ಪಿಲಿಫಿತ್(ಉತ್ತರಪ್ರದೇಶ): ಗರ್ಭಿಣಿ ಮತ್ತು ಆಕೆಯ ಐದು ವರ್ಷದ ಮಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶ ಪಿಲಿಭಿತ್ ನಗರದ ಸುಂಗದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬರ್ಹಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದ್ದು, ಗರ್ಭಿಣಿ ಸೀಮಾ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ, ಹೊರಗೆ ಆಟವಾಡುತ್ತಿದ್ದ ಆಕೆಯ ಮೂವರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಆಕೆ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾಳೆ.
ಐದು ವರ್ಷದ ಮಗಳ ಮೇಲೆ ಸುಮಾರು 6 ಬೀದಿನಾಯಿಗಳು ಮತ್ತು ಮತ್ತೆರಡು ನಾಯಿಗಳು ಗಂಡುಮಕ್ಕಳಾದ ಹತ್ತು ವರ್ಷದ ಅನುಜ್ ಮತ್ತು ಮೂರು ವರ್ಷದ ಮೋನು ಮೇಲೆ ದಾಳಿ ಮಾಡಿವೆ. ಇದನ್ನು ಕಂಡು ಸೀಮಾ ಏಕಾಂಗಿಯಾಗಿ ಹೋರಾಡಿ ನಾಯಿಗಳನ್ನು ಅಲ್ಲಿಂದ ಓಡಿಸಿದ್ದಾಳೆ.
ಈ ವೇಳೆ ಶ್ವಾನಗಳ ಕೂಡಾ ಸೀಮಾಳ ಮೇಲೆ ದಾಳಿ ಮಾಡಿವೆ. ಎಲ್ಲ ಮಕ್ಕಳಿಗೂ ಗಾಯಗಳಾಗಿದ್ದು, ಆಕೆಯ ಐದು ವರ್ಷದ ಮಗಳಾದ ಪಲ್ಲವಿಯ ಸ್ಥಿತಿ ಗಂಭೀರವಾಗಿದ್ದು, ತಾಯಿ ಸೀಮಾಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆ ನಡೆದ ವೇಳೆ ಸೀಮಾಳ ಪತಿ ದನ್ವೀರ್ ಸಿಂಗ್ ಕೆಲಸಕ್ಕೆ ತೆರಳಿದ್ದನು ಎಂದು ತಿಳಿದುಬಂದಿದೆ. ಘಟನೆ ತಿಳಿದ ನಂತರ ಪಾಲಿಕೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಬೀದಿ ನಾಯಿಗಳನ್ನು ಹಿಡಿಯುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: ಕುಟುಂಬಸ್ಥರೊಂದಿಗೆ ಮದುವೆಗೆ ತೆರಳಿದ್ದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್