ETV Bharat / bharat

6 ವರ್ಷದಿಂದ ಕುಟುಂಬದಿಂದಲೇ ಲೈಂಗಿಕ ದೌರ್ಜನ್ಯ.. 17 ವರ್ಷದ ಬಾಲಕಿ ಸ್ಥಿತಿ ಗಂಭೀರ ಆರೋಪ - pune girl rape in maharastra by family

ತನ್ನ ಮೇಲೆ ಕುಟುಂಬಸ್ಥರಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿ ಆರೋಪಿಸಿದ್ದು, ಪ್ರಕರಣ ಮಹಾರಾಷ್ಟ್ರದಲ್ಲಿ ಕಳವಳ ಉಂಟು ಮಾಡಿದೆ.

pune-girl-raped-by-father-kin-for-six-years
6 ವರ್ಷದಿಂದ ಕುಟುಂಬದಿಂದಲೇ ಲೈಂಗಿಕ ದೌರ್ಜನ್ಯ
author img

By

Published : Nov 17, 2022, 6:07 PM IST

ಪುಣೆ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಆಘಾತಕಾರಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಮೇಲೆ ಅಪ್ಪ, ಚಿಕ್ಕಪ್ಪ, ಅಜ್ಜ ಸೇರಿ 6 ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 17 ವರ್ಷದ ಬಾಲಕಿ ಗಂಭೀರ ಆರೋಪ ಮಾಡಿದ್ದು, ಕೇಸ್​ನಲ್ಲಿ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದ ಮೂಲದವರಾದ ಬಾಲಕಿಯ ಕುಟುಂಬ ಮಹಾರಾಷ್ಟ್ರದ ಪುಣೆಗೆ ಕೆಲ ವರ್ಷಗಳ ಹಿಂದೆ ಸ್ಥಳಾಂತರವಾಗಿತ್ತು. ಇಲ್ಲಿಯೇ ನೆಲೆಸಿದ್ದ ಆಕೆ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬುಧವಾರ ಕಾಲೇಜಿನಲ್ಲಿ ನಡೆದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕುರಿತಾದ ಕಾರ್ಯಕ್ರಮದಲ್ಲಿ ಬಾಲಕಿ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ.

ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಬಾಲಕಿಯ ಹೇಳಿಕೆ ಪಡೆದು, ಈ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ತನ್ನ ಮೇಲೆ ಉತ್ತರಪ್ರದೇಶದಲ್ಲಿದ್ದಾಗ ಮತ್ತು ಪುಣೆಗೆ ವರ್ಗವಾದ ಬಳಿಕವೂ ಕುಟುಂಬಸ್ಥರಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ತಕ್ಷಣವೇ ಕ್ರಮಕ್ಕೆ ಮುಂದಾದ ಪೊಲೀಸರು ಬಾಲಕಿಯ ತಂದೆ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅಜ್ಜ ಮತ್ತು ಚಿಕ್ಕಪ್ಪನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಓದಿ: ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.