ಬಿಲಾಸ್ಪುರ(ಛತ್ತೀಸ್ಗಢ): ಅರ್ಪಾ ನದಿಯ ದಡದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಪ್ರಸಿದ್ಧ ಭನ್ವಾರ್ ಗಣೇಶ ದೇವಾಲಯದಲ್ಲಿ ಕಳ್ಳತನವಾಗಿದೆ. ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯವಾದ ಗಣೇಶನ ವಿಗ್ರಹ ಹೊತ್ತೊಯ್ದಿದ್ದಾರೆ.
ಮಸ್ತೂರಿನಲ್ಲಿ ಗ್ರಾನೈಟ್‌ನಿಂದ ತಯಾರಿಸಿರುವ ಪುರಾತನ ಗಣೇಶ ಮೂರ್ತಿ ವಿಗ್ರಹ ಇದಾಗಿದೆ. ದೇಗುಲದ ಪೂಜಾರಿಯನ್ನು ಕಟ್ಟಿ ಹಾಕಿದ್ದು, ಕಿರುಚಾಡದ ರೀತಿಯಲ್ಲಿ ಬಾಯಿಗೆ ಟೇಪ್ನಿಂದ ಸುತ್ತಿದ್ದಾರೆ. ತದನಂತರ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಗ್ರಾಮಸ್ಥರು ಪೂಜೆಗೆಂದು ದೇವಸ್ಥಾನದೊಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೂಜಾರಿಯ ಪರಿಸ್ಥಿತಿ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದರು. ಗರ್ಭಗುಡಿಯಲ್ಲಿ ವಿಗ್ರಹ ಇಲ್ಲದಿರುವುದನ್ನು ನೋಡಿರುವ ಗ್ರಾಮಸ್ಥರು ಘಟನೆಯ ಬಗ್ಗೆ ಮಸ್ತೂರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ
ಗಣೇಶನ ವಿಗ್ರಹ ಮೂರು ಅಡಿ ಎತ್ತರವಿದ್ದು, 65 ಕೆಜಿ ತೂಕವಿತ್ತು. ಸುತ್ತಮುತ್ತಲಿನ ಗ್ರಾಮಸ್ಥರಿಗೆ ದೇಗುಲದ ಮೇಲೆ ಅಪಾರ ನಂಬಿಕೆ ಇದ್ದು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.