ETV Bharat / bharat

ಪೆರೋಲ್ ಮೇಲೆ ಬಿಡುಗಡೆಯಾಗಿರುವ ಕೈದಿಗಳು ಜೈಲಿಗೆ ಹಿಂದಿರುಗುವಂತೆ ಯುಪಿ ಸರ್ಕಾರ ಸೂಚನೆ

ಏಪ್ರಿಲ್ 29ರಂದು ರಾಜ್ಯ ಸರ್ಕಾರದ ಆದೇಶದ ಮೇಲೆ ಫಿಲಿಬಿತ್ ಜಿಲ್ಲಾ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದ 15 ಕೈದಿಗಳ ಪೈಕಿ 8 ಮಂದಿ ನಾಪತ್ತೆಯಾಗಿದ್ದಾರೆ. ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿದೆ..

jail
ಯುಪಿ ಸರ್ಕಾರ
author img

By

Published : Dec 1, 2020, 12:29 PM IST

ಲಖನೌ (ಉತ್ತರಪ್ರದೇಶ): ಶಿಕ್ಷೆಗೊಳಗಾದ ಕೈದಿಗಳಿಗೆ ಪೆರೋಲ್ ಅವಧಿ ವಿಸ್ತರಿಸದಿರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಎಲ್ಲಾ ಅಪರಾಧಿಗಳು ಜೈಲಿಗೆ ಹಿಂದಿರುಗುವಂತೆ ನೋಟಿಸ್ ನೀಡಬೇಕೆಂದು ಜೈಲಾಧಿಕಾರಿಗಳಿಗೆ ತಿಳಿಸಿದೆ.

ಕಳೆದ ಮೇ ತಿಂಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ್ದರಿಂದ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸುಮಾರು 2,256 ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಗೆ ಒಳಪಟ್ಟಿದ್ದವರನ್ನು ರಿಲೀಸ್ ಮಾಡಲಾಗಿತ್ತು.

2,256 ಅಪರಾಧಿಗಳ ಪೈಕಿ ಶಿಕ್ಷೆ ಪೂರ್ಣಗೊಂಡಿದ್ದರಿಂದ 136 ಜನರನ್ನು ಬಿಡುಗಡೆ ಮಾಡಲಾಗಿದೆ. ಪುನಃ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 56 ಜನರನ್ನು ಬಂಧಿಸಲಾಗಿದೆ. ನಾಲ್ವರು ಮೃತಪಟ್ಟಿರುವುದಾಗಿ ರಾಜ್ಯ ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ 693 ಅಪರಾಧಿಗಳು ಜೈಲಿಗೆ ಹಿಂದಿರುಗಿದ್ದಾರೆ. ಇತರರು ಜೈಲಿಗೆ ಮರಳುವಂತೆ ನೋಡಿಕೊಳ್ಳಲು ಆಯಾ ಜಿಲ್ಲೆಗಳ ಎಸ್​ಪಿಗಳಿಗೆ ಸೂಚಿಸಲಾಗಿದೆ ಎಂದು ಕಾರಾಗೃಹದ ಮಹಾ ನಿರ್ದೇಶಕ ಆನಂದ್ ಕುಮಾರ್ ಹೇಳಿದರು.

ಏಪ್ರಿಲ್ 29ರಂದು ರಾಜ್ಯ ಸರ್ಕಾರದ ಆದೇಶದ ಮೇಲೆ ಫಿಲಿಬಿತ್ ಜಿಲ್ಲಾ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದ 15 ಕೈದಿಗಳ ಪೈಕಿ 8 ಮಂದಿ ನಾಪತ್ತೆಯಾಗಿದ್ದಾರೆ. ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿದೆ.

ಪೆರೋಲ್ ಅವಧಿ ಮುಂದುವರಿಸಿದ್ರೆ ಮತ್ತಷ್ಟು ಅಪರಾಧಿಗಳು ಕಾಣೆಯಾಗಬಹುದು ಅನ್ನೋ ದೃಷ್ಟಿಯಿಂದ ರಾಜ್ಯಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಪರಾಧಿಗಳನ್ನು ಬಿಡುಗಡೆ ಮಾಡಿದಾಗಿನಿಂದ ಪೆರೋಲ್ ಅವಧಿಯನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.