ETV Bharat / bharat

ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಭರ್ಜರಿ ತಯಾರಿ - ಎಸ್​ಪಿ ಮತ್ತು ಆಎಲ್​ಡಿ ಪಕ್ಷಗಳಿಂದ ಜಂಟಿ ರ್ಯಾಲಿ

ಮೀರತ್​ನಲ್ಲಿ ಇಂದು ಬೃಹತ್​ ಜಂಟಿ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿರುವುದು ನಾಯಕರನ್ನು ಹುರಿದುಂಬಿಸಿದೆ. ಇನ್ನೊಂದೆಡೆ ಗೋರಖ್​ಪುರದಲ್ಲಿ ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ..

uttar pradesh assembly elections
ರಾಜಕೀಯ ಪಕ್ಷಗಳ ಭರ್ಜರಿ ತಯಾರಿ
author img

By

Published : Dec 7, 2021, 3:40 PM IST

ಮೀರತ್(ಉತ್ತರಪ್ರದೇಶ) : ಉತ್ತರಪ್ರದೇಶ ವಿಧಾನಸಭೆ ಚುನಾವಣಾ ಕಣ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಮಧ್ಯೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ.

ಉತ್ತರಪ್ರದೇಶದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪ್ರಮುಖ ಪ್ರತಿಪಕ್ಷವಾದ ಸಮಾಜವಾದಿ ಪಕ್ಷ(ಎಸ್​ಪಿ) ಮತ್ತು ರಾಷ್ಟ್ರೀಯ ಲೋಕದಳ(ಆರ್​ಎಲ್​ಡಿ) ಮಧ್ಯೆ ಮೈತ್ರಿ ಮಾಡಿಕೊಳ್ಳಲಾಗಿದೆ.

  • #WATCH | PM Narendra Modi greets the crowd at the event in Gorakhpur where he inaugurated several development projects today. CM Yogi Adityanath was also present with him at the occasion. pic.twitter.com/RETQtrbaGl

    — ANI UP (@ANINewsUP) December 7, 2021 " class="align-text-top noRightClick twitterSection" data=" ">

ಈ ಹಿನ್ನೆಲೆಯಲ್ಲಿ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿರುವ ಉಭಯ ಪಕ್ಷಗಳ ನಾಯಕರು, ಇಂದು ಮೀರತ್​ನಲ್ಲಿ ಬೃಹತ್​ ಜಂಟಿ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿರುವುದು ನಾಯಕರನ್ನು ಹುರಿದುಂಬಿಸಿದೆ.

ಇದನ್ನೂ ಓದಿ: ಯಡಿಯೂರಪ್ಪ ಬೆಂಬಲ ನೀಡಿ ಎಂದಿದ್ದಾರಷ್ಟೇ, ಬಿಜೆಪಿ ಜತೆಗೆ ಮೈತ್ರಿ ಇಲ್ಲ: ಹೆಚ್​ಡಿಕೆ ಸ್ಪಷ್ಟನೆ

ಇನ್ನೊಂದೆಡೆ ಬಿಜೆಪಿ ನಾಯಕರೂ ಕೂಡ ಚುನಾವಣೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಗೋರಖ್​ಪುರದಲ್ಲಿ ಬೃಹತ್​ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಜೊತೆಗಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.