ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಸದ್ಯ ನವದೆಹಲಿ ವೈದ್ಯೆಯೊಬ್ಬರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ.
34 ವರ್ಷದ ವೈದ್ಯೆ ಡಾ. ಡಿಂಪಲ್ ಅರೊರಾ ಚಾವ್ಲಾ ಸೋಂಕಿನಿಂದ ಸಾವನ್ನಪ್ಪಿರುವ 7 ತಿಂಗಳ ಗರ್ಭಿಣಿ. ಏಪ್ರಿಲ್ 10ರಂದು ಕೋವಿಡ್ ಸೋಂಕಿಗೊಳಗಾಗಿದ್ದ ವೈದ್ಯೆ ಏಳು ತಿಂಗಳ ಗರ್ಭಿಣಿಯಾಗಿದ್ದರು. ತೀವ್ರ ಉಸಿರಾಟದ ತೊಂದರೆ ಕಾರಣ ಏಪ್ರಿಲ್ 21ರಂದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 25ರಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
-
I lost my pregnant wife and our unborn child to covid
— Ravish Chawla (@ravish_chawla) May 9, 2021 " class="align-text-top noRightClick twitterSection" data="
She breathed her last on 26/4/21 and our unborn child a day earlier. She got covid positive on 11/4 and even during her suffering she had made the above video on 17/4 warning others not to take this covid lightly. #CovidIndia pic.twitter.com/Syg6yddMTD
">I lost my pregnant wife and our unborn child to covid
— Ravish Chawla (@ravish_chawla) May 9, 2021
She breathed her last on 26/4/21 and our unborn child a day earlier. She got covid positive on 11/4 and even during her suffering she had made the above video on 17/4 warning others not to take this covid lightly. #CovidIndia pic.twitter.com/Syg6yddMTDI lost my pregnant wife and our unborn child to covid
— Ravish Chawla (@ravish_chawla) May 9, 2021
She breathed her last on 26/4/21 and our unborn child a day earlier. She got covid positive on 11/4 and even during her suffering she had made the above video on 17/4 warning others not to take this covid lightly. #CovidIndia pic.twitter.com/Syg6yddMTD
ಕೋವಿಡ್ ಸೋಂಕು ಇದ್ದ ಕಾರಣ, ಉಸಿರಾಟದ ತೊಂದರೆಗೊಳಗಾಗಿ ಗರ್ಭದಲ್ಲೇ ಮಗು ಸಹ ಕಳೆದಕೊಂಡಿದ್ದರು. ಇಷ್ಟಾದರೂ ಕೂಡ ಮಹಾಮಾರಿ ವಿರುದ್ಧ ಹೋರಾಟ ನಡೆಸಿದ್ದ ಅವರ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲ. ಹೀಗಾಗಿ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಮೇಲೆ ಪ್ಯಾಲೇಸ್ತೀನ್ ದಾಳಿ..ಆಕಾಶದಲ್ಲೇ ಅಪ್ಪಚ್ಚಿಯಾದ ಎದುರಾಳಿ ದೇಶದ ರಾಕೆಟ್, ಕ್ಷಿಪಣಿ
ವಿಡಿಯೋ ಹರಿಬಿಟ್ಟ ವೈದ್ಯೆ
ವೈದ್ಯೆಗೆ ಕೋವಿಡ್ ಸೋಂಕು ಉಲ್ಭಣಗೊಳ್ಳುತ್ತಿದ್ದಂತೆ ಆಸ್ಪತ್ರೆಯಿಂದಲೇ ಏಪ್ರಿಲ್ 17ರಂದು ವಿಡಿಯೋ ಮಾಡಿ ತಮ್ಮ ಗಂಡನಿಗೆ ಕಳುಹಿಸಿದ್ದರು. ಅದರಲ್ಲಿ ಕೊರೊನಾ ಸೋಂಕು ಯಾವುದೇ ಕಾರಣಕ್ಕಾಗಿ ಹಗುರವಾಗಿ ತೆಗೆದುಕೊಳ್ಳಬೇಡಿ. ಕೊರೊನಾ ಆರೋಗ್ಯದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತಿದ್ದು, ಇದರಿಂದ ಕೆಲವರಿಗೆ ಮಾತನಾಡಲು ಸಹ ಕಷ್ಟವಾಗುತ್ತಿದೆ. ಈ ಸಂದೇಶವನ್ನ ಎಲ್ಲರಿಗೂ ತಿಳಿಸಿ ಎಂದು ಹೇಳಿಕೊಂಡಿದ್ದಾರೆ.
ಮನೆಯಿಂದ ಹೊರಗಡೆ ಹೋಗುವಾಗ ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ. ಯಾವುದೇ ಕಾರಣಕ್ಕೂ ಕೊರೊನಾ ಲಘುವಾಗಿ ತೆಗೆದುಕೊಂಡು ನೀವು ಹಾಗೂ ಇತರರ ಪ್ರಾಣಕ್ಕೆ ಮುಳುವಾಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.