾನಗಳನ್ನು ಗಳಿಸಿವೆ. ಶಿರೋಮಣಿ ಅಕಾಲಿದಳ ಒಂದು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. (ಅಮೃತಸರ) ಶಿರೋಮಣಿ ಅಕಾಲಿದಳ ಪಕ್ಷದ ಏಕೈಕ ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆಲುವು ಸಾಧಿಸಿದ್ದರು.

ಬಿಜೆಪಿ ಏಕಾಂಗಿ ಸ್ಪರ್ಧೆ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಆದರೆ ಮೂರು ಕೃಷಿ ಕಾನೂನು ಜಾರಿ ಸಮಯದಲ್ಲಿ ಈ ಮೈತ್ರಿ ಮುರಿದು ಹೋಯಿತು. ಈಗ 2024 ರಲ್ಲಿ ಬಿಜೆಪಿ ಎಲ್ಲಾ 13 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿಯ ಗೇಮ್ ಪ್ಲಾನ್ ಏನು?: 2024ರ ಬಿಜೆಪಿಯ ಗೇಮ್ ಪ್ಲಾನ್ ಎಂದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಸೇರಿಕೊಂಡಿರುವ ದೊಡ್ಡ ನಾಯಕರನ್ನು ಬಳಸಿಕೊಳ್ಳುವುದು. ಅವರಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖರ್, ಬಲ್ಬೀರ್ ಸಿಂಗ್ ಸಿಧು, ಪಕ್ಷದ ಹಿರಿಯ ನಾಯಕ ರಾಣಾ ಗುರ್ಮೀತ್ ಸಿಂಗ್ ಸೋಧಿ, ರಾಜ್ ಕುಮಾರ್ ವರ್ಕಾ, ಫತೇಜಂಗ್ ಸಿಂಗ್ ಬಾಜ್ವಾ ಮತ್ತು ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಸೇರಿದ್ದಾರೆ. ಈ ನಾಯಕರಲ್ಲಿ ಹೆಚ್ಚಿನವರು ಮಾಲ್ವಾದಿಂದ ಬಂದವರು. ಆದರೆ, ರಾಜ್‌ಕುಮಾರ್ ವರ್ಕಾ ಮತ್ತು ಫತೇಹ್ ಸಿಂಗ್ ಬಾಜ್ವಾ ಅವರು ಮಜಾ ಪ್ರದೇಶದವರು.

ಪಂಜಾಬ್‌ನಲ್ಲಿ ಅಕಾಲಿದಳ ಪಕ್ಷದಿಂದ ಬೇರ್ಪಟ್ಟ ನಂತರ ಬಿಜೆಪಿಯು ಮುಂಚೂಣಿ ನಾಯಕರ ಕೊರತೆಯಿಂದ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಂಜಾಬ್ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಮತ್ತು ಬಲಿಷ್ಠ ಮುಖಗಳು ಸೇರ್ಪಡೆಯಾಗುತ್ತಿರುವುದು ಇದೇ ಪ್ರಮುಖ ಕಾರಣವಾಗಿದೆ. ಅವರಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಒಬ್ಬರಿದ್ದಾರೆ.

ಇದನ್ನೂಓದಿ:ಭಾರತ್​ ಜೋಡೋ ಸಮಾರೋಪ ಸಮಾರಂಭಕ್ಕೆ ಸಿಧುಗೆ ಆಹ್ವಾನ: ಪಂಜಾಬ್​ ನಾಯಕನ ಬಿಡುಗಡೆ ಎಂದು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.