ETV Bharat / bharat

ನಿಮಗಿಂತ ನಿಮ್ಮನ್ನಾಳುವ ರಾಜಕಾರಣಿಗಳ ಜೀವಿತಾವಧಿ ಹೆಚ್ಚು: ಸಂಶೋಧನೆ

ಉನ್ನತ ಶಿಕ್ಷಣ ಪಡೆದವರು ಹಾಗೂ ಸಾಮಾನ್ಯ ಜನರಿಗಿಂತ ಬಹಳ ಹೆಚ್ಚು ಆದಾಯ ಹೊಂದಿರುವವರು ಅಂದರೆ ಅದು ರಾಜಕಾರಣಿಗಳು. ತಾವು ಪ್ರತಿನಿಧಿಸುವ ಜನರಿಗಿಂತ ಇವರು ಯಾವಾಗಲೂ 'ಭಿನ್ನರಾಗಿರುತ್ತಾರೆ' ಎಂಬ ಆರೋಪಗಳಿರುವುದು ಗೊತ್ತೇ ಇದೆ. ಜೊತೆಗೆ ತಮ್ಮನ್ನು ಆರಿಸಿ ತಂದ ಜನರ ಕಲ್ಯಾಣಕ್ಕಾಗಿ ಇವರು ತುಂಬಾ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಆರೋಪಗಳಿವೆ.

Politicians live longer than the populations they represent: new research

author img

By

Published : Jul 6, 2022, 1:05 PM IST

ಲಂಡನ್: 1980 ರಿಂದೀಚೆಗೆ ಬಹುತೇಕ ರಾಷ್ಟ್ರಗಳಲ್ಲಿ ಅಸಮಾನತೆ ಹಾಗೂ ಸಂಪತ್ತಿನ ಅಸಮಾನ ಹಂಚಿಕೆಗಳು ಹೆಚ್ಚುತ್ತಿವೆ. ಅತಿ ಹೆಚ್ಚು ಆದಾಯ ಗಳಿಸುವವರ ಪಟ್ಟಿಯಲ್ಲಿ ಅತಿ ಉನ್ನತ ಸ್ಥಾನದಲ್ಲಿರುವ ಶೇ 1 ರಷ್ಟು ಜನ ವಿಶ್ವದ ಶೇ 20 ರಷ್ಟು ಆದಾಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಆದರೆ ಈ ಅಸಮಾನತೆ ಎಂಬುದು ಕೇವಲ ಹಣ ಸಂಪತ್ತಿಗೆ ಸೀಮಿತವಲ್ಲ. ಶಿಕ್ಷಣ ಹಾಗೂ ಆರೋಗ್ಯದ ವಿಷಯದಲ್ಲಿಯೂ ಸಿರಿವಂತರು ಹೆಚ್ಚು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಹೆಚ್ಚು ಕಾಲ ಜೀವಿಸುತ್ತಾರೆ ಕೂಡ. ಅಮೆರಿಕದ ಬಗ್ಗೆ ನೋಡುವುದಾದರೆ, ಅತಿ ಹೆಚ್ಚು ಸಿರಿವಂತರ ಪಟ್ಟಿಯಲ್ಲಿರುವ ಉನ್ನತ ಶೇ 1 ರಷ್ಟು ಜನ ಅತ್ಯಂತ ಬಡವರಿಗಿಂತ ಸುಮಾರು 15 ವರ್ಷ ಹೆಚ್ಚು ಕಾಲ ಜೀವಿಸುತ್ತಾರೆ.

ಉನ್ನತ ಶಿಕ್ಷಣ ಪಡೆದವರು ಹಾಗೂ ಸಾಮಾನ್ಯ ಜನರಿಗಿಂತ ಬಹಳ ಹೆಚ್ಚು ಆದಾಯ ಹೊಂದಿರುವವರು ಅಂದರೆ ಅದು ರಾಜಕಾರಣಿಗಳು. ತಾವು ಪ್ರತಿನಿಧಿಸುವ ಜನರಿಗಿಂತ ಇವರು ಯಾವಾಗಲೂ ಭಿನ್ನರಾಗಿರುತ್ತಾರೆ ಎಂಬ ಆರೋಪಗಳಿರುವುದು ಗೊತ್ತೇ ಇದೆ. ಜೊತೆಗೆ ತಮ್ಮನ್ನು ಆರಿಸಿ ತಂದ ಜನರ ಕಲ್ಯಾಣಕ್ಕಾಗಿ ಇವರು ತುಂಬಾ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಆರೋಪಗಳಿವೆ.

ಇತ್ತಿಚೆಗೆ ಅಮೆರಿಕದಲ್ಲಿ ನಡೆಸಲಾದ ಸಂಶೋಧನೆಯೊಂದರ ಪ್ರಕಾರ- ರಾಜಕಾರಣಿಗಳ ಜೀವಿತಾವಧಿ ಮತ್ತು ಸಾಮಾನ್ಯ ಜನರ ಜೀವಿತಾವಧಿಯನ್ನು ಹೋಲಿಸಿದರೆ, ರಾಜಕಾರಣಿಗಳು ಅವರು ಪ್ರತಿನಿಧಿಸುವ ಜನಸಂಖ್ಯೆಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂಬುದು ಬೆಳಕಿಗೆ ಬಂದಿದೆ.

ಆಸ್ಟ್ರೇಲಿಯಾ, ಆಸ್ಟ್ರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್, ನ್ಯೂಜಿಲೆಂಡ್, ಸ್ವಿಟ್ಜರ್‌ಲ್ಯಾಂಡ್, ಯುಕೆ ಮತ್ತು ಯುಎಸ್ ಈ 11 ಅಧಿಕ ಆದಾಯದ ದೇಶಗಳ ಡೇಟಾ ಆಧರಿಸಿ ತಯಾರಿಸಲಾದ ವಿಶ್ಲೇಷಣೆಯು ಹೆಚ್ಚು ಸಮಗ್ರವಾಗಿದೆ.

ಈ ಹಿಂದೆ ಆರೋಗ್ಯ ಅಸಮಾನತೆ ಮತ್ತು ದೀರ್ಘಾವಧಿ ಜೀವಿತಾವಧಿಯನ್ನು ಪತ್ತೆಹಚ್ಚುವ ಇದೇ ರೀತಿಯ ಅಧ್ಯಯನಗಳು ಸ್ವೀಡನ್ ಮತ್ತು ನೆದರ್ಲೆಂಡ್​ನಂಥ ಕೆಲವೇ ದೇಶಗಳ ಮೇಲೆ ಕೇಂದ್ರೀಕೃತವಾಗಿದ್ದವು.

ಸಂಶೋಧನಾ ಅಧ್ಯಯನವು 57,000 ಕ್ಕೂ ಹೆಚ್ಚು ರಾಜಕಾರಣಿಗಳನ್ನು ಒಳಗೊಂಡಿದ್ದು, ಕೆಲ ಸಂದರ್ಭಗಳಲ್ಲಿ ಎರಡು ಶತಮಾನಗಳ ಹಿಂದಿನ ಐತಿಹಾಸಿಕ ಡೇಟಾವನ್ನು ಸಹ ಬಳಸಲಾಗಿದೆ. ಅಸಮಾನತೆಗಳ ಬಗ್ಗೆ ತಿಳಿಯಲು ಪ್ರತಿಯೊಬ್ಬ ರಾಜಕಾರಣಿಯನ್ನು ಅವರ ದೇಶ, ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ಸಾಮಾನ್ಯ ಜನರ ಮರಣದ ಅಂಕಿಅಂಶಗಳಿಗೆ ಹೊಂದಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.