ETV Bharat / bharat

ಇಸ್ರೋದ PSLV-C50 ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ ಸಂವಹನ ಉಪಗ್ರಹ - ಪೋಲಾರ್ ಉಪಗ್ರಹ ಉಡಾವಣಾ ವಾಹನ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ-ಸಿ50) ವನ್ನು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹ ದೇಶದಲ್ಲಿ ವಿಪತ್ತು ನಿರ್ವಹಣೆ ಮತ್ತು ಅಂತರ್ಜಾಲ ವೃದ್ಧಿಗೆ ಸಹಕಾರಿಯಾಗಲಿದೆ.

PSLV-C50 lifts off from spaceport at Sriharikota
ಸಿಎಂಎಸ್-01 ಉಪಗ್ರಹ ಉಡಾವಣೆ ಯಶಸ್ವಿ
author img

By

Published : Dec 17, 2020, 4:42 PM IST

Updated : Dec 17, 2020, 5:52 PM IST

ಶ್ರೀಹರಿಕೋಟ: ಸಂವಹನ ಉಪಗ್ರಹವನ್ನು ಹೊತ್ತು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದ ಪಿಎಸ್ಎಲ್‌ವಿ-ಸಿ50 ರಾಕೆಟ್,‌ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದೆ.

ಈ ಉಪಗ್ರಹದಿಂದ ಇಡೀ ದೇಶ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳೂ ಕೂಡಾ ಪ್ರಯೋಜನ ಪಡೆಯಲಿವೆ.

ಇಸ್ರೋದ PSLV-C50 ಉಡ್ಡಯನ ಯಶಸ್ವಿ

ಪಿಎಸ್‌ಎಲ್‌ವಿ-ಸಿ50ಯ 52ನೇ ಉಡ್ಡಯನ ಇದಾಗಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದ ಎರಡನೇಯ ಉಡಾವಣಾ ಘಟಕದಿಂದ ಮಧ್ಯಾಹ್ನ ಸರಿಯಾಗಿ 3 ಗಂಟೆ 41 ನಿಮಿಷಕ್ಕೆ ಉಪಗ್ರಹದ ಉಡ್ಡಯನ ನಡೆಯಿತು.

ಸದ್ಯ ಕಕ್ಷೆಯಲ್ಲಿರುವ CMS-01 ಸಂವಹನ ಉಪಗ್ರಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ನಿಗದಿತ ಸ್ಲಾಟ್‌ನಲ್ಲಿ ಉಪಗ್ರಹವನ್ನು ಇರಿಸಲಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿಜ್ಞಾನಿಗಳ ತಂಡಗಳು ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಿವೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್ ಪ್ರಶಂಸೆ ವ್ಯಕ್ತಪಡಿಸಿದರು.

Last Updated : Dec 17, 2020, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.