ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬೇಟೆಯಾಡಿ ಬಳಿಕ ವೀರಮರಣವನ್ನಪ್ಪಿದ್ದ ಎಎಸ್‌ಐ ಬಾಬು ರಾಮ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಮರಣೋತ್ತರ 'ಅಶೋಕ ಚಕ್ರ' ಪ್ರದಾನ ಮಾಡಿದರು.
ಬಾಬು ರಾಮ್ ಅವರ ಪತ್ನಿ ರೀನಾ ರಾಣಿ ಮತ್ತು ಪುತ್ರ ಮಾಣಿಕ್ ಅವರು ರಾಷ್ಟ್ರಪತಿ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. 29 ಆಗಸ್ಟ್ 2020 ರಂದು ಶ್ರೀನಗರದಲ್ಲಿ ನಡೆದ ಉಗ್ರ ದಮನ ಕಾರ್ಯಾಚರಣೆಯಲ್ಲಿ ASI ಬಾಬು ರಾಮ್ ಅವರು ಮೂವರು ಭಯೋತ್ಪಾದಕರ ಹುಟ್ಟಡಗಿಸಿದ್ದರು. ಇದೇ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡೇಟಿಗೆ ಬಾಬು ರಾಮ್ ಕೂಡ ಹುತಾತ್ಮರಾಗಿದ್ದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರಿಗೆ ಸಿಂಹಸ್ವಪ್ನವಾಗಿದ್ದ ಬಾಬು ರಾಮ್ ಅವರ ಶೌರ್ಯ ಮತ್ತು ಅನುಕರಣೀಯ ಧೈರ್ಯವನ್ನು ಮೆಚ್ಚಿ ಇದೀಗ ಮರಣೋತ್ತರ ಅಶೋಕ್ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.
ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದಲ್ಲಿದ್ದ ಎಎಸ್‌ಐ ಬಾಬು ರಾಮ್‌ಗೆ ಉನ್ನತ ಶೌರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ಕೋವಿಂದ್ ನೀಡಿದ್ದರು.
ಇದನ್ನೂ ಓದಿ: ವಯಸ್ಸು ಬರೋಬ್ಬರಿ 126.. ಶಿವನ ಆರಾಧಕನಿಗೆ ಒಲಿದ 'ಪದ್ಮಶ್ರೀ'.. ಬಾಬಾ ಶಿವಾನಂದ ಅವರ ಆರೋಗ್ಯದ ಗುಟ್ಟು ಗೊತ್ತಾ?