ನವದೆಹಲಿ : ಕೋವಿಡ್ ಸಂಬಂಧಿ ಅಂಕಿ-ಅಂಶಗಳಲ್ಲಿ ಸರ್ಕಾರ ತಪ್ಪು ಎಸಗುತ್ತಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ಸಾವಿನ ಕುರಿತು ಸರ್ಕಾರದ ಅಂಕಿ-ಅಂಶಗಳು ಮತ್ತು ಶವಾಗಾರದಲ್ಲಿನ ಅಂಕಿ-ಅಂಶಗಳ ನಡುವೆ ಏಕೆ ಅಂತಹ ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರವು ಕೋವಿಡ್ ಹರಡುವುದು ತಡೆಯುವ ಮತ್ತು ಜಾಗೃತಿ ಕಾರ್ಯದ ಬದಲು ದತ್ತಾಂಶವನ್ನು ಪ್ರಚಾರದ ಸಾಧನವನ್ನಾಗಿ ಏಕೆ ಬಳಸುತ್ತಿದೆ? ಎಂದು ಜಿಮ್ಮೇದಾರ್ ಕೌನ್ (ಜವಾಬ್ದಾರಿ ಯಾರು) ಎಂಬ ಹ್ಯಾಶ್ಟ್ಯಾಗ್ ಬಳಿಸಿ ಟ್ವೀಟ್ ಮಾಡಿದ್ದಾರೆ.
-
कोविड से हुई मौतों के बारे में सरकार के आँकड़ों और श्मशानों-कब्रिस्तानों के आँकड़ों में इतना फर्क क्यों?
— Priyanka Gandhi Vadra (@priyankagandhi) June 8, 2021 " class="align-text-top noRightClick twitterSection" data="
मोदी सरकार ने आँकड़ों को जागरूकता फैलाने और कोविड वायरस के फैलाव को रोकने का साधन बनाने के बजाय प्रोपागैंडा का साधन क्यों बना दिया? #ZimmedarKaun pic.twitter.com/KQVwhqJFju
">कोविड से हुई मौतों के बारे में सरकार के आँकड़ों और श्मशानों-कब्रिस्तानों के आँकड़ों में इतना फर्क क्यों?
— Priyanka Gandhi Vadra (@priyankagandhi) June 8, 2021
मोदी सरकार ने आँकड़ों को जागरूकता फैलाने और कोविड वायरस के फैलाव को रोकने का साधन बनाने के बजाय प्रोपागैंडा का साधन क्यों बना दिया? #ZimmedarKaun pic.twitter.com/KQVwhqJFjuकोविड से हुई मौतों के बारे में सरकार के आँकड़ों और श्मशानों-कब्रिस्तानों के आँकड़ों में इतना फर्क क्यों?
— Priyanka Gandhi Vadra (@priyankagandhi) June 8, 2021
मोदी सरकार ने आँकड़ों को जागरूकता फैलाने और कोविड वायरस के फैलाव को रोकने का साधन बनाने के बजाय प्रोपागैंडा का साधन क्यों बना दिया? #ZimmedarKaun pic.twitter.com/KQVwhqJFju
ಕೇಂದ್ರ ಸರ್ಕಾರ ಕೋವಿಡ್ ಸಂಬಂಧಿ ದತ್ತಾಂಶಗಳನ್ನ ಹತ್ತಿಕ್ಕುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕಾ, ಸಾಮಾಜಿಕ ಜಾಲತಾಣವನ್ನು ಬಿಜೆಪಿ ಪ್ರಚಾರ ಸಾಧನವಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ಆರಂಭದಿಂದಲೂ ಮೋದಿ ಸರ್ಕಾರ ಕೋವಿಡ್ ಅಂಕಿ-ಅಂಶಗಳನ್ನು ಕೋವಿಡ್ ಹರಡದಂತೆ ತಡೆಯುವ ಸಾಧನವಾಗಿ ಬಳಸದೆ, ಕೇವಲ ಪ್ರಚಾರಕ್ಕಾಗಿ ಬಳಿಸಿದೆ ಎಂದು ಆರೋಪಿಸಿದ್ದಾರೆ.
ಓದಿ: ಅಮಿತ್ ಶಾ ಭೇಟಿ ಮಾಡಿದ ಸುವೇಂದು ಅಧಿಕಾರಿ: ಪಶ್ಚಿಮ ಬಂಗಾಳ ಹಿಂಸಾಚಾರ ಕುರಿತು ಚರ್ಚೆ