ETV Bharat / bharat

ಉತ್ತರಪ್ರದೇಶದ ದೇಗುಲವೊಂದರಲ್ಲಿ ಅರ್ಚಕ, ಸಾಧ್ವಿಯ ಬರ್ಬರ ಕೊಲೆ - ಮರಣೋತ್ತರ ಪರೀಕ್ಷೆ

ದೇವಸ್ಥಾನದಲ್ಲಿ ಅರ್ಚಕ ಹಾಗೂ ಸಾಧ್ವಿಯಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Priest Murder
Priest Murder
author img

By

Published : Nov 19, 2021, 3:28 PM IST

ಮಹಾರಾಜ್​ಗಂಜ್​(ಉತ್ತರ ಪ್ರದೇಶ): ಇಲ್ಲಿನ ಮಹಾರಾಜ್​ಗಂಜ್​ನ (Maharajganj Temple UP) ಮಹದೈಯಾ ಗ್ರಾಮದ ದೇವಸ್ಥಾನದಲ್ಲಿ ಅರ್ಚಕ ಹಾಗೂ ಸಾಧ್ವಿಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಎರಡು ಶವಗಳು ಬಿದ್ದಿರುವುದನ್ನು ನೋಡಿರುವ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲಿಸಿದಾಗ ಕೊಲೆಯಾಗಿರುವುದು ದೇಗುಲದ ಅರ್ಚಕ ಹಾಗೂ ಸಾಧ್ವಿ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಸುದ್ದಿಗೋಷ್ಟಿಯಲ್ಲಿ ಗಳಗಳನೆ ಕಣ್ಣೀರು ಸುರಿಸಿ ಈ ಪ್ರತಿಜ್ಞೆ ಮಾಡಿದ ಚಂದ್ರಬಾಬು ನಾಯ್ಡು!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ದೇವರ ವಿಗ್ರಹದಿಂದಲೇ ಅವರ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಮೃತದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹದೈಯಾ ಗ್ರಾಮದ ನಿವಾಸಿ ರಾಮ್​ ರತನ್​ ಮಿಶ್ರಾ (73) ತನ್ನ ಸ್ವಂತ ಖರ್ಚಿನಲ್ಲೇ ಗ್ರಾಮದಲ್ಲಿ ದೇವಿಯ ದೇವಸ್ಥಾನ ನಿರ್ಮಿಸಿ ವಾಸಿಸುತ್ತಿದ್ದರು. ಕಳೆದ ಎರಡೂವರೆ ದಶಕಗಳಿಂದ ನೇಪಾಳದ ಕಲಾವತಿ (68) ಎಂಬ ಮಹಿಳೆಯೂ ಕೂಡ ಅಲ್ಲಿ ನೆಲೆಸಿದ್ದಾರೆ. ದೇವಿಯ ಪೂಜೆ ಮಾಡುತ್ತಿದ್ದ ಕಾರಣ ಜನರು ಯುವತಿಯನ್ನು ಸಾಧ್ವಿ ಎಂದು ಕರೆಯುತ್ತಿದ್ದರು. ಆದರೆ ಇದೀಗ ಅಪರಿಚಿತ ವ್ಯಕ್ತಿಗಳಿಂದ ಇಬ್ಬರ ಕೊಲೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.