ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಅವರು ಡಿಸೆಂಬರ್ 16ರಂದು ಶ್ರೀನಗರದಲ್ಲಿ ಸಾರ್ವಜನಿಕ ದರ್ಬಾರ್ ನಡೆಸಿದರು. ಸಾರ್ವಜನಿಕರಿಗೆ ನೇರವಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಈ ಸಭೆ ಅವಕಾಶ ಮಾಡಿಕೊಟ್ಟಿತು.
ಈ ಸಾರ್ವಜನಿಕ ಪರಿಹಾರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು. ಪಬ್ಲಿಕ್ ದರ್ಬಾರ್ ಸಮಯದಲ್ಲಿ, ಆರ್ ಆರ್ ಸ್ವೈನ್ ಅವರು ಜನರ ಕುಂದುಕೊರತೆಗಳನ್ನು ಆಲಿಸಿದರು. ಜೊತೆಗೆ ತ್ವರಿತ, ಸೂಕ್ತ ಕ್ರಮದ ಭರವಸೆಯನ್ನೂ ನೀಡಿದರು.
ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಈ ಮುಕ್ತ ಸಂವಾದ ನಂಬಿಕೆ ಮತ್ತು ತಿಳುವಳಿಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜೊತೆಗೆ, ಸಮುದಾಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಇಂತಹ ಸಾರ್ವಜನಿಕ ದರ್ಬಾರ್‌ಗಳು ಪೊಲೀಸರ ಬದ್ಧತೆಯನ್ನು ಸಾಬೀತುಪಡಿಸುತ್ತವೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವಲ್ಲಿ ಮುಕ್ತ ಸಂವಹನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಪುಲ್ವಾಮಾ: ಮತ್ತೊಂದೆಡೆ ಸುರಕ್ಷತೆಯೊಂದಿಗೆ ವಿಕಾಸದೆಡೆಗೆ ಎಂಬ ಧ್ಯೇಯವಾಕ್ಯದಡಿ ಕಾಶ್ಮೀರ ಗಡಿ ಭದ್ರತಾ ಪಡೆ (Frontier Hqr Border Security Force) ಡಿಸೆಂಬರ್ 16 ರಂದು ನಾಗರಿಕ ಚಟುವಟಿಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಡಿ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಲಂಗ್‌ಪೋರಾದ ಹಳ್ಳಿ ಪ್ರದೇಶಗಳ ಬಡ ಗ್ರಾಮಸ್ಥರಿಗೆ ಕೆಲ ಸೌಲಭ್ಯ ಒದಗಿಸಲಾಗುತ್ತಿದೆ.
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನ ಅಶೋಕ್ ಯಾದವ್ ಅವರು ಬೇಸಿಕ್ ಕಂಪ್ಯೂಟರ್ ಕೋರ್ಸ್ ಮತ್ತು ಗ್ರಾಹಕ ಸಂಬಂಧ ನಿರ್ವಹಣಾ ಕೋರ್ಸ್‌ನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಐಸಿಐಸಿಐ ಬ್ಯಾಂಕ್ ಪ್ರಾಯೋಜಿತ 15 ಕಂಪ್ಯೂಟರ್‌ಗಳನ್ನು ಮಲಂಗ್‌ಪೋರಾ ಮತ್ತು ಪಡಗಂಪೊರಾ ಶಾಲೆಯ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಉಚಿತ ವೈದ್ಯಕೀಯ ಶಿಬಿರವನ್ನು ಸಹ ಉದ್ಘಾಟಿಸಲಾಯಿತು.
ಇದನ್ನೂ ಓದಿ: 'ಹೆಮ್ಮೆಯ ಕ್ಷಣ': ಮೊಮ್ಮಗಳು ಆರಾಧ್ಯ ಪ್ರತಿಭೆಗೆ ಮನಸೋತ ಅಮಿತಾಭ್ ಬಚ್ಚನ್
ಇವುಗಳ ಜೊತೆಗೆ, ಬಿಎಸ್ಎಫ್ ಮತ್ತು ಇತರೆ ಸಶಸ್ತ್ರ ಪಡೆಗಳಲ್ಲಿ ಮುಂಬರುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಯುವಕರನ್ನು ಸಿದ್ಧಪಡಿಸಲು ಬಿಎಸ್ಎಫ್ ನೇಮಕಾತಿ ರ್ಯಾಲಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು. ಕೃಷಿ ವಿಜ್ಞಾನ ಕೇಂದ್ರ, ಮಲಂಪೊರ ಮತ್ತು ಪದಗಂಪೊರ ಶಾಲೆಯ ವಿದ್ಯಾರ್ಥಿಗಳು ಹಾಗೂ ಬಿಎಸ್‌ಎಫ್‌ನ ಪಡೆಗಳು ಪ್ರಸ್ತುತಪಡಿಸಿದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಈ ಕಾರ್ಯಕ್ರಮವು ಮುಕ್ತಾಯಗೊಂಡಿತು. ಬಿಎಸ್‌ಎಫ್‌ನ ಸಂಪೂರ್ಣ ಕಾರ್ಯಕ್ರಮವು ಯುವಕರು ಮತ್ತು ಗ್ರಾಮಸ್ಥರ ಮೆಚ್ಚುಗೆ ಗಳಿಸಿತು. ಜನಸಾಮಾನ್ಯರ ಅನುಕೂಲಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಆಯೋಜಿಸುವಂತೆ ವಿನಂತಿಸಿದರು.
ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕೆ ಭೂಮಿ ವಿಚಾರ: ದನಿಯೆತ್ತಿದ ಕಿಚ್ಚ, ಡಾಲಿ