ETV Bharat / bharat

ಅಂಚೆ ಕಚೇರಿ ಖಾಸಗೀಕರಣ ಇಲ್ಲ- ಕೇಂದ್ರ ಸರ್ಕಾರ: ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ - Post Office Bill 2023

2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಅಂಚೆ ಕಚೇರಿ ತಿದ್ದುಪಡಿ ಮಸೂದೆ
ಅಂಚೆ ಕಚೇರಿ ತಿದ್ದುಪಡಿ ಮಸೂದೆ
author img

By ETV Bharat Karnataka Team

Published : Dec 4, 2023, 8:18 PM IST

ನವದೆಹಲಿ: ದೇಶದ ಅತ್ಯಂತ ಹಳೆಯ ಸೇವೆಯಾದ ಅಂಚೆ ಕಚೇರಿಯನ್ನು ಖಾಸಗೀಕರಣ ಮಾಡುವುದಿಲ್ಲ. ಬದಲಿಗೆ ದೇಶಾದ್ಯಂತ ಸುಮಾರು 5 ಸಾವಿರ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 5746 ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

125 ವರ್ಷಗಳ ಹಿಂದಿನ (1898) ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸಿ, ಹೊಸದಾದ ವ್ಯವಸ್ಥೆಯನ್ನು ಜಾರಿಗೆ ತರುವ ಅಂಚೆ ಕಚೇರಿ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ. ಈ ವೇಳೆ ನಡೆದ ಚರ್ಚೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಅಂಚೆ ಕಚೇರಿಗಳ ಸೇವೆಗಳನ್ನು ವಿಸ್ತರಿಸುವುದು ಮಸೂದೆಯ ಗುರಿಯಾಗಿದೆ. ಸೇವಾ ನಿಯಮಗಳು ಬದಲಾದ ಕಾರಣ, 1898 ರಲ್ಲಿ ಜಾರಿಗೆ ತರಲಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅಂಚೆ ಸೇವೆಗಳು ವಿಸ್ತರಣೆ: ಅಂಚೆ ಸೇವೆಗಳು, ಕಚೇರಿಗಳು ಮತ್ತು ಪೋಸ್ಟ್‌ಮ್ಯಾನ್‌ಗಳು ಕೇವಲ ಅಂಚೆಗಳಲ್ಲಿ ಬಂದ ಪತ್ರಗಳನ್ನು ವಿತರಣೆ ಮಾಡುವ ಕಾಲ ಈಗಿಲ್ಲ. ಕಳೆದ ಒಂಬತ್ತೂವರೆ ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಅಂಚೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಇದರ ಸೇವೆಯನ್ನು ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವಾರು ಹೊಸ ಅಂಚೆ ಕಚೇರಿಗಳನ್ನು ಸ್ಥಾಪಿಸಿದೆ ಎಂದು ಅವರು ಮಾಹಿತಿ ನೀಡಿದರು.

ಅಂಚೆ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿಲ್ಲ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಸತ್ಯವಲ್ಲ. ಈ ಹಿಂದಿನ ಕಾಂಗ್ರೆಸ್​ ಸರ್ಕಾರ ಅಂಚೆ ಕಚೇರಿಗಳನ್ನು ಮುಗಿಸುವ ಚಿಂತನೆ ನಡೆಸಿತ್ತು. 2004 ರಿಂದ 2014ರ ವರೆಗೆ 660 ಅಂಚೆ ಕಚೇರಿಗಳನ್ನು ಮುಚ್ಚಲಾಗಿದೆ. ಆದರೆ, 2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಯೋಜನೆ ಪ್ರಕ್ರಿಯೆಯಲ್ಲಿದೆ ಎಂದು ಅಂಕಿ ಅಂಶಗಳ ಸಮೇತ ಉತ್ತರಿಸಿದರು.

ಬ್ಯಾಂಕಿಂಗ್​ ವ್ಯವಸ್ಥೆಗೆ ಜೋಡಣೆ: ಇದಲ್ಲದೆ, 1.6 ಲಕ್ಷ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಬ್ಯಾಂಕಿಂಗ್​ನೊಂದಿಗೆ ಜೋಡಿಸಲಾಗಿದೆ. 434 ಅಂಚೆ ಕಚೇರಿಗಳು 1.25 ಕೋಟಿಗೂ ಹೆಚ್ಚು ಪಾಸ್‌ಪೋರ್ಟ್ ಅರ್ಜಿಗಳನ್ನು ರವಾನಿಸಿದ್ದರೆ, 13,500 ಪೋಸ್ಟ್​ ಆಫೀಸ್​ ಆಧಾರ್​ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಬ್ಯಾಂಕಿಂಗ್​ ವ್ಯವಸ್ಥೆಯಂತೆ ಕೆಲಸ ಮಾಡುವ ಅಂಚೆ ಕಚೇರಿಗಳು ಮಹಿಳೆಯರಿಗಾಗಿ 3.5 ಕೋಟಿ ಖಾತೆಗಳನ್ನು ಆರಂಭಿಸಿವೆ. ಸಾಮಾಜಿಕ ಹೊಣೆಗಾರಿಕೆ ಮೆರೆಯುವ ಅಂಚೆ ಸೇವೆಗಳು ಕೈಗೆಟಕುವ ದರದಲ್ಲಿವೆ ಎಂದು ಹೇಳಿದರು.

ಇದನ್ನೂ ಓದಿ: 370ನೇ ವಿಧಿ ರದ್ದು ಪ್ರಕರಣ: ಡಿಸೆಂಬರ್​ 2ನೇ ವಾರದಲ್ಲಿ ಸುಪ್ರೀಂಕೋರ್ಟ್​ನಿಂದ ತೀರ್ಪು ಪ್ರಕಟ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.