ETV Bharat / bharat

ನೋಟ್​ ಬ್ಯಾನ್​ಗೆ 5 ವರ್ಷ: ದೇಶದಲ್ಲಿ ನಗದು ವ್ಯವಹಾರದ ಜೊತೆಗೆ ಡಿಜಿಟಲ್ ಪೇಮೆಂಟ್​​ ಹೆಚ್ಚಳ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

2016 ನವೆಂಬರ್ 8ಕ್ಕೆ ಕೇಂದ್ರ ಸರ್ಕಾರದ ನೋಟ್​ ಬ್ಯಾನ್​ ಪ್ರಕ್ರಿಯೆಗೆ ಐದು ವರ್ಷ ತುಂಬಿದ್ದು, ಪ್ರಸ್ತುತ ಡಿಜಿಟಲ್ ಪಾವತಿ ಹೆಚ್ಚಾಗಲು ಕಾರಣವಾಗಿದೆ. ಇದರ ಜೊತೆಗೆ ನಗದು ವ್ಯವಹಾರವೂ ಕೂಡಾ ಏರುಗತಿಯಲ್ಲಿದೆ.

Post demonetisation, notes in circulation on rise; so are digital payments
ನೋಟ್​ ಬ್ಯಾನ್​ಗೆ ಐದು ವರ್ಷ: ನಗದು ವ್ಯವಹಾರದೊಂದಿಗೆ, ಡಿಜಿಟಲ್ ಪೇಮೆಂಟ್​​ ಕೂಡಾ ಹೆಚ್ಚಳ
author img

By

Published : Nov 7, 2021, 9:27 PM IST

ನವದೆಹಲಿ: ನೋಟ್​​ ಬ್ಯಾನ್ ಆಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ, ಹಣಕಾಸು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ.

ನೋಟ್​ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ನಗದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿದ್ದು, ಪ್ರಸ್ತುತ ನಗದು ವಹಿವಾಟು ಹೆಚ್ಚಾಗುತ್ತಿದೆ. ಇದರ ಜೊತೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ.

ಅಂದಹಾಗೆ, ನೋಟ್ ಬ್ಯಾನ್ ಮಾಡಿದ ಉದ್ದೇಶ ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಿಸುವುದು ಮತ್ತು ಕಪ್ಪು ಹಣವನ್ನು ಹೊರಕ್ಕೆ ತರುವುದೇ ಆಗಿತ್ತು. ಈಗ ಡಿಜಿಟಲ್ ಪಾವತಿ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದು, ಎರಡೂ ಉದ್ದೇಶಗಳು ಬಹುಪಾಲು ಈಡೇರಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಕೋವಿಡ್ ಆವರಿಸಿದ್ದ ಕಾರಣದಿಂದ ಸಾಕಷ್ಟು ಮಂದಿ ಹಣದ ಉಳಿತಾಯಕ್ಕೆ ಒಲವು ತೋರಿದ್ದರು. ಕಳೆದ ಹಣಕಾಸು ವರ್ಷದಲ್ಲಿ ನೋಟುಗಳು ಚಲಾವಣೆ ಹೆಚ್ಚಾಗಿತ್ತು ಎಂದು ತಿಳಿದುಬಂದಿತ್ತು.

Post demonetisation, notes in circulation on rise; so are digital payments
ನಿಷೇಧಕ್ಕೊಳಗಾದ 500 ರೂಪಾಯಿ ಮುಖಬೆಲೆಯ ನೋಟು

ಯುಪಿಐ ಪಾರುಪತ್ಯ:

ಅಧಿಕೃತ ಮಾಹಿತಿಯಂತೆ, ಡೆಬಿಟ್ ಕಾರ್ಡ್‌ಗಳು, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಸೇರಿದಂತೆ ವಿವಿಧ ಮೂಲಗಳು ಡಿಜಿಟಲ್ ಪಾವತಿ ಹೆಚ್ಚಾಗಲು ಕಾರಣವಾಗಿದ್ದವು. ಈಗಲೂ ಕೂಡಾ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿರುವ ಯುಪಿಐ ಡಿಜಿಟಲ್ ಪೇಮೆಂಟ್ ವಿಭಾಗದಲ್ಲಿ ದಾಖಲೆ ಸೃಷ್ಟಿಸುವತ್ತ ಮುನ್ನುಗ್ಗುತ್ತಿದೆ.

ಇತ್ತೀಚಿನ ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ನವೆಂಬರ್ 4, 2016ರಂದು 17.74 ಲಕ್ಷ ಕೋಟಿ ರೂಪಾಯಿಗಳಿದ್ದು, ಅಕ್ಟೋಬರ್ 29, 2021ರಲ್ಲಿ 29.17 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಅಕ್ಟೋಬರ್ 30, 2020ರ ವೇಳೆಗೆ 26.88 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ, ಅಕ್ಟೋಬರ್ 29, 2021ರ ವೇಳೆಗೆ 2,28,963 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.

ಮೌಲ್ಯ, ಪ್ರಮಾಣದಲ್ಲೂ ಏರಿಕೆ:

ಚಲಾವಣೆಯಾಗುತ್ತಿರುವ ನೋಟುಗಳ ಮೌಲ್ಯ ಮತ್ತು ಪ್ರಮಾಣದಲ್ಲೂ ಏರಿಕೆಯಾಗಿದೆ. 2019-20ರಲ್ಲಿ ನೋಟುಗಳ ಮೌಲ್ಯ ಮತ್ತು ಪ್ರಮಾಣ ಕ್ರಮವಾಗಿ ಶೇಕಡಾ 14.7 ಮತ್ತು ಶೇಕಡಾ 6.6ರಷ್ಟಿತ್ತು. 2020-21ರ ವೇಳೆಯಲ್ಲಿ ಬ್ಯಾಂಕ್​ ನೋಟುಗಳ ಮೌಲ್ಯ ಶೇಕಡಾ 16.8ಕ್ಕೆ ಹಾಗೂ ಬ್ಯಾಂಕ್ ನೋಟುಗಳ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ.

ನೋಟ್​ ಬ್ಯಾನ್​ನ ಹಿಂದಿನ ತಿಂಗಳಾದ ಅಕ್ಟೋಬರ್ 2014ರಿಂದ ಅಕ್ಟೋಬರ್ 2016ರವರೆಗೆ ಚಲಾವಣೆಯಲ್ಲಿರುವ ನೋಟುಗಳ ಬೆಳವಣಿಗೆ ದರ ಶೇಕಡಾ 14.51ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ಜಿಡಿಪಿ ಮೇಲೂ ಪರಿಣಾಮ:

ಕಳೆದ ಸಂಸತ್ತಿನ ಅಧಿವೇಶನದಲ್ಲಿ, ನೋಟುಗಳ ಪ್ರಮಾಣವು ಜಿಡಿಪಿ ಬೆಳವಣಿಗೆ, ಹಣದುಬ್ಬರ ಮತ್ತು ಬ್ಯಾನ್ ಆದ ನೋಟುಗಳ ಬದಲಿ ನೋಟುಗಳು ಮತ್ತು ನಗದುರಹಿತ ಪಾವತಿ ವಿಧಾನಗಳ ಬೆಳವಣಿಗೆಯನ್ನು ಅವಲಂಬಿಸಿದೆ ಎಂದು ಸರ್ಕಾರ ಹೇಳಿತ್ತು. ಪ್ರಸ್ತುತ ಭಾರತದಲ್ಲಿ ಸಕಾರಾತ್ಮಕ ಬೆಳವಣಿಗೆ ದರವಿದೆ.

2016ರಲ್ಲಿ ಯುಪಿಐ ಅನ್ನು ಅನಾವರಣಗೊಳಿಸಿದ್ದು, ವಹಿವಾಟು ತಿಂಗಳಿಂದ ತಿಂಗಳಿಗೆ ಏರಿಕೆ ಕಾಣುತ್ತಿವೆ. 2021ರ ಅಕ್ಟೋಬರ್​ನಲ್ಲಿ ಒಟ್ಟು 7.71 ಲಕ್ಷ ಕೋಟಿ ಅಥವಾ ನೂರು ಬಿಲಿಯನ್ ಅಮೆರಿಕನ್ ಡಾಲರ್​ಗಿಂತ ಹೆಚ್ಚು ವಹಿವಾಟು ಯುಪಿಐ ಮೂಲಕ ನಡೆಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ 421 ಕೋಟಿ ವ್ಯವಹಾರಗಳನ್ನು ನಡೆಸಲಾಗಿದೆ.

ನಗದೇ ಪ್ರಧಾನ:

ಜನರು ತಮ್ಮ ವ್ಯವಹಾರವನ್ನು ಯಾವ ರೀತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ 2018 ಮತ್ತು ಜನವರಿ 2019ರ ನಡುವೆ ಆರು ನಗರಗಳಲ್ಲಿ ಸಮೀಕ್ಷೆಯೊಂದನ್ನು ಮಾಡಿತ್ತು. ಈ ಸಮೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 2021ರ ಏಪ್ರಿಲ್​ನಲ್ಲಿ ಪ್ರಕಟಿಸಲಾಗಿತ್ತು.

ಈ ಸಮೀಕ್ಷೆಯ ವರದಿಯ ಪ್ರಕಾರ, ಡಿಜಿಟಲ್ ಪಾವತಿ ಇದ್ದರೂ ಈಗಲೂ ಜನರು ಪ್ರಧಾನವಾಗಿ ನಗದು ವ್ಯವಹಾರವನ್ನು ಮಾಡಲು ಬಯಸುತ್ತಾರೆ. ಅತ್ಯಂತ ದೊಡ್ಡ ಮೊತ್ತದ ವಹಿವಾಟಿಗಾಗಿ ಮಾತ್ರವೇ ಆಗಾಗ ಆನ್​​ಲೈನ್ ಪೇಮೆಂಟ್​​ ಅನ್ನು ಬಳಸಲಾಗುತ್ತಿದ್ದು, 500 ರೂಪಾಯಿಯೊಳಗಿನ ವ್ಯವಹಾರಕ್ಕೆ ನಗದನ್ನೇ ಹೆಚ್ಚಾಗಿ ಬಳಸುತ್ತಿದ್ದರು ಎಂದು ತಿಳಿದುಬಂದಿತ್ತು.

2016 ನವೆಂಬರ್ 8 ರಾತ್ರಿ 8:15ರ ಸುಮಾರಿಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ಚಲಾವಣೆಯಲ್ಲಿದ್ದ 500 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರು. 'ಬದಲಿ ಹಣಕ್ಕಾಗಿ' ಜನರು ಬ್ಯಾಂಕ್ ಮುಂದೆ ಮತ್ತು ಎಟಿಎಂಗಳ ಮುಂದೆ ಸಾಲು ಸಾಲು ನಿಂತಿದ್ದರು. ಸರ್ಕಾರದ ಈ ನಿರ್ಧಾರದಿಂದ ಎಲ್ಲಾ ವಲಯಗಳ ಮೇಲೆ ನೇರ ಪರಿಣಾಮ ಬೀರಿತ್ತು. ಹಲವಾರು ಮಂದಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು.

ನೋಟ್ ಬ್ಯಾನ್ ಆದ ನಂತರ ಕೇಂದ್ರ ಸರ್ಕಾರ ಹೊಸ 500 ರೂಪಾಯಿ, 2000 ಸಾವಿರ ರೂಪಾಯಿಯ ನೋಟುಗಳನ್ನು ಪರಿಚಯ ಮಾಡಿತ್ತು. ನಂತರದ ಕೆಲವು ದಿನಗಳಲ್ಲಿ 200 ರೂಪಾಯಿ ನೋಟನ್ನು ಪರಿಚಯ ಮಾಡಲಾಗಿತ್ತು.

ಈಗ ಸದ್ಯಕ್ಕೆ ಮಾರ್ಚ್​ 31ರ ಅಂಕಿ ಅಂಶದಂತೆ ಚಲಾವಣೆಯಾಗುತ್ತಿರುವ 500, 2000 ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯದ ಶೇಕಡಾ 85.7ರಷ್ಟಿದೆ. ಸದ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ 2, 5, 10, 20,50,100,200,500 ಮತ್ತು 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ.

ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಬೆಂಗಳೂರಿನಲ್ಲಿ ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.