ಮುಂಬೈ(ಮಹಾರಾಷ್ಟ್ರ): ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ಬಂಧನವಾಗಿದ್ದು, ಇದರ ಬೆನ್ನಲ್ಲೇ ಅನೇಕ ಮಹತ್ವದ ವಿಷಯ ಬಹಿರಂಗಗೊಳ್ಳುತ್ತಿವೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತೊಂದು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ 'ಅಶ್ಲೀಲ ಚಿತ್ರ'ಗಳ ಚಿತ್ರೀಕರಣ ಆರಂಭಗೊಂಡಿತ್ತು ಎಂದಿದ್ದಾರೆ.
ಮಹಿಳೆಯರನ್ನ ತಮ್ಮ ಬಲೆಗೆ ಬೀಳಿಸಿಕೊಂಡು ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಮಾಡಲಾಗ್ತಿದೆ. ಇದೀಗ ರಾಜ್ಯದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಅಧಿಕಾರದಲ್ಲಿದ್ದು, ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜತೆಗೆ ರಾಜ್ ಕುಂದ್ರಾ ಬಂಧನ ಮಾಡುವ ಮೂಲಕ ಯಶಸ್ವಿಯಾಗಿದೆ ಎಂದಿದ್ದಾರೆ. ಉದ್ಯಮಿ ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆ ಪೂನಂ ಪಾಂಡೆ ಸೇರಿದಂತೆ ಅನೇಕರು ಮಹತ್ವದ ವಿಚಾರ ಹೊರಹಾಕುತ್ತಿದ್ದಾರೆ.
ಮತ್ತೋರ್ವ ಆರೋಪಿ ಬಂಧನ
ರಾಜ್ ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಒಡಿಶಾದಲ್ಲಿ ಮತ್ತೋರ್ವ ವ್ಯಕ್ತಿಯ ಬಂಧನ ಮಾಡಿದ್ದು, ಆತನನ್ನು ಇದೀಗ ಹೆಚ್ಚಿನ ವಿಚಾರಣೆಗೋಸ್ಕರ ಮುಂಬೈಗೆ ಕರೆದು ತರುವ ಸಾಧ್ಯತೆ ಇದೆ.