ETV Bharat / bharat

G20 Rome Summit: ಇಟಲಿ, ಯುಕೆಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ - G20 Summit 2021

ರೋಮ್​ನಲ್ಲಿ ನಡೆಯಲಿರುವ 16ನೇ ಜಿ20 ರಾಷ್ಟ್ರ ನಾಯಕರ ಶೃಂಗಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್‌ನಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ, ಇಟಲಿ ಮತ್ತು ಯುಕೆಗೆ ವಿಶೇಷ ವಿಮಾನದ ಮೂಲಕ ನಿನ್ನೆ(ಗುರುವಾರ) ರಾತ್ರಿ ತೆರಳಿದರು.

Prime Minister Narendra Modi departs, Prime Minister Narendra Modi departs for Italy, Prime Minister Narendra Modi departs for Italy and UK, Prime Minister Narendra Modi, Prime Minister Narendra Modi news, ಪ್ರಧಾನಿ ನರೇಂದ್ರ ಮೋದಿ ಪ್ರಯಾಣ, ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ಪ್ರಯಾಣ, ಪ್ರಧಾನಿ ನರೇಂದ್ರ ಮೋದಿ ಇಟಲಿ ಮತ್ತು ಯುಕೆಗೆ ಪ್ರಯಾಣ, ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ನರೇಂದ್ರ ಮೋದಿ ಸುದ್ದಿ,
ಇಟಲಿ ಮತ್ತು ಯುಕೆಗೆ ಪ್ರಯಾಣ ಬೆಳಸಿದ ಪ್ರಧಾನಿ ನರೇಂದ್ರ ಮೋದಿ
author img

By

Published : Oct 29, 2021, 8:16 AM IST

ನವದೆಹಲಿ: ಜಿ20 ಶೃಂಗಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್(CoP)ನಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಇಟಲಿಗೆ ಪ್ರಯಾಣ ಬೆಳೆಸಿದರು.

ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಗೂ ಭೇಟಿ, ಪೋಪ್‌ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ.

ನವದೆಹಲಿಯಿಂದ ಇಟಲಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ

ಮೋದಿ ಟ್ವೀಟ್:

ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆ ಬಗ್ಗೆ ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.

ನವೆಂಬರ್ 1-2 ರವರೆಗೆ ಮೋದಿ ಬ್ರಿಟನ್‌ನ ಗ್ಲಾಸ್ಗೋಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಈ ವೇಳೆ ಅವರು ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.