ಅಹಮದಾಬಾದ್ (ಗುಜರಾತ್): ಸಾಬರಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಿದರು.
ಭಾರತ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಅಹಮದಾಬಾದಿನ ಸಬರಮತಿ ಆಶ್ರಮದಿಂದ 'ಆಜಾದಿ ಕಾ ಅಮೃತ್ ಮಹೋತ್ಸವ' ಉದ್ಘಾಟಿಸಿದರು. ದಂಡಿ ಮೆರವಣಿಗೆಯ 91 ನೇ ವಾರ್ಷಿಕೋತ್ಸವದ ನೆನಪಿಗಾಗಿ 'ಪಾದಯಾತ್ರೆ'ಗೆ ಪಿಎಂ ಮೋದಿ ಚಾಲನೆ ನೀಡಿದರು.
ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಸರ್ಕಾರವು ಆಯೋಜಿಸಲಿರುವ ಕಾರ್ಯಕ್ರಮಗಳ ಸರಣಿಯಾಗಿದೆ. ಇದನ್ನು ಜನ-ಉತ್ಸವವಾಗಿ ಆಚರಿಸಲಾಗುವುದು. ಸ್ವಾತಂತ್ರ್ಯ ಬಂದು ಆಗಸ್ಟ್ 15, 2022ಕ್ಕೆ 75 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕರ್ಟನ್ ರೈಸರ್ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಕೆಗೂ ಮುನ್ನ ದೇವಿಯ ಆರ್ಶೀವಾದ ಪಡೆದ ನಂದಿಗ್ರಾಮ ಬಿಜೆಪಿ ಅಭ್ಯರ್ಥಿ!
ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅಹಮದಾಬಾದ್‌ನ ಅಭಯ್ ಘಾಟ್ ಬಳಿ ನಡೆದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರಗಳು, ನಿಯತಕಾಲಿಕೆಗಳು ಮತ್ತು ಇತರ ಸಂಗ್ರಹಗಳನ್ನು ವೀಕ್ಷಿಸಿದರು.
'ಪಾದಯಾತ್ರೆ'ಗೆ ಅಶೋಕ್ ಗೆಹ್ಲೋಟ್ ಚಾಲನೆ: ದಂಡಿ ಮೆರವಣಿಗೆಯ 91 ನೇ ವಾರ್ಷಿಕೋತ್ಸವದ ನೆನಪಿಗಾಗಿ ಜೈಪುರದಲ್ಲಿ ಇಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 'ಪಾದಯಾತ್ರೆ'ಗೆ ಚಾಲನೆ ನೀಡಿದರು.