ETV Bharat / bharat

ಫೋಲ್ಡ್​ ಸೈಕಲ್​ ವಿನ್ಯಾಸಗೊಳಿಸಿ ಪೇಟೆಂಟ್ ಪಡೆದ ಕಾಲೇಜು ಪ್ರಾಧ್ಯಾಪಕ

author img

By

Published : Aug 29, 2022, 10:19 PM IST

ಸಿಂಹಗಡ ಇಂಜಿನಿಯರಿಂಗ್ ಕಾಲೇಜ್​ನ ಪ್ರಾಧ್ಯಾಪಕರೊಬ್ಬರು ಫೋಲ್ಡ್​ ಸೈಕಲ್​ವಿನ್ಯಾಸಗೊಳಿಸಿದ್ದಾರೆ.

ಫೋಲ್ಡ್​ ಸೈಕಲ್
ಫೋಲ್ಡ್​ ಸೈಕಲ್

ಮಹಾರಾಷ್ಟ್ರ(ಪುಣೆ)​: ಮೂರು ವರ್ಷಗಳ ಅವಿರತ ಪ್ರಯತ್ನದ ನಂತರ ಇಲ್ಲಿನ ಸಿಂಹಗಡ ಇಂಜಿನಿಯರಿಂಗ್ ಪ್ರಾಧ್ಯಾಪಕರೊಬ್ಬರು ಫೋಲ್ಡ್ ಸೈಕಲ್​ ತಯಾರಿಸಿದ್ದಾರೆ. ಮಂದಾರ ದಿಲೀಪ್ ಪಾಟೀಲ್ (40) ಸಿನ್ಹಗಡ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕರು. ಈ ಕಾಲೇಜಿನ ಕ್ಯಾಂಪಸ್ ತುಂಬಾ ವಿಶಾಲವಾಗಿದೆ. ಕಾಲೇಜಿನಿಂದ ಹಾಸ್ಟೆಲ್‌ಗಿರುವ ಅಂತರ ಕಡಿಮೆಯಾದರೂ ಇಲ್ಲಿನ ವಿದ್ಯಾರ್ಥಿಗಳು ಬೈಕ್‌ಗಳನ್ನೇ ತರುತ್ತಾರೆ. ವಿದ್ಯಾರ್ಥಿಗಳ ಬೈಕ್‌ಗಳು ಎಲ್ಲೆಂದರಲ್ಲಿ ಇಲ್ಲಿ ತುಂಬಿ ತುಳುಕುತ್ತಿವೆ.

ಅಲ್ಲದೆ, ಸೈಕ್ಲಿಸ್ಟ್‌ಗಳಿಗೆ ಸೈಕಲ್‌ ಸ್ಟ್ಯಾಂಡ್‌ಗಳ ಕೊರತೆಯಿಂದ ಸೈಕಲ್‌ಗಳ ಬಳಕೆ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ಮಡಚಿ ಒಯ್ಯಬಹುದಾದ ಸೈಕಲ್ ತಯಾರಿಸುವ ಯೋಚನೆ ಮಾಡಿದ ಪಾಟೀಲ್, ಅಲ್ಲಿಂದ ಸೈಕಲ್ ತಯಾರಿಕೆ ಆರಂಭಿಸಿದರು. ಪಾಟೀಲ್ ತಮ್ಮ ಮನೆ ಸಮೀಪದ ಕಾರ್ಖಾನೆಯೊಂದರಲ್ಲಿ 12 ಸಾವಿರ ರೂಪಾಯಿ ವೆಚ್ಚದಲ್ಲಿ ಮಡಚುವ ಸೈಕಲ್ ವಿನ್ಯಾಸಗೊಳಿಸಿ 3 ವರ್ಷಗಳ ಹಿಂದೆ ತಯಾರಿಸಲು ಆರಂಭಿಸಿದ್ದರು. ಇದೀಗ ಮಡಿಸಿದ ಬೈಸಿಕಲ್‌ ಸಿದ್ಧಗೊಳಿಸಿ ಪೇಟೆಂಟ್ ಸಹ ಪಡೆದಿದ್ದಾರೆ.

ಈ ಬೈಸಿಕಲ್ ತೂಕ 13 ಕೆಜಿ ಇದೆ. ನಾಲ್ಕು ರೀತಿಯ ಮಾದರಿಗಳನ್ನು ಹೊಂದಿದೆ. ಮೆಬನ್ ಮೊಬಿಲಿಟಿ ಇನೋವೇಶನ್​ ಎಂಬ ಈ ಸ್ಟಾರ್ಟಪ್ ಈ ಬೈಸಿಕಲ್ ತಯಾರಿಸುತ್ತಿದೆ. ಪ್ರಸ್ತುತ ಬೆಲೆ 12 ಸಾವಿರ ರೂ ಇದೆ.

ಫೋಲ್ಡ್​ ಸೈಕಲ್ ವಿನ್ಯಾಸಗೊಳಿಸಿದ ಪ್ರಾಧ್ಯಾಪಕ ಮಂದಾರ ದಿಲೀಪ್ ಪಾಟೀಲ್ ಜೊತೆ ಸಂದರ್ಶನ

ಸೈಕಲ್ ಬಳಕೆ ಪ್ರಮಾಣ ಹೆಚ್ಚಳ: ಪುಣೆಯಲ್ಲಿ ತಿರುಗಾಡಬೇಕೆಂದರೆ ಬೈಕ್ ಇಲ್ಲದೆ ಬೇರೆ ದಾರಿಯಿಲ್ಲ. ಒಂದೆರಡು ಕಿಮೀ ಹೋಗಬೇಕೆಂದರೂ ಬೈಕ್ ತೆಗೆದುಕೊಳ್ಳುತ್ತೇವೆ. ಈ ಕಾರಣದಿಂದ ಕಾಲೇಜ್​ಗೆ ಹೋಗುವ ವಯಸ್ಸಿನಿಂದಲೇ ಸೈಕಲ್ ತುಳಿಯುವ ಹವ್ಯಾಸ ಆರಂಭಿಸಿದರೆ ಮುಂದೆ ಸೈಕಲ್ ಬಳಕೆ ಪ್ರಮಾಣ ಹೆಚ್ಚಾಗಲಿದೆ ಎಂಬುದು ಪಾಟೀಲರ ಅಭಿಪ್ರಾಯ.

ಮಾಲಿನ್ಯವೂ ಕಡಿಮೆಯಾಗುತ್ತೆ: ಈ ಸೈಕಲ್‌ನಿಂದ ಸುಲಭ ವ್ಯಾಯಾಮ, ಆರ್ಥಿಕ ಉಳಿತಾಯ ಮತ್ತು ಮಾಲಿನ್ಯ ಕಡಿತವಾಗಲಿದೆ. ಆದರೆ, ಸೈಕಲ್ ಸ್ಟ್ಯಾಂಡ್ ಇಲ್ಲದ ಕಾರಣ ಸೈಕಲ್‌ಪ್ರಿಯರಿಗೆ ಸೈಕಲ್ ಅನ್ನು ಎಲ್ಲಿ ನಿಲ್ಲಿಸುವುದು ಎಂಬುದೇ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಈಗ ಈ ಸಮಸ್ಯೆ ಈ ಸೈಕಲ್‌ನಿಂದ ಸುಲಭವಾಗಿ ಬಗೆಹರಿಯಲಿದೆ.

ಇದನ್ನೂ ಓದಿ: ಗ್ರಾಹಕರಿಗೆ ಭರ್ಜರಿ ಗಿಫ್ಟ್​ ನೀಡಿದ ಅಂಬಾನಿ: ದೀಪಾವಳಿಗೆ ಸಿಗಲಿದೆ ಕೈಗೆಟಕುವ ದರದಲ್ಲಿ 5G ಸೇವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.