ETV Bharat / bharat

ಯುಪಿ ವಿಧಾನಸಭೆ ಚನಾವಣೆ ಕಸರತ್ತು ; ಲಖನೌನಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ - ಲಖನೌ

ಆಗಸ್ಟ್‌ 19ರಂದು ಜನ ಸಂಪರ್ಕ ಕಾರ್ಯಕ್ರಮವನ್ನು ಉತ್ತರಪ್ರದೇಶ ಕಾಂಗ್ರೆಸ್‌ ಆರಂಭಿಸಿತ್ತು. ರಾಜ್ಯದ 30 ಸಾವಿರ ಗ್ರಾಮಗಳು ಹಾಗೂ ವಾರ್ಡ್‌ ಜನರನ್ನು ಭೇಟಿ ಮಾಡುವ ಗುರಿಯನ್ನು ಕೈ ನಾಯಕರು ಹೊಂದಿದ್ದಾರೆ..

Priyanka Gandhi meets State Election Committee in Lucknow
ಯುಪಿ ವಿಧಾನಸಭೆ ಚನಾವಣೆ ಕಸರತ್ತು; ಲಖನೌನಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ
author img

By

Published : Sep 11, 2021, 3:37 PM IST

ಲಖನೌ(ಉತ್ತರಪ್ರದೇಶ) : ಮುಂಬರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ಕಸರತ್ತು ಆರಂಭಿಸಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕಾ, ಈ ಬಾರಿ ಯುಪಿ ಕಾಂಗ್ರೆಸ್‌ ಸಮಿತಿಗಳ ಸಭೆಯಲ್ಲಿನ ಚರ್ಚೆ ತುಂಬಾ ಫಲಪ್ರದವಾಗಿದೆ. ಪಕ್ಷದ ಹಿರಿಯರು, ಯುವ, ಮಹಿಳಾ ಹಾಗೂ ಇತರೆ ವಿಭಾಗಗಳ ಮುಖ್ಯಸ್ಥರು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. 'ಪ್ರತಿಯೊಬ್ಬರು ಭಾಗವಹಿಸುವಿಕೆ, ಪ್ರತಿಯೊಬ್ಬರಿಗೂ ಜವಾಬ್ದಾರಿ'ಯ ಮಂತ್ರದೊಂದಿಗೆ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

  • उप्र कांग्रेस कमेटी कार्यालय में प्रदेश चुनाव समिति की बैठक

    इस बार चुनाव समिति में वरिष्ठ सदस्यों, युवाओं, महिलाओं एवं संगठन के पदाधिकारियों की भागीदारी के चलते बहुत सार्थक चर्चा हुई।

    सबकी भागीदारी, सबकी जिम्मेदारी के मंत्र के साथ कांग्रेस ने चुनावों के लिए जोरदार दस्तक दी है। pic.twitter.com/QukC8jSgUa

    — Priyanka Gandhi Vadra (@priyankagandhi) September 11, 2021 " class="align-text-top noRightClick twitterSection" data=" ">

3 ದಿನಗಳ ಉತ್ತರಪ್ರದೇಶ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ಗುರುವಾರ ಲಖನೌಗೆ ಆಗಮಿಸಿದ್ದರು. ಚುನಾವಣೆ ಸಂಬಂಧ ಪಕ್ಷದ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಆಗಸ್ಟ್‌ 19ರಂದು ಜನ ಸಂಪರ್ಕ ಕಾರ್ಯಕ್ರಮವನ್ನು ಉತ್ತರಪ್ರದೇಶ ಕಾಂಗ್ರೆಸ್‌ ಆರಂಭಿಸಿತ್ತು. ರಾಜ್ಯದ 30 ಸಾವಿರ ಗ್ರಾಮಗಳು ಹಾಗೂ ವಾರ್ಡ್‌ ಜನರನ್ನು ಭೇಟಿ ಮಾಡುವ ಗುರಿಯನ್ನು ಕೈ ನಾಯಕರು ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.