ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾದ 53 ಅಸಿಂಧು ಮತಗಳ ಪೈಕಿ ಶೇ.28 ರಷ್ಟು ಸಂಸದರು ಚಲಾವಣೆ ಮಾಡಿದ್ದಾರೆ. ಬಿಹಾರ, ಛತ್ತೀಸ್‌ಗಢ ಸೇರಿದಂತೆ 13 ರಾಜ್ಯಗಳ ವಿಧಾನಸಭೆ ಸದಸ್ಯರು ಚಲಾಯಿಸಿದ ಒಂದೇ ಒಂದು ಮತವೂ ಅಸಿಂಧುವಾಗಿಲ್ಲ.
ಇಲೆಕ್ಟೋರಲ್ ಕಾಲೇಜ್ ಒಟ್ಟು 4,809 ಮತಗಳನ್ನು ಹೊಂದಿದ್ದು, ಅದರಲ್ಲಿ 776 (16%) ಸಂಸದರಾಗಿದ್ದರು. ಜುಲೈ 18 ರಂದು ನಡೆದ ಅಧ್ಯಕ್ಷೀಯ ಚುನಾವಣೆಗೆ ಹೆಚ್ಚಿನ ಸಂಸದರು ಮತ ಹಾಕಿದ್ದರು. ಒಟ್ಟು 53 ಅಸಿಂಧು ಮತಗಳಲ್ಲಿ 15 ಸಂಸದರು, ಪಂಜಾಬ್ ಮತ್ತು ಮಧ್ಯಪ್ರದೇಶದಿಂದ ತಲಾ ಒಬ್ಬರು ಮತ್ತು ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತಲಾ ನಾಲ್ವರು ಸಂಸದರು ಮತ ಚಲಾಯಿಸಿದ್ದರು.
ಉತ್ತರ ಪ್ರದೇಶ ವಿಧಾನಸಭೆಯಿಂದ ಮೂರು, ಅಸ್ಸಾಂನಿಂದ ಎರಡು, ಉತ್ತರಾಖಂಡ, ತೆಲಂಗಾಣ, ತಮಿಳುನಾಡು, ಮೇಘಾಲಯ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಿಂದ ತಲಾ ಒಂದು ಮತಗಳು ಅಸಿಂಧುಗೊಂಡಿವೆ. ಇಲೆಕ್ಟೋರಲ್ ಕಾಲೇಜ್ ಕೆಲವು ಸದಸ್ಯರು ತಮ್ಮ ಹೆಸರಿನ ವಿರುದ್ಧ ಗುರುತು ಮಾಡುವ ಬದಲು ತಮ್ಮ ಆದ್ಯತೆಯ ಅಧ್ಯಕ್ಷೀಯ ಆಯ್ಕೆಯ ಹೆಸರನ್ನು ಬರೆದು ತಮ್ಮ ಮತಗಳನ್ನು ಅಸಿಂಧುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಗೋವಾ, ಕೇರಳ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ ಮತ್ತು ತ್ರಿಪುರ ಸೇರಿದಂತೆ ಒಟ್ಟು ಹದಿಮೂರು ರಾಜ್ಯಗಳು ಯಾವುದೇ ಅಸಿಂಧು ಮತ ಹಾಕಿರುವುದರ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ.. ಅಭಿನಂದಿಸಿದ ಪ್ರಧಾನಿ ಮೋದಿ