ಸಂಗ್ರೂರ್( ಪಂಜಾಬ್): ಮತ ಎಣಿಕೆ ಪಂಜಾಬ್ನಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೆ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಗುರುವಾರ ಬೆಳಗ್ಗೆ ಸಂಗ್ರೂರಿನ ಗುರುದ್ವಾರ ಗುರುಸಾಗರ್ ಮಸ್ತುವನಾ ಸಾಹಿಬ್‌ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ, ಮಾತನಾಡಿದ ಅವರು ಪಂಜಾಬ್‌ನ ಜನರು ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸಂಗ್ರೂರಿನಲ್ಲಿರುವ ಮಾನ್ ಅವರ ನಿವಾಸದಲ್ಲಿ ಜಿಲೇಬಿಗಳ ತಯಾರಿ ನಡೆಯುತ್ತಿದ್ದು, ಗೆಲುವಿನ ಭರವಸೆ ಆಪ್ ಪಕ್ಷವಿದೆ. ಎಕ್ಸಿಟ್ ಪೋಲ್‌ಗಳೂ ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸುವುದಾಗಿ ಭವಿಷ್ಯ ನುಡಿದ ಕಾರಣದಿಂದಾಗಿನ ಮಾನ್ ಅವರ ನಿವಾಸವನ್ನೂ ಹೂವಿನಿಂದ ಅಲಂರಿಸಲಾಗಿದೆ. ಈಗ ಸದ್ಯದ ಟ್ರೆಂಡ್ನಂತೆ ಆಪ್ 66 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 18, ಅಕಾಲಿದಳ 14, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
PUNJAB (102/117) | |||||
---|---|---|---|---|---|
INC | AAP | SAD+ | BJP+ | OTH | |
19 | 66 | 14 | 2 | 1 |
ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮುನ್ನಡೆ ಸಾಧಿಸಿದ್ದು, ಪಂಜಾಬ್ ಸಿಎಂ ಅಭ್ಯರ್ಥಿ ಚರಣ್ಜಿತ್ ಸಿಂಗ್ ಚೆನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಹಿನ್ನಡೆಯಲ್ಲಿದ್ದಾರೆ.
ಇದನ್ನೂ ಓದಿ: Goa Result: ಕಾಂಗ್ರೆಸ್ ಮುನ್ನಡೆ.. ಸಿಎಂಗೆ ಹಿನ್ನಡೆ: ಕಿಂಗ್ ಮೇಕರ್ ಆಗುವತ್ತ ಟಿಎಂಸಿ?