ETV Bharat / bharat

ಪ್ರಧಾನಿಯಲ್ಲ, ರಾಷ್ಟ್ರಪತಿಗಳು ಹೊಸ ಸಂಸತ್​ ಕಟ್ಟಡ ಉದ್ಘಾಟಿಸಲಿ: ರಾಹುಲ್​ ಗಾಂಧಿ ಒತ್ತಾಯ - ಪ್ರಧಾನಿ ನರೇಂದ್ರ ಮೋದಿ

ಹೊಸ ಸಂಸತ್​ ಕಟ್ಟಡ ಉದ್ಘಾಟನೆ ಬಗ್ಗೆ ಪರ- ವಿರೋಧ ವ್ಯಕ್ತವಾಗಿದೆ. ಪ್ರಧಾನಿಗಳ ಬದಲಿಗೆ ರಾಷ್ಟ್ರಪತಿ ಅವರು ಉದ್ಘಾಟನೆ ಮಾಡಬೇಕು ಎಂದು ರಾಹುಲ್​ ಗಾಂಧಿ ವಾದಿಸಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
author img

By

Published : May 21, 2023, 3:50 PM IST

ನವದೆಹಲಿ: ನೂತನ ಸಂಸತ್​ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಹೊತ್ತಲ್ಲೇ ಕಾಂಗ್ರೆಸ್​ ತಗಾದೆ ತೆಗೆದಿದ್ದು, ನೂತನ ಭವ್ಯ ಭವನವನ್ನು ಪ್ರಧಾನಿ ಬದಲಾಗಿ ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು ಎಂದು ಆಗ್ರಹಿಸಿದೆ.

ಈ ಬಗ್ಗೆ ಭಾನುವಾರ ಟ್ವೀಟ್​ ಮಾಡಿರುವ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ​ಗಾಂಧಿ 'ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ' ಎಂದಿದ್ದಾರೆ. ಗುರುವಾರವಷ್ಟೇ ಪ್ರಧಾನಿ ಮೋದಿ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಭೇಟಿಯಾಗಿ ಹೊಸ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲು ಆಹ್ವಾನವಿತ್ತ ಬೆನ್ನಲ್ಲೇ ಅವರು ಈ ಪ್ರಶ್ನೆ ಎತ್ತಿದ್ದಾರೆ.

ವಿರೋಧಕ್ಕೆ ಕಾರಣವೇನು?: ಮೇ 28 ರಂದು ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ ಜನ್ಮ ದಿನವಾಗಿದ್ದು, ಅಂದೇ ಹೊಸ ಸಂಸತ್ ಕಟ್ಟಡದ ಉದ್ಘಾಟನೆಯು ನಡೆಯುವುದು ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದೆ. ಸಾವರ್ಕರ್​ ಅವರ ಜಯಂತಿಯಂದು ಕಾರ್ಯಕ್ರಮ ಆಯೋಜನೆ ಮಾಡಿರುವುದು ದೇಶಕ್ಕಾಗಿ ಹೋರಾಡಿದ ಇತರ ನಾಯಕರಿಗೆ ಮಾಡಿದ ಅವಮಾನ ಎಂದು ವಿಪಕ್ಷಗಳು ಟೀಕಿಸುತ್ತಿವೆ.

ಹೀಗಾಗಿ ರಾಹುಲ್​ ಗಾಂಧಿ ಅವರು ಟ್ವೀಟ್​ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. "ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಹೊಸ ಸಂಸತ್ ಭವನವನ್ನು ಉದ್ಘಾಟಿಸಬೇಕು. ಪ್ರಧಾನಿಗಳು ಇದನ್ನು ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿಗೆ ಸ್ಪೀಕರ್​ ಆಹ್ವಾನ: ಇದಕ್ಕೂ ಮುನ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಟ್ವೀಟ್ ಮಾಡಿ, "140 ಕೋಟಿಗೂ ಹೆಚ್ಚು ಜನರ ಭರವಸೆ ಮತ್ತು ನಿರೀಕ್ಷೆಗಳನ್ನು ಈಡೇರಿಸುವ ಮೂಲಕ, ಹೊಸದಾಗಿ ನಿರ್ಮಿಸಲಾದ ಸಂಸತ್ತಿನ ಕಟ್ಟಡವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕು. ಈ ನಮ್ಮ ನಿರ್ಣಯವನ್ನು ಸಾಧಿಸಲು ಇದು ಪ್ರಬಲ ಮಾಧ್ಯಮವಾಗಲಿದೆ ಎಂದು ಹೇಳಿದ್ದರು.

ಈ ವರ್ಷದ ಮೇ 28 ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿರುವ ಹೊಸ ಸಂಸತ್ತಿನ ಕಟ್ಟಡವನ್ನು ಲೋಕಸಭೆಯ ಸ್ಪೀಕರ್ ಶ್ಲಾಘಿಸಿದರು. ಇದು "ಭಾರತದ ವೈಭವಯುತ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದರು. ಈ ಕಟ್ಟಡದಲ್ಲಿ ಸಂಸತ್​ ಸದಸ್ಯರು ದೇಶ ಮತ್ತು ನಾಗರಿಕರ ಪರವಾಗಿ ತಮ್ಮ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಭವ್ಯ ಕಟ್ಟಡವನ್ನು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಮೇ 28 ರಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಹೊಸ ಭವನ ಹೇಗಿದೆ?: ಹೊಸ ಸಂಸತ್ ಕಟ್ಟಡದ ಲೋಕಸಭೆಯ ಪ್ರಾಂಗಣವು 888 ಸದಸ್ಯರು ಮತ್ತು ರಾಜ್ಯಸಭಾ ಚೇಂಬರ್‌ನಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ. ಉಭಯ ಸದನಗಳ ಜಂಟಿ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯ ಕೊಠಡಿಯಲ್ಲಿ ಒಟ್ಟು 1,280 ಸದಸ್ಯರಿಗೆ ಅವಕಾಶ ಕಲ್ಪಿಸಬಹುದು. ಪ್ರಧಾನ ಮಂತ್ರಿಯವರು ಡಿಸೆಂಬರ್ 10, 2020 ರಂದು ಹೊಸ ಸಂಸತ್ತಿನ ಕಟ್ಟಡದ ಅಡಿಪಾಯವನ್ನು ಹಾಕಿದ್ದರು.

ಓದಿ: ಹೊಸ ಸಂಸತ್ ಕಟ್ಟಡದಲ್ಲಿ ಮುಂಗಾರು ಅಧಿವೇಶನ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.