ETV Bharat / bharat

ಮೊದಲ ಮಹಿಳಾ ಸರ್ಕಾರಿ ಬಸ್ ಚಾಲಕಿಯಾಗಿ ಪ್ರಿಯಾಂಕಾ ಶರ್ಮಾ ಸಾಧನೆ

ಪ್ರಿಯಾಂಕಾ ಶರ್ಮಾ ಅವರು ಉತ್ತರ ಪ್ರದೇಶದ ಮೊದಲ ಮಹಿಳಾ ಸರ್ಕಾರಿ ಬಸ್ ಚಾಲಕಿ ಎನಿಸಿಕೊಂಡಿದ್ದಾರೆ.

priyanka sharma
ಪ್ರಿಯಾಂಕಾ ಶರ್ಮಾ
author img

By

Published : Dec 23, 2022, 11:03 AM IST

Updated : Dec 23, 2022, 11:57 AM IST

ಲಖನೌ (ಉತ್ತರ ಪ್ರದೇಶ): ಇಂದು ಹೆಣ್ಣು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ನೇಮಕ ಮಾಡಿಕೊಂಡಿದ್ದ 26 ಮಹಿಳಾ ಚಾಲಕರ ಪೈಕಿ ಪ್ರಿಯಾಂಕಾ ಶರ್ಮಾ ಅವರು ತಮ್ಮ ಜೀವನದ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ರಾಜ್ಯದ ಮೊದಲ ಸರ್ಕಾರಿ ಬಸ್ ಚಾಲಕಿ ಎನಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕಾ, 'ಅತಿಯಾದ ಕುಡಿತದಿಂದ ಎರಡೂ ಕಿಡ್ನಿ ವಿಫಲಗೊಂಡು ನನ್ನ ಪತಿ ನಿಧನರಾದರು. ಗಂಡನ ಮರಣದ ನಂತರ ನನ್ನ ಇಬ್ಬರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಬಳಿಕ ನಾನು ಕೆಲಸಕ್ಕಾಗಿ ದೆಹಲಿಗೆ ಸ್ಥಳಾಂತರವಾದೆ. ಆರಂಭದಲ್ಲಿ ನನಗೆ ಕಾರ್ಖಾನೆಯಲ್ಲಿ ಸಹಾಯಕಿಯ ಕೆಲಸ ಸಿಕ್ಕಿತ್ತು.

ನಂತರ ಚಾಲಕಿಯಾಗಿ ಸೇರಿಕೊಂಡೆ. ಡ್ರೈವಿಂಗ್ ಕೋರ್ಸ್ ತೆಗೆದುಕೊಂಡ ನಂತರ ನಾನು ಮುಂಬೈಗೆ ತೆರಳಿದೆ, ಬಳಿಕ ಬಂಗಾಳ ಮತ್ತು ಅಸ್ಸೋಂನಂತಹ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿದೆ. ಮಹಿಳಾ ಬಸ್​ ಚಾಲಕಿಯಾಗಿ ಉತ್ತಮ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದರು.

ಇದನ್ನೂ ಓದಿ: ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ ಬಂಧನ : ಮೈಸೂರು ಪೊಲೀಸ್ ಕಮಿಷನರ್

"2020 ರಲ್ಲಿ ಯೋಗಿ ಮತ್ತು ಮೋದಿಯವರು ಮಹಿಳಾ ಚಾಲಕಿಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ನಾನು ಕೂಡ ಒಂದು ಫಾರ್ಮ್ ಭರ್ತಿ ಮಾಡಿದೆ. ಮೇ ತಿಂಗಳಿನಲ್ಲಿ ತರಬೇತಿ ಪಾಸ್​ ಮಾಡಿ ಸೆಪ್ಟೆಂಬರ್‌ನಲ್ಲಿ ನನ್ನ ಪೋಸ್ಟಿಂಗ್ ಪಡೆದುಕೊಂಡೆ. ಸಂಬಳ ಕಡಿಮೆಯಾದರೂ ಕೂಡ ನಮಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಮಹಿಳೆಗೆ ದಿಢೀರ್‌ ಎದೆನೋವು: ಸೀದಾ ಆಸ್ಪತ್ರೆಗೆ ಬಸ್‌ ಚಲಾಯಿಸಿ ಪ್ರಾಣ ಉಳಿಸಿದ ಚಾಲಕ!

Last Updated : Dec 23, 2022, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.