ETV Bharat / bharat

ಹೆಲ್ಮೆಟ್​ ಧರಿಸಿಲ್ಲ ಎಂದು ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಪೊಲೀಸ್​ ಸಸ್ಪೆಂಡ್‌

ಗಂಡನೊಂದಿಗೆ ಬೈಕ್​ ಮೇಲೆ ತೆರಳುತ್ತಿದ್ದ ವೇಳೆ ಹಿಂದಿನ ಸೀಟ್​​ನಲ್ಲಿ ಕುಳಿತುಕೊಂಡಿದ್ದ ಗರ್ಭಿಣಿ ಹೆಲ್ಮೆಟ್​ ಧರಿಸಿಲ್ಲ ಎಂದು ಆಕೆಯನ್ನು ಪೊಲೀಸರು 3 ಕಿಲೋ ಮೀಟರ್ ನಡೆಸಿಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

author img

By

Published : Mar 30, 2021, 5:04 PM IST

Pregnant woman
Pregnant woman

ಸರತ್​​(ಒಡಿಶಾ): ಗಂಡನೊಂದಿಗೆ ಬೈಕ್​ ಮೇಲೆ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೋರ್ವಳು ಹೆಲ್ಮೆಟ್​ ಧರಿಸಿಲ್ಲವೆಂದು 3 ಕಿಲೋ ಮೀಟರ್​ ನಡೆದುಕೊಂಡು ಹೋಗುವಂತೆ ಮಾಡಿರುವ ಮಹಿಳಾ ಪೊಲೀಸ್​ ಅಧಿಕಾರಿ ಇದೀಗ ಅಮಾನತುಗೊಂಡಿದ್ದಾರೆ. ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬರಿಪಾಡ್​ನ ಸರತ್​ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿವರ:

ಪತಿ ಬಿಕ್ರಮ್​ ಜೊತೆ 8 ತಿಂಗಳ ಗರ್ಭಿಣಿ ಚೆಕ್​​ಅಪ್​ಗಾಗಿ ಆಸ್ಪತ್ರೆಗೆ ತೆರಳುತ್ತಿದ್ದಳು. ಈ ವೇಳೆ ಗಂಡ ಹೆಲ್ಮೆಟ್​ ಹಾಕಿಕೊಂಡಿದ್ರೆ, ಪತ್ನಿ ಹಾಕಿಕೊಂಡಿರಲಿಲ್ಲ. ಇದೇ ಕಾರಣಕ್ಕಾಗಿ ಮಹಿಳಾ ಪೊಲೀಸ್​ ಅಧಿಕಾರಿ ಅವರನ್ನು ತಡೆದಿದ್ದು, ದಂಡ ಕಟ್ಟುವಂತೆ ತಿಳಿಸಿದ್ದಾರೆ. ಈ ವೇಳೆ ತನ್ನ ಬಳಿ ಹಣವಿಲ್ಲ ಎಂದಿರುವ ಬಿಕ್ರಮ್​ ಆನ್​ಲೈನ್​ ಮೂಲಕ ಪಾವತಿ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಪೊಲೀಸರು ಒಪ್ಪಿಲ್ಲ. ಜತೆಗೆ ಕೋರ್ಟ್​ನಲ್ಲಿ ದಂಡ ಕಟ್ಟುವುದಕ್ಕೆ ಚಲನ್ ನೀಡುವಂತೆ ಮನವಿ ಮಾಡಿದ್ರೂ ಪೊಲೀಸರು ಅನುಮತಿ ನೀಡದೇ ಪೊಲೀಸ್‌​ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಗುರುನಾನಕ್​​ ಭವನದ ವಿಶೇಷ ಕೋರ್ಟ್ ಹಾಲ್‌​ನಲ್ಲಿ 'ಸಿಡಿ'ದ ಯುವತಿಯ ಹೇಳಿಕೆ ದಾಖಲು

ಹೀಗಾಗಿ ಘಟನಾ ಸ್ಥಳದಿಂದ ಬರೋಬ್ಬರಿ 3 ಕಿಲೋ ಮೀಟರ್ ನಡೆಸಿಕೊಂಡು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮುಂದೆ ತಮ್ಮ ಹೇಳಿಕೆ ನೀಡಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಸ್​ಪಿ ಪುರುಷೋತ್ತಮ್​ ದಾಸ್​ ಮಹಿಳಾ ಪೊಲೀಸ್​ ಅಧಿಕಾರಿ ರೀನಾ ಬಕ್ಸಲ್​​ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.