ETV Bharat / bharat

ಜನತೆಗೆ ಮತ್ತೆ ಬಿಗ್​ ಶಾಕ್​, ಎಲ್​ಪಿಜಿ​ ದರ ಗಗನಕ್ಕೆ: ವಾಣಿಜ್ಯ ಸಿಲಿಂಡರ್​ ₹ 350 ಹೆಚ್ಚಳ, ಗೃಹ ಬಳಕೆ ಸಿಲಿಂಡರ್ ಬೆಲೆಯೂ​ ಏರಿಕೆ

author img

By

Published : Mar 1, 2023, 8:29 AM IST

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಈ ಮೂಲಕ ದೇಶದ ಜನತೆಗೆ ಮತ್ತೊಮ್ಮೆ ಬೆಲೆ ಏರಿಕೆ ಹೊರೆಯಾಗಿದೆ.

Prices of commercial LPG hiked  cooking gas price hike  LPG gas price hiked  ತೈಲ ಮಾರುಕಟ್ಟೆ ಕಂಪನಿಗಳಿಂದ ಮತ್ತೆ ಗ್ರಾಹಕರಿಗೆ ಶಾಕ್​ ಗೃಹ ಬಳಕೆ ಸಿಲಿಂಡರ್​ 50 ರೂಪಾಯಿ ಏರಿಕೆ  ತೈಲ ಮಾರುಕಟ್ಟೆ ಕಂಪನಿ  ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ  ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್  ವಾಣಿಜ್ಯ ಸಿಲಿಂಡರ್‌ಗಳ ಬೆಲೆ
ತೈಲ ಮಾರುಕಟ್ಟೆ ಕಂಪನಿಗಳಿಂದ ಮತ್ತೆ ಗ್ರಾಹಕರಿಗೆ ಶಾಕ್

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೂರನೇ ತಿಂಗಳು ಸಹ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 350.50 ರೂಪಾಯಿಗೆ ಏರಿಸಲಾಗಿದೆ. ಇದು ವಾಣಿಜ್ಯೋದ್ದೇಶದ ಗ್ರಾಹಕರ ಕೈ ಸುಡಲಿದೆ. ಇನ್ನು, ಗೃಹಬಳಕೆಯ ಸಿಲಿಂಡರ್‌ ದರ 50 ರೂಪಾಯಿಗೆ ಏರಿಕೆ ಮಾಡಿದೆ.

ಪೆಟ್ರೋಲ್​, ಡೀಸೆಲ್​ ಬೆಲೆ ಯಥಾಸ್ಥಿತಿ ಮುಂದುವರಿದಿದ್ದು, ವಾಣಿಜ್ಯ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಈಗ ಏರಿಕೆಯಾಗಿದೆ. ಕರ್ಮಷಿಯಲ್​ ಗ್ಯಾಸ್‌ ದರ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 350.50 ರೂ.ಯಷ್ಟು ಏರಿಕೆಯಾಗಿದ್ದು, ಗಗನಕ್ಕೆ ಮುಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 2,119.50 ರೂ. ಗೆ ಏರಿಕೆ ಕಂಡಿದೆ.

ಡೊಮೆಸ್ಟಿಕ್​ ಗ್ಯಾಸ್‌ ದರ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 50 ರೂ.ಯಷ್ಟು ಏರಿಕೆ ಕಂಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14 ಕೆ.ಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,103 ರೂ. ಗೆ ಏರಿಕೆ ಕಂಡಿದೆ.

ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ದರ ಮಾರ್ಚ್​ 1 ರಿಂದಲೇ ಜಾರಿಗೆ ಬರಲಿದೆ ಎಂದು ಒಎಂಸಿ ತಿಳಿಸಿದೆ. ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್​ಗೆ 350.50 ರೂಪಾಯಿ ಏರಿಕೆ ಮಾಡಿದ್ದು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಗಳು ಬೆಲೆ ಏರಿಕೆ ಬಿಸಿ ಅನುಭವಿಸಲಿವೆ. ಇದರಿಂದ ಹೋಟೆಲ್​, ರೆಸ್ಟೋರೆಂಟ್​ ಊಟದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಬಳಕೆ ಸಿಲಿಂಡರ್​ ದರದಲ್ಲಿ 50 ಏರಿಕೆ ಮಾಡಿರುವುದು ಜನರಲ್ಲಿ ಆತಂಕ ತಂದಿದೆ.

ತೈಲ ಮಾರುಕಟ್ಟೆ ಕಂಪನಿಗಳು ಕೊನೆಯ ಬಾರಿಗೆ ಜನವರಿ ತಿಂಗಳಲ್ಲಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿದ್ದವು. ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಮತ್ತು ಮಧ್ಯದಲ್ಲಿ ಎಲ್‌ಪಿಜಿ ಬೆಲೆ ಬದಲಾವಣೆಯನ್ನು ಪ್ರಕಟಿಸುತ್ತವೆ.

ಓದಿ: ವರ್ಷದ ಮೊದಲ ದಿನವೇ ದರ ಏರಿಕೆ ಬಿಸಿ: ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ

ಗೃಹ ಬಳಕೆ ಸಿಲಿಂಡರ್​ಗಳ ದರವನ್ನು ಕಳೆದ ವರ್ಷ ನಾಲ್ಕು ಬಾರಿ ಏರಿಕೆ ಮಾಡಲಾಗಿತ್ತು. ಮಾರ್ಚ್‌​ನಲ್ಲಿ 50 ರೂಪಾಯಿ, ಮೇ ತಿಂಗಳಲ್ಲಿ 50 ಮತ್ತು 3.50 ರೂಪಾಯಿ, ಬಳಿಕ ಜುಲೈನಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಸಂಚಿತ ನಿಧಿ(ಡೆಪಾಸಿಟ್​)ಯನ್ನು 153.5ಕ್ಕೆ ಹೆಚ್ಚಿಸಲಾಗಿದೆ.

ಕಳೆದ ಸೆಪ್ಟೆಂಬರ್​ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿದ್ದವು. ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್​ ಬೆಲೆ ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆ ಗಮನದಲ್ಲಿಟ್ಟುಕೊಂಡು ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.