ETV Bharat / bharat

ರಸ್ತೆ ತಿರುವಿನಲ್ಲಿ ಮಹಿಳೆ ಮೇಲೆ ಹರಿದ ಬಸ್​​​: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - private bus accident in Tamilnadu

ಸೈಕಲ್​ ಹಿಡಿದುಕೊಂಡು ತೆರಳುತ್ತಿದ್ದ ವೇಳೆ ಮಹಿಳೆಯೋರ್ವಳ ಮೇಲೆ ಖಾಸಗಿ ಬಸ್​ ಹರಿದಿರುವ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆಯಿತು.

private bus accident
private bus accident
author img

By

Published : Nov 23, 2021, 4:49 PM IST

ಚೆನ್ನೈ(ತಮಿಳುನಾಡು): ರಸ್ತೆ ತಿರುವಿನಲ್ಲಿ ಖಾಸಗಿ ಬಸ್​​​​ವೊಂದು ಮಹಿಳೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಮಿಳುನಾಡಿನ ವೆಲಚೇರಿಯ ಗುರುನಾನಕ್​​ ಕಾಲೇಜ್​ ಬಳಿ ಈ ದುರ್ಘಟನೆ ನಡೆದಿದೆ.

ರಸ್ತೆ ತಿರುವಿನಲ್ಲಿ ಮಹಿಳೆ ಮೇಲೆ ಹರಿದ ಬಸ್

ಸೈಕಲ್​​ ಹಿಡಿದುಕೊಂಡು ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ಗುರುನಾನಕ್​​ ಕಾಲೇಜ್​ನ ರಸ್ತೆ ತಿರುವಿನಲ್ಲಿ ಬಸ್​​ ಏಕಾಏಕಿ ಆಕೆಯ ಮೇಲೆ ಹರಿದು ಹೋಗಿದೆ. ಹೀಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು, 6 ಮಂದಿಗೆ ಗಾಯ

ಮೃತ ಮಹಿಳೆಯನ್ನು ಸಂಗೀತಾ ಎಂದು ಗುರುತಿಸಲಾಗಿದ್ದು, ಆಕೆ ಮನೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಸ್​ ಚಾಲಕ ಪುಷ್ಪರಾಜ್​ ಎಂಬಾತನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.