ETV Bharat / bharat

Nightingale Awards: ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ- 2022-23 ಅನ್ನು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರ್ಸಿಂಗ್ ವೃತ್ತಿಯಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಪ್ರದಾನ ಮಾಡಿದರು.

ನರ್ಸಿಂಗ್ ವೃತ್ತಿಪರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ

author img

By

Published : Jun 22, 2023, 7:32 PM IST

ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಶುಶ್ರೂಷಾ ವೃತ್ತಿಪರರಿಗೆ 2022- 2023ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಒಟ್ಟು 30 ಆರೋಗ್ಯ ಸೇವಾಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನರ್ಸಿಂಗ್ ವೃತ್ತಿಪರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 1973ರಲ್ಲಿ ಶುಶ್ರೂಷಕರು ಮತ್ತು ಶುಶ್ರೂಷಾ ವೃತ್ತಿಪರರು ಸಮಾಜಕ್ಕೆ ಸಲ್ಲಿಸಿದ ಗೌರವಾನ್ವಿತ ಸೇವೆಗಳನ್ನು ಗುರುತಿಸುವ ಸಂಕೇತವಾಗಿ ಸ್ಥಾಪಿಸಿದ. ಒಟ್ಟು ಪ್ರಶಸ್ತಿ ಪುರಸ್ಕೃತರಲ್ಲಿ 10 ಸಹಾಯಕ ದಾದಿಯರು ಮತ್ತು ಶುಶ್ರೂಷಕಿಯರು, 4 ಮಹಿಳಾ ಆರೋಗ್ಯ ಸಂದರ್ಶಕರು ಮತ್ತು 16 ಮಂದಿ ದಾದಿಯರು ಇದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಉಪಸ್ಥಿತರಿದ್ದರು.

ಬ್ರಿಗೇಡಿಯರ್ ಎಸ್.ವಿ. ಸರಸ್ವತಿ ಅವರಿಗೆ ಪ್ರಶಸ್ತಿ: ಮಿಲಿಟರಿ ನರ್ಸಿಂಗ್ ಸೇವೆಯ ಉಪ ಮಹಾನಿರ್ದೇಶಕ ಬ್ರಿಗೇಡಿಯರ್ ಆಗಿರುವ ಎಸ್.ವಿ. ಸರಸ್ವತಿ ಅವರಿಗೆ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2020 ಅನ್ನು (ಸೆಪ್ಟೆಂಬರ್ 20-2021) ರಂದು ಪ್ರದಾನ ಮಾಡಲಾಗಿತ್ತು.

ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎನ್‌ಎನ್‌ಎಸ್‌ಗೆ ನರ್ಸ್ ನಿರ್ವಾಹಕರಾಗಿ ನೀಡಿದ ಅಪಾರ ಕೊಡುಗೆಗಾಗಿ ವರ್ಚುವಲ್ ಸಮಾರಂಭದಲ್ಲಿ ಪ್ರಶಸ್ತಿ ನೀಡಿದ್ದರು. ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್, ನರ್ಸ್ ಸೇವೆ ಮತ್ತು ಅಸಾಧಾರಣ ವೃತ್ತಿಪರತೆಗಾಗಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರಾದ ಸರಸ್ವತಿ ಅವರನ್ನು ಡಿಸೆಂಬರ್ 28, 1983ರಂದು ಎಂಎನ್ಎಸ್​ಗೆ ನಿಯೋಜಿಸಲಾಗಿತ್ತು. ಸುಮಾರು ಮೂರುವರೆ ದಶಕಗಳಿಗೂ ಹೆಚ್ಚು ಕಾಲ ವಿಶೇಷವಾಗಿ ಪೆರಿಯೊಪರೇಟಿವ್ ಶುಶ್ರೂಷೆಯಲ್ಲಿ ಇವರು ಸೇವೆ ಸಲ್ಲಿಸಿದ್ದರು.

ಹೆಸರಾಂತ ಆಪರೇಷನ್ ಥಿಯೇಟರ್ ನರ್ಸ್ ಆಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಇವರು ಇಲ್ಲಿಯವರೆಗೆ ಸುಮಾರು 3,000ಕ್ಕೂ ಹೆಚ್ಚು ಜೀವರಕ್ಷಕ ಮತ್ತು ತುರ್ತು ಶಸ್ತ್ರಚಿಕಿತ್ಸೆಗಳಲ್ಲಿ ಸಹಾಯ ಮಾಡಿದ್ದಾರೆ. ಶ್ರೇಷ್ಠ ವೃತ್ತಿಜೀವನದಲ್ಲಿ ನಿವಾಸಿಗಳು, ಆಪರೇಷನ್ ರೂಂ ನರ್ಸಿಂಗ್ ಟ್ರೈನಿಗಳು ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ ಕೂಡಾ ನೀಡಿದ್ದಾರೆ. ರೋಗಿಯ ಬೋಧನಾ ಸಾಮಗ್ರಿ ಮತ್ತು ಹೃದಯದ ಶಸ್ತ್ರಚಿಕಿತ್ಸೆಗಾಗಿ ಸುಧಾರಿತ ಡ್ರೇಪ್ ಕಿಟ್‌ಗಳು ಮತ್ತು ಹೊಲಿಗೆ ಪ್ಯಾಕಿಂಗ್ ಅನ್ನೂ ಸಹ ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ.

ನರ್ಸಿಂಗ್ ವೃತ್ತಿಪರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳಲ್ಲಿ ಸೇವೆ : ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎಂಎನ್​ಎಸ್​ ಅನ್ನು ಪ್ರತಿನಿಧಿಸಿರುವ ಸರಸ್ವತಿ, ಸೈನ್ಯಕ್ಕಾಗಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಾ ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಕಾಂಗೋದಲ್ಲಿನ ವಿವಿಧ ಪ್ಯಾನ್-ಇಂಡಿಯಾ ಸೇನಾ ಆಸ್ಪತ್ರೆಗಳು ಮತ್ತು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಎಂಎನ್‌ಎಸ್ ಮಹಾನಿರ್ದೇಶಕರ ನೇಮಕಾತಿ ತೆಗೆದುಕೊಳ್ಳುವ ಮೊದಲು ವಿವಿಧ ಹಂತದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಬ್ರಿಗೇಡಿಯರ್ ಎಸ್ ವಿ ಸರಸ್ವತಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2020..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.