ನವದೆಹಲಿ: ದೇಶದಲ್ಲಿ ಕೋವಿಡ್ -19 ಲಸಿಕೆ ಉತ್ಪಾದನೆ ಹೆಚ್ಚಿಸಲು ತಯಾರಕರಿಗೆ ಆರ್ಥಿಕ ನೆರವು ನೀಡುವ ಸರ್ಕಾರದ ಪ್ರಯತ್ನ ಲಸಿಕೆ ತಯಾರಿಸುತ್ತಿರುವ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಶ್ಲಾಘಿಸಿದೆ.
"ಭಾರತದಲ್ಲಿನ ಲಸಿಕೆ ಉದ್ಯಮದ ಪರವಾಗಿ, ನಿಮ್ಮ ನಿರ್ಣಾಯಕ ನೀತಿ ಬದಲಾವಣೆಗಳು ಮತ್ತು ಭಾರತದಲ್ಲಿ ಲಸಿಕೆ ಉತ್ಪಾದನೆ ಮತ್ತು ವಿತರಣೆಗೆ ಸಹಾಯ ಮಾಡುವ ತ್ವರಿತ ಆರ್ಥಿಕ ಸಹಾಯಕ್ಕಾಗಿ ಶ್ರೀ ನರೇಂದ್ರಮೋದಿ ಜಿ, ಸೀತಾರಾಮನ್ ಜಿ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಮತ್ತು ಅವರ ಕ್ರಮವನ್ನು ಶ್ಲಾಘಿಸುತ್ತೇನೆ" ಎಂದು ಎಸ್‌ಐಐ ಸಿಇಒ ಆದರ್ ಪೂನವಾಲಾ ಟ್ವೀಟ್ ಮಾಡಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೋವಿಡ್ -19 ಲಸಿಕೆ ಮುಕ್ತಗೊಳಿಸಿದ ಸರ್ಕಾರ ಸರಬರಾಜು ಹೆಚ್ಚಿಸಲು, ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ನ ಲಸಿಕೆ ತಯಾರಕರಿಗೆ ಮುಂಗಡವಾಗಿ ಸುಮಾರು 4,500 ಕೋಟಿ ರೂ. ನೀಡುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಐಐಗೆ 3,000 ಕೋಟಿ ರೂ. ಮತ್ತು ಭಾರತ್ ಬಯೋಟೆಕ್‌ಗೆ ಸುಮಾರು 1,500 ಕೋಟಿ ರೂ. ಸರ್ಕಾರ ನೀಡಲಿದೆ.
ಜುಲೈ ವೇಳೆಗೆ ಒಂದು ಡೋಸ್ಗೆ 150 ರೂ.ನಂತೆ ಎಸ್‌ಐಐ 20 ಕೋಟಿ ಡೋಸ್‌ಗಳನ್ನು ಪೂರೈಸಲಿದ್ದು, ಭಾರತ್ ಬಯೋಟೆಕ್ 9 ಕೋಟಿ ಡೋಸ್‌ಗಳನ್ನು ಪೂರೈಸಲಿದೆ.