ತೆನಾಲಿ (ಆಂಧ್ರಪ್ರದೇಶ): ಆಕಾರದಲ್ಲಿ ಚಿಕ್ಕದಾಗಿದ್ರು ಸುಂದರವಾಗಿ ಕಾಣುವ ಪುಂಗನೂರು ಹಸುಗಳು ನೋಡುಗರ ಮನಸೆಳೆಯುತ್ತವೆ. ಹಾಲಿನ ಇಳುವರಿ ಕಡಿಮೆಯಾದರೂ ಅವುಗಳನ್ನು ಮೇಯಿಸುವ ವೆಚ್ಚ ಹೆಚ್ಚಿಲ್ಲ. ಪುಂಗನೂರು ಭಾಗದಲ್ಲಿ ಒಂದು ಕಾಲದಲ್ಲಿ ಹೇರಳವಾಗಿದ್ದ ಈ ತಳಿಯ ಹಸುಗಳು ಕ್ರಮೇಣ ವಿನಾಶದ ಹಂತ ತಲುಪಿವೆ. ಕೆಲವು ರೈತರು ಈ ತಳಿಯ ಹಸುಗಳನ್ನು ಈಗಲೂ ಸಾಕುತ್ತಿದ್ದಾರೆ.
ಈ ಹಸುಗಳನ್ನು ಮನೆಯಲ್ಲಿ ಸಾಕುವುದು ಒಳ್ಳೆಯದು ಎಂದು ನಂಬುವವರ ಸಂಖ್ಯೆ ಹೆಚ್ಚಿದೆ. ಪುಂಗನೂರು ಹಸುಗಳು ದಿನಕ್ಕೆ 2 ಅಥವಾ 3 ಲೀಟರ್ ಹಾಲು ನೀಡುತ್ತವೆ. ಈ ಹಾಲಿನಲ್ಲಿ ಶೇ. 8 ರಷ್ಟು ಬೆಣ್ಣೆ ಇರುತ್ತದೆ. ಸಾಮಾನ್ಯ ತಳಿಯ ಹಸುಗಳು ಕೇವಲ 3 ಅಥವಾ 4 ಪ್ರತಿಶತದಷ್ಟು ಮಜ್ಜಿಗೆಯನ್ನು ಹೊಂದಿರುತ್ತವೆ. ಗುಂಟೂರು ಜಿಲ್ಲೆಯ ತೆನಾಲಿಯ ಕಂಚಾರ್ಲ ಶಿವಕುಮಾರ್ ವಿವಿಧ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ ಪುಂಗನೂರು ತಳಿಯ ಹಸು ಕೂಡ ಇದೆ.
ಇವರ ಬಳಿ ಪುಂಗನೂರು ತಳಿಯ ಹಸು ಇರುವುದು ಗೊತ್ತಾಗುತ್ತಿದ್ದಂತೆ, ಹರಿದ್ವಾರದ ಬಾಬಾ ರಾಮದೇವ್ ಆಶ್ರಮದ ಪ್ರತಿನಿಧಿಗಳು ತೆನಾಲಿಗೆ ಬಂದಿದ್ದಾರೆ. ಈ ಪುಂಗನೂರು ಹಸುವನ್ನು ನೋಡಿ ಇಷ್ಟಪಟ್ಟು, 4.10 ಲಕ್ಷ ರೂಪಾಯಿ ಹಣ ನೀಡಿ ಖರೀದಿಸಿದ್ದಾರೆ. ತೆನಾಲಿ ಪಶು ವೈದ್ಯಾಧಿಕಾರಿ ನಾಗಿರೆಡ್ಡಿ ಮಾತನಾಡಿ, ಪುಂಗನೂರು ತಳಿಯ ಹಸುಗಳಿಗೆ ಉತ್ತಮ ಬೇಡಿಕೆ ಇದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: ಮೂಢನಂಬಿಕೆಯ ಪರಮಾವಧಿ..! ಋತುಮತಿಯಾದ ವಿದ್ಯಾರ್ಥಿನಿಯರಿಗೆ ಸಸಿ ನೆಡದಂತೆ ಶಿಕ್ಷಕಿಯ ತಾಕೀತು