ETV Bharat / bharat

ಕೋರ್ಟ್​ ಆವರಣದಲ್ಲೇ ಕೊಲೆ ಪ್ರಕರಣದ ಕೈದಿಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ

author img

By

Published : Mar 28, 2023, 8:58 PM IST

ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಕೋರ್ಟ್​ ಆವರಣದಲ್ಲೇ ಕೊಲೆ ಆರೋಪಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

prisoner-shot-dead-in-bihars-saharsa-court-premises
ಕೋರ್ಟ್​ ಆವರಣದಲ್ಲೇ ಕೊಲೆ ಪ್ರಕರಣದ ಕೈದಿಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ

ಸಹರ್ಸಾ (ಬಿಹಾರ): ನ್ಯಾಯಾಲಯದ ಆವರಣದಲ್ಲಿ ಕೈದಿಯೊಬ್ಬನಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಕೈದಿಯನ್ನು ಪ್ರಭಾಕರ್ ಪಂಡಿತ್ ಎಂದು ಗುರುತಿಸಲಾಗಿದೆ. ಹಾಡಹಗಲೇ ನಡೆದ ಈ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದು, ಘಟನಾ ಸ್ಥಳದಲ್ಲಿದ್ದ ಓರ್ವ ಆರೋಪಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆ ಪ್ರಕರಣದಲ್ಲಿ ಪ್ರಭಾಕರ್​ ಪಂಡಿತ್​ ಜೈಲು ಸೇರಿದ್ದರು. ಇಂದು ವಿಚಾರಣೆಗೆಂದು ಕೈದಿಯನ್ನು ಇಲ್ಲಿನ ಸಿವಿಲ್ ಕೋರ್ಟ್​ಗೆ ಕರೆ ತರಲಾಗಿತ್ತು. ಈ ವೇಳೆ ಕೋರ್ಟ್​ ಆವರಣದಲ್ಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಬೈಕ್​ನಲ್ಲಿ ಬಂದ ಹಂತಕರು ಕೃತ್ಯ ಎಸಗಿದ್ದಾರೆ. ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಿಪಿ ಸಿಂಗ್​ ಸೇರಿ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮತ್ತೊಂದೆಡೆ, ಹಾಡಹಗಲೇ ನಡೆದ ಈ ಕೊಲೆಯು ಜನತೆ ಬೆಚ್ಚಿಬೀಳುವಂತೆ ಮಾಡಿದೆ. ಅಲ್ಲದೇ, ಕೋರ್ಟ್​ನಲ್ಲಿದ್ದ ವಕೀಲರು ಸೇರಿದಂತೆ ಅಪಾರಸಂಖ್ಯೆಯ ಜನರು ಆವರಣದಲ್ಲಿ ಜಮಾವಣೆಗೊಂಡಿದ್ದರು.

ಶಸ್ತ್ರಾಸ್ತ್ರ ಸಮೇತ ಓರ್ವ ಪೊಲೀಸ್​ ವಶಕ್ಕೆ: ಸಹರ್ಸಾ ಜೈಲಿನಲ್ಲಿ ಹತ್ಯೆಯಾದ ಪ್ರಭಾಕರ್​ ಪಂಡಿತ್ ಇದ್ದ. ಈತ ಬಂಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಇಂದು ನ್ಯಾಯಾಲಯದ ವಿಚಾರಣೆಗೆ ಕರೆದುಕೊಂಡು ಬಂದಾಗ ಆವರಣದಲ್ಲಿ ದುಷ್ಕರ್ಮಿಗಳು ಪಂಡಿತ್​ ಮೇಲೆ ಸುಮಾರು ಮೂರು ಗುಂಡು ಹಾರಿಸಿದ್ದಾರೆ. ತಕ್ಷಣವೇ ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿದಿದ್ದಾರೆ. ಆದರೆ, ಗುಂಡಿನ ತಾಗಿದ ಕೂಡಲೇ ಪಂಡಿತ್​ ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂದು ಎಸ್​ಪಿ ಹೇಳಿದ್ದಾರೆ.

ಇದೇ ವೇಳೆ ಘಟನಾ ಸ್ಥಳದಲ್ಲಿ ಗುಂಡಿನ ಹಾರಿಸಿದ ಓರ್ವ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಪಿಸ್ತೂಲ್ ಮತ್ತು ಐದು ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೊಲೆಯಲ್ಲಿ ಇನ್ನೂ ಇತರರು ಕೂಡ ಭಾಗಿಯಾಗಿದ್ದು, ಅವರ ಪತ್ತೆಗಾಗಿ ಈಗಾಗಲೇ ಕ್ರಮ ವಹಿಸಲಾಗಿದೆ. ಘಟನಾ ಸ್ಥಳದ ಸುತ್ತ-ಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಆರಂಭಿಸಲಾಗಿದೆ. ಮತ್ತೊಂದೆಡೆ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸದ್ಯ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಲು ಬುಡಕಟ್ಟು ನಾಯಕರಿಗೆ ಅವಕಾಶ ನಿರಾಕರಣೆ: ಗೃಹ ಬಂಧನ

ಭಾಗಲ್ಪುರ್ ಜಿಲ್ಲೆಯಲ್ಲಿ 70 ವರ್ಷದ ವೃದ್ಧನ ಕೊಲೆ: ಇದೇ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಆಸ್ತಿ ವಿವಾದದ ಆರೋಪದ ಮೇಲೆ 70 ವರ್ಷದ ವೃದ್ಧರೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು ವಾಕಿಲ್​ ಯಾದವ್​ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಗೋಪಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲುಚಕ್ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಯಾದವ್​ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ದಾಳಿಕೋರರು ಅವರನ್ನು ಮಧ್ಯದಲ್ಲಿ ಅಡ್ಡಗಟ್ಟಿದ್ದಾರೆ. ಈ ವೇಳೆ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇದರಿಂದ ಯಾದವ್ ಎದೆ, ತಲೆ ಮತ್ತು ಹೊಟ್ಟೆಯ ಮೇಲೆ ಗುಂಡೇಟು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ, ಹಂತಕರು ತಾವೇ ಮೃತದೇಹವನ್ನು ಮನೆಗೆ ಬಾಗಿಲಿಲ್ಲ ಹಾಕಿ ಹೋಗಿದ್ದಾರೆ ಎಂದು ಗೋಪಾಲ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ನೀರಜ್ ಕುಮಾರ್ ತಿಳಿಸಿದ್ದಾರೆ. ಸದ್ಯ ಮೃತನ ಕುಟುಂಬದವರ ಹೇಳಿಕೆಯ ಪ್ರಕಾರ ಕೊಲೆಗೆ ಜಯ್ ಗೋಪಾಲ್ ಯಾದವ್ ಎಂಬುವವರೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.